ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್ ರಿಲೀಫ್: ಮಧ್ಯರಾತ್ರಿ ಮಹತ್ವದ ಆದೇಶ ಹೊರಡಿಸಿದ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಏಪ್ರಿಲ್ 25: ಮಾರಣಾಂತಿಕ ಕೋವಿಡ್-19 ತಡೆಗಟ್ಟಲು ಸಾಮಾಜಿಕ ಅಂತರ ಒಂದೇ ಉಪಾಯ ಅಂತ್ಹೇಳಿ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಭಾರತದಲ್ಲಿ ಲಾಕ್ ಡೌನ್ ಘೋಷಣೆಯಾಗಿ ಒಂದು ತಿಂಗಳು ಕಳೆದಿದೆ. ಅತ್ತ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಗಣನೀಯವಾಗಿ ಏರುತ್ತಲೇ ಇದೆ. ಹೀಗಿದ್ದರೂ, ಕೇಂದ್ರ ಸರ್ಕಾರ ಒಂದು ಮಹತ್ವದ ಆದೇಶ ಹೊರಡಿಸಿದೆ.

Recommended Video

ಹಿಂದೂ ಮುಸ್ಲಿಂ ಒಗ್ಗಟ್ಟಾದ್ರೆ ಮಾತ್ರ ಕೊರೊನಾ ವಿರುದ್ಧದ ಹೋರಾಟ ಫಲಿಸುತ್ತೆ | Oneindia Kannada

ಲಾಕ್ ಡೌನ್ ನಿಂದ ರಿಲೀಫ್ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಜ್ಜೆ ಇಟ್ಟಿದ್ದು, ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಿದೆ. ಮಧ್ಯರಾತ್ರಿ ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಆದೇಶದ ಅನ್ವಯ, ಎಲ್ಲಾ ರೀತಿಯ ಅಂಗಡಿಗಳನ್ನು ತೆರೆಯಬಹುದಾಗಿದೆ.

ಆದರೆ, ಮಾರ್ಕೆಟ್ ಕಾಂಪ್ಲೆಕ್ಸ್, ಮಲ್ಟಿ ಬ್ರ್ಯಾಂಡ್ ಮತ್ತು ಸಿಂಗಲ್ ಬ್ರ್ಯಾಂಡ್ ಮಾಲ್ ಗಳಿಗೆ ಈ ಆದೇಶ ಅನ್ವಯ ಆಗುವುದಿಲ್ಲ.

ಯಾವ ಅಂಗಡಿಗಳು ತೆರೆಯಬಹುದು.?

ಯಾವ ಅಂಗಡಿಗಳು ತೆರೆಯಬಹುದು.?

ಮುನಿಸಿಪಾಲ್ ಕಾರ್ಪೊರೇಷನ್ ಮತ್ತು ಮುನಿಸಿಪಾಲಿಟಿ ಲಿಮಿಟ್ ಒಳಗೆ ಬರುವ ಮತ್ತು ಆಯಾ ರಾಜ್ಯಗಳ ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳ ಕಾಯ್ದೆ ಅಡಿ ಪರವಾನಗಿ ಪಡೆದಿರುವ ಎಲ್ಲಾ ಅಂಗಡಿಗಳು ಇಂದಿನಿಂದ ತೆರೆಯಬಹುದು. ಈ ಹಿಂದೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಮಾತ್ರ ತೆರೆಯುವ ಅವಕಾಶ ಇತ್ತು. ಆದ್ರೀಗ, ಕಾಯ್ದೆ ಅಡಿ ಬರುವ ಎಲ್ಲಾ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ಹಾಟ್ ಸ್ಪಾಟ್ ಗಳಿಗೆ ಅನ್ವಯವಾಗುವುದಿಲ್ಲ

ಹಾಟ್ ಸ್ಪಾಟ್ ಗಳಿಗೆ ಅನ್ವಯವಾಗುವುದಿಲ್ಲ

ಆದರೆ, ಹಾಟ್ ಸ್ಪಾಟ್ ಅಥವಾ ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಲಾದ ಪ್ರದೇಶಗಳಲ್ಲಿ ಯಾವುದೇ ಅಂಗಡಿಗಳು ತೆರೆಯುವ ಹಾಗಿಲ್ಲ. ರೆಡ್ ಝೋನ್ ಪ್ರದೇಶದಲ್ಲಿ ಯಾವುದೇ ಲಾಕ್ ಡೌನ್ ವಿನಾಯತಿ ಅನ್ವಯವಾಗುವುದಿಲ್ಲ.

ಹೆಚ್ಚು ಪ್ರಕರಣ ದಾಖಲಾದರೂ, ಲಾಕ್ ಡೌನ್ ಸಡಿಲಿಕೆ

ಹೆಚ್ಚು ಪ್ರಕರಣ ದಾಖಲಾದರೂ, ಲಾಕ್ ಡೌನ್ ಸಡಿಲಿಕೆ

ನಿನ್ನೆ ಒಂದೇ ದಿನ 1752 ಸೋಂಕಿತ ಪ್ರಕರಣಗಳು ಭಾರತದಲ್ಲಿ ದಾಖಲಾದವು. 24 ಗಂಟೆಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾದರೂ, ಲಾಕ್ ಡೌನ್ ಸಡಿಲಿಸಿ, ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ.

ಮುನ್ನೆಚ್ಚರಿಕೆ ಕ್ರಮ ಅಗತ್ಯ

ಮುನ್ನೆಚ್ಚರಿಕೆ ಕ್ರಮ ಅಗತ್ಯ

ಅಂಗಡಿ ಮುಂಗಟ್ಟುಗಳನ್ನು ತೆರೆದರೂ, ಕೊರೊನಾ ವೈರಸ್ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. 50% ರಷ್ಟು ಕೆಲಸಗಾರರು ಮಾತ್ರ ಅಂಗಡಿಯಲ್ಲಿದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಹಾಗೇ ಸಾಮಾಜಿಕ ಅಂತರವನ್ನು ಪಾಲಿಸಬೇಕು.

English summary
Centre allows neighbourhood shops to open in Midnight order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X