• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬುಲೆಟ್ ಟ್ರೈನ್ ವೇಗದಲ್ಲಿ ಓಡಿ ಹೋದ ಟ್ರೈನ್ ಮಿನಿಸ್ಟರ್!

|
Google Oneindia Kannada News

ನವದೆಹಲಿ, ಡಿಸೆಂಬರ್ 4; ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಇಂದು ಸಂಸತ್ ಭವನಕ್ಕೆ ಬುಲೆಟ್ ಟ್ರೈನ್ ವೇಗದಲ್ಲಿ ಓಡಿ ಬಂದ ಘಟನೆ ನಡೆಯಿತು. ಇದು, ಸಚಿವರಿಗೆ ಪಾರ್ಲಿಮೆಂಟ್ ಭವನದ ಮುಂದೆ ಕಾಯುತ್ತಾ ನಿಂತವರಿಗೆ ಆಶ್ಚರ್ಯ ಮೂಡಿಸಿದ್ದಲ್ಲದೇ, ಟ್ವಿಟ್ಟರನಲ್ಲಿ ವೈರಲ್ ಕೂಡ ಆಯಿತು.

ಬೆಳಿಗ್ಗೆ ಸಂಸತ್ ಭವನದಲ್ಲಿ ಸಂಪುಟ ಸಭೆ ನಡೆಯುತಿತ್ತು. ಅವಸರವಸರವಾಗಿ ಬಂದ ಪಿಯೂಷ್ ಗೋಯಲ್ ಅವರು, ಸಂಪುಟ ಸಭೆಯನ್ನು ತಪ್ಪಿಸಿಕೊಂಡರು. ಅವರು ತಡಮಾಡದೇ ಸಂಸತ್ ಒಳಗೆ ಭಾರೀ ವೇಗದಲ್ಲಿ ಓಡಿ ಹೋದರು.

ಅಷ್ಟಕ್ಕೂ, ಸಚಿವರು ಏಕೆ ಆ ಪರಿ ಓಡಿ ಹೋದರು ಎಂದರೆ, ಸಂಸತ್ ಒಳಗೆ ಪ್ರಶ್ನೋತ್ತರ ಕಲಾಪಕ್ಕೆ ಅವರು ಓಡಿ ಹೋಗಿ ಹಾಜರಾದರು. ವೈರಲ್ ಆದ ಚಿತ್ರವನ್ನು ಹಂಚಿಕೊಂಡವರು ಪಾಯಲ್ ಮೆಹ್ತಾ ಎನ್ನುವರು. ಬುಲೆಟ್ ಟ್ರೈನ್ ವೇಗಕ್ಕಿಂತೂ ವೇಗವಾಗಿ ಓಡಿಹೋಗುತ್ತಿರುವ ಈ ಕೇಂದ್ರ ಸಚಿವರನ್ನು ಗುರುತಿಸಿ ಎಂದು ಅವರು ಟ್ವಿಟ್ಟರನಲ್ಲಿ ಫೋಟೊ ಹಚಿಕೊಂಡಿದ್ದಾರೆ. ಅಲ್ಲದೇ ಸಚಿವರ ಕಲಾಪಕ್ಕೆ ಭಾಗವಹಿಸುವ ಆಸಕ್ತಿ ಹಾಗೂ ಅವರ ಓಡುವ ದೈಹಿಕ ಸಾಮರ್ಥ್ಯ ನನಗೆ ಇಷ್ಟವಾಯಿತು ಎಂದು ಅವರು ನಗೆ ಬೀರಿದ್ದಾರೆ.

ಗೋಯಲ್ ಅವರು ರೈಲ್ವೆ ಅಂತಹ ಮಹತ್ವದ ಖಾತೆಯ ಜೊತೆ ವಾಣಿಜ್ಯ ಖಾತೆಯನ್ನೂ ಕೂಡ ನಿಭಾಯಿಸುತ್ತಿದ್ದಾರೆ. ಸದ್ಯ ಸಂಸತ್‌ನ ಚಳಿಗಾಲದ ಅಧಿವೇಶನ ನಡೆಯುತ್ತಿದೆ.

English summary
Central Minister Piyush Goyal runs for parliment session. its viral on twitter
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X