ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ಪಡೆಯಲು ಬಿಜೆಪಿಯೇತರ ರಾಜ್ಯಗಳಿಗೆ ಹೊಸ ಐಡಿಯಾ!

|
Google Oneindia Kannada News

ನವದೆಹಲಿ, ಮೇ 24: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಹಂಚಿಕೆಯಲ್ಲಿ ತಾರತಮ್ಯ ನಡೆಯುತ್ತಿರುವ ಬಗ್ಗೆ ಆರೋಪಗಳು ಮೇಲಿಂದ ಮೇಲೆ ಕೇಳಿ ಬರುತ್ತಿವೆ. ಇದರ ಮಧ್ಯೆ ಬಿಜೆಪಿಯೇತರ ಸರ್ಕಾರ ಹೊಂದಿರುವ ರಾಜ್ಯಗಳಿಗೆ ಕೇಂದ್ರ ಸಚಿವ ಸುಬ್ರಮಣಿಯನ್ ಸ್ವಾಮಿ ಹೊಸ ಐಡಿಯಾ ಕೊಟ್ಟಿದ್ದಾರೆ.

ಬಿಜೆಪಿಯೇತರ ಸರ್ಕಾರಗಳನ್ನು ಹೊಂದಿರುವ ರಾಜ್ಯಗಳೆಲ್ಲ ಒಗ್ಗಟ್ಟಾಗಿ ಸೇರಿಕೊಂಡು ವಿದೇಶಿ ಕಂಪನಿಗಳ ಜೊತೆಗೆ ನೇರವಾಗಿ ಮಾತುಕತೆ ನಡೆಸಿರಿ. ಆಯಾ ರಾಜ್ಯಗಳಿಗೆ ಅಗತ್ಯವಿರುವ ಕೊರೊನಾವೈರಸ್ ಲಸಿಕೆಯನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಿ. ಹೀಗೆ ವಿದೇಶಗಳಿಂದ ತರಿಸಿಕೊಂಡ ಕೊವಿಡ್-19 ಲಸಿಕೆ ಖರೀದಿಯ ಬಿಲ್ ಅನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಡಿ ಎಂದು ಸಲಹೆ ನೀಡಿದ್ದಾರೆ.

Central Minister Subramanian Swamy Suggestion To Non BJP State Govts To Import Vaccine From Abroad

 ಕೊರೊನಾವೈರಸ್ ಕಾಲದಲ್ಲಿ ಕೈ ಚೆಲ್ಲಿದರಾ ಪ್ರಧಾನಮಂತ್ರಿ ಮೋದಿ!? ಕೊರೊನಾವೈರಸ್ ಕಾಲದಲ್ಲಿ ಕೈ ಚೆಲ್ಲಿದರಾ ಪ್ರಧಾನಮಂತ್ರಿ ಮೋದಿ!?

ಕೊವಿಡ್-19 ಲಸಿಕೆ ಖರೀದಿಗೆ ರಾಜ್ಯ ಸರ್ಕಾರಗಳು ಖರ್ಚು ಮಾಡಿರುವ ಹಣವನ್ನು ಪಾವತಿಸುವುದಕ್ಕೆ ರಾಜಕೀಯವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ನಿರಾಕರಿಸುವುದಕ್ಕೆ ಆಗುವುದಿಲ್ಲ ಎಂದು ಸಚಿವ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಪಂಜಾಬ್ ಸರ್ಕಾರದ ಪ್ರಯತ್ನ ವಿಫಲ:

ಕೇಂದ್ರ ಸರ್ಕಾರದ ಎದುರಿಗೆ ಅಂಗಲಾಚುವ ಬದಲು ವಿದೇಶಿ ಕಂಪನಿಗಳಿಂದ ನೇರವಾಗಿ ರಾಜ್ಯಕ್ಕೆ ಕೊರೊನಾವೈರಸ್ ಲಸಿಕೆಯನ್ನು ಆಮದು ಮಾಡಿಕೊಳ್ಳುವ ನಿಟ್ಟಿನಲ್ಲಿ ಪಂಜಾಬ್ ಸರ್ಕಾರ ಹೆಜ್ಜೆ ಇಟ್ಟಿತ್ತು. ಮಾಡರ್ನಾ ಕಂಪನಿಯ ಕೊವಿಡ್-19 ಲಸಿಕೆಯನ್ನು ಖರೀದಿಸುವ ಕುರಿತು ಒಪ್ಪಂದಕ್ಕೆ ಮುಂದಾದ ಪಂಜಾಬ್ ಸರ್ಕಾರದ ಪ್ರಸ್ತಾವನೆಯನ್ನು ಕಂಪನಿ ತಿರಸ್ಕರಿಸಿದೆ. ವಿದೇಶಿ ಕಂಪನಿಯು ರಾಜ್ಯ ಸರ್ಕಾರಗಳ ಜೊತೆಗೆ ಯಾವುದೇ ರೀತಿ ವ್ಯವಹಾರ ಮತ್ತು ಒಪ್ಪಂದವನ್ನು ಇಟ್ಟುಕೊಳ್ಳುವುದಿಲ್ಲ. ಕೇಂದ್ರ ಸರ್ಕಾರದ ಜೊತೆಗೆ ನೇರವಾಗಿ ವ್ಯವಹಿಸುವುದಾಗಿ ಕಂಪನಿ ತಿಳಿಸಿದೆ.

ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 125 ದಿನಗಳಲ್ಲಿ 19,49,51,603 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಣೆ ಮಾಡಲಾಗಿದೆ. ಶನಿವಾರ ರಾತ್ರಿ 8 ಗಂಟೆ ವೇಳೆಗೆ 15,52,126 ಮಂದಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ. ಈ ಪೈಕಿ 13,80,232 ಜನರಿಗೆ ಮೊದಲ ಡೋಸ್ ಹಾಗೂ 1,71,894 ಫಲಾನುಭವಿಗಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.

English summary
Central Minister Subramanian Swamy Suggestion To Non BJP State Govt's To Import Covid-19 Vaccine From Abroad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X