ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸಾಪ್‌ನಲ್ಲಿ 'MyGov ಕೊರೊನಾ ಸಹಾಯಕೇಂದ್ರ' ಆರಂಭಿಸಿದ ಕೇಂದ್ರ ಸರ್ಕಾರ

|
Google Oneindia Kannada News

ದೆಹಲಿ, ಮಾರ್ಚ್ 20: ದೇಶದಲ್ಲಿ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್‌ ಕುರಿತು ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ 'ಮೈಗೋವ್ ಕೊರೊನಾ ಸಹಾಯಕೇಂದ್ರ' (MyGov Coronavirus helpdesk) ಆರಂಭಿಸಿದೆ.

ಇದು ವಾಟ್ಸಾಪ್‌ನಲ್ಲಿ ಲಭ್ಯವಿದ್ದು, ಕೊರೊನಾ ಕುರಿತು ನಿಮಗೆ ಕಾಡುವ ಅನುಮಾನ, ಕುತೂಹಲಗಳಿಗೆ ಈ ಆಪ್ ನಲ್ಲಿ ಉತ್ತರ ಪಡೆಯಬಹುದು. ಕೊರೊನಾ ಕುರಿತಂತೆ ಸಂದೇಶಗಳಿದ್ದರೂ ಈ ವಾಟ್ಸಾಪ್ ಚಾಟ್‌ಬಾಟ್‌ ಮೂಲಕ ಸಿಗುತ್ತೆ.

ಕಲಬುರಗಿ: ಕೊರೊನಾ ಪರೀಕ್ಷೆಗೆ ಶನಿವಾರ ಲ್ಯಾಬ್ ಆರಂಭಕಲಬುರಗಿ: ಕೊರೊನಾ ಪರೀಕ್ಷೆಗೆ ಶನಿವಾರ ಲ್ಯಾಬ್ ಆರಂಭ

ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೆ. ನಿಮ್ಮ ಫೋನ್‌ನಲ್ಲಿ 9013151515 ಸಂಖ್ಯೆ ಸೇವ್ ಮಾಡಿಕೊಳ್ಳಿ. ಕೊರೊನಾ ಬಗ್ಗೆ ನಿಮಗೆ ಏನಾದರೂ ಮಾಹಿತಿ ಬೇಕು ಅಂದ್ರೆ ಈ ನಂಬರ್‌ಗೆ ಸಂದೇಶ ರವಾನಿಸಿ, ತಕ್ಷಣ ಮಾಹಿತಿ ಸಿಗುತ್ತೆ.

Central Launches MyGov Corona Helpdesk On WhatsApp

ಈ ವಾಟ್ಸಾಪ್ ಚಾಟ್‌ಬಾಟ್‌ ಸ್ವಯಂಚಾಲಿತವಾಗಿರುತ್ತದೆ ಮತ್ತು ಕೊರೊನಾಗೆ ಸಂಬಂಧಪಟ್ಟಂತೆ ಕೇಂದ್ರ ಇಲಾಖೆಯಿಂದ ಸ್ಪಷ್ಟ ಮಾಹಿತಿ ಸಿಗುತ್ತದೆ ಎಂದು ತಿಳಿಸಲಾಗಿದೆ. ಈ ಮೂಲಕ ವಾಟ್ಸಾಪ್, ಸೋಶಿಯಲ್ ಮೀಡಿಯಾಗಳಲ್ಲಿ ಹರಡುವ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೊರೊನಾ: ಗೊಂದಲ ಮೂಡಿಸಿದ 'ಧ್ವನಿವರ್ಧಕ' ಘೋಷಣೆ, ಸ್ಪಷ್ಟನೆ ಇಲ್ಲಿದೆಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೊರೊನಾ: ಗೊಂದಲ ಮೂಡಿಸಿದ 'ಧ್ವನಿವರ್ಧಕ' ಘೋಷಣೆ, ಸ್ಪಷ್ಟನೆ ಇಲ್ಲಿದೆ

ಮೈಗೋವ್ ಕೊರೊನಾ ಸಹಾಯಕೇಂದ್ರ ವಾಟ್ಸಾಪ್‌ ಚಾಟ್‌ಬಾಟ್‌ ಬಿಟ್ಟು ಕೇಂದ್ರ ಸಹಾಯವಾಣಿ ಮತ್ತು ಆಯಾ ರಾಜ್ಯಗಳ ಸಹಾಯವಾಣಿ ಕೇಂದ್ರಗಳು ಕಾರ್ಯರೂಪದಲ್ಲಿದೆ. ಇದುವರೆಗೂ ಭಾರತದಲ್ಲಿ 206ಕ್ಕೂ ಹೆಚ್ಚು ಕೊರೊನಾ ಸೋಂಕಿತರು ದೃಢಪಟ್ಟಿದ್ದಾರೆ.

English summary
Central government launches MyGov Corona Helpdesk on WhatsApp Chatbot to address issues on COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X