ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋಟೋವುಳ್ಳ ಆಧಾರ್ ಹಂಚಿಕೊಳ್ಳಬೇಡಿ; ಸಲಹೆ ವಾಪಸ್ ಪಡೆದ ಸರ್ಕಾರ!

|
Google Oneindia Kannada News

ನವದೆಹಲಿ, ಮೇ 29: ಭಾರತದಲ್ಲಿ ಫೋಟೋವುಳ್ಳ ಆಧಾರ್ ಕಾರ್ಡ್ ಅನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬೇಡಿ ಎನ್ನುವ ಸಲಹೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದುಕೊಂಡಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆತಂಕ ಹೆಚ್ಚಾದ ಹಿನ್ನೆಲೆ ಸರ್ಕಾರ ಕ್ರಮ ತೆಗೆದುಕೊಂಡಿದೆ.

ವ್ಯಕ್ತಿಯ ಬೆರಳಿನ ಗುರುತು, (ಫಿಂಗರ್‌ಪ್ರಿಂಟ್‌), ಮುಖ ಮತ್ತು ಕಣ್ಣಿನ ಸ್ಕ್ಯಾನ್‌ಗೆ ವಿಶಿಷ್ಟವಾದ ಸಂಖ್ಯೆಯನ್ನು ಹೊಂದಿರುವ ಆಧಾರ್ ಕಾರ್ಡ್, ಕಳ್ಳತನ ಮತ್ತು ಭಾರತದ ಕಲ್ಯಾಣ ಯೋಜನೆಗಳಲ್ಲಿ ಸೋರಿಕೆ ತಡೆಯುವ ನಿಟ್ಟಿನಲ್ಲಿ ಪರಿಷ್ಕೃತ ಸಲಹೆಯನ್ನು ಹೊರಡಿಸಲಾಗಿತ್ತು. ಆದರೆ ಇದು ಕಣ್ಗಾವಲು ಸ್ಥಿತಿಯನ್ನು ಪ್ರಶ್ನೆ ಮಾಡಬಹುದು ಎಂದು ವಿಮರ್ಶಕರು ಆತಂಕ ವ್ಯಕ್ತಪಡಿಸಿದ್ದಾರೆ.

ಫೋಟೋವುಳ್ಳ ಆಧಾರ್ ಕಾರ್ಡ್ ಹಂಚಿಕೊಳ್ಳದಿರಲು ಕೇಂದ್ರ ಸರ್ಕಾರದ ಸಲಹೆ ಫೋಟೋವುಳ್ಳ ಆಧಾರ್ ಕಾರ್ಡ್ ಹಂಚಿಕೊಳ್ಳದಿರಲು ಕೇಂದ್ರ ಸರ್ಕಾರದ ಸಲಹೆ

"ಫೋಟೋಪ್ರತಿಯುಳ್ಳ ಆಧಾರ್ ಕಾರ್ಡ್ ಅನ್ನು ಯಾವುದೇ ಸಂಸ್ಥೆ ಮತ್ತು ಕಂಪನಿಗಳೊಂದಿಗೆ ಹಂಚಿಕೊಳ್ಳಬೇಡಿ. ಅದರ ದುರುಪಯೋಗ ಆಗುವ ಅಪಾಯವಿರುತ್ತದೆ. ಅದಕ್ಕೆ ಪರ್ಯಾಯವಾಗಿ ದಯವಿಟ್ಟು ನಿಮ್ಮ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳನ್ನು ಮಾತ್ರ ಪ್ರದರ್ಶಿಸುವ ಮುಚ್ಚಿದದ ಆಧಾರ್ ಅನ್ನು ಮಾತ್ರ ಬಳಸಿಬೇಕು," ಎಂದು ಪ್ರಕಟಣೆಯಲ್ಲಿ ಹೇಳಲಾಗಿತ್ತು.

ಎರಡು ದಿನದಲ್ಲಿ ಎಚ್ಚರಿಕೆ ಸಂದೇಶ ವಾಪಸ್ ಪಡೆದ ಸರ್ಕಾರ

ಎರಡು ದಿನದಲ್ಲಿ ಎಚ್ಚರಿಕೆ ಸಂದೇಶ ವಾಪಸ್ ಪಡೆದ ಸರ್ಕಾರ

ಪತ್ರಿಕಾ ಮಾಹಿತಿ ಬ್ಯೂರೋ ಎಚ್ಚರಿಕೆ ನೀಡಿದ ಎರಡು ದಿನಗಳಲ್ಲಿ ತನ್ನ ಆದೇಶವನ್ನು ಹಿಂತೆಗೆದುಕೊಂಡಿದೆ. ಪರಿಷ್ಕರಿಸಿದ ಎಚ್ಚರಿಕೆ ಪ್ರಕಟಣೆಯಲ್ಲಿ ಆಧಾರ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಳ್ಳುವ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಇದು "ತಪ್ಪಾದ ವ್ಯಾಖ್ಯಾನದ ಸಾಧ್ಯತೆಯಿರುವ ದೃಷ್ಟಿಯಿಂದ" ಈ ಆದೇಶವನ್ನು ವಾಪಸ್ ಪಡೆದುಕೊಳ್ಳಲಾಗುತ್ತಿದೆ ಎಂದು ಹೇಳಿದೆ.

ಆಧಾರ್ ಬಳಕೆದಾರರ ಗೌಪ್ಯತೆ ರಕ್ಷಿಸುವ ಬದ್ಧತೆ

ಆಧಾರ್ ಬಳಕೆದಾರರ ಗೌಪ್ಯತೆ ರಕ್ಷಿಸುವ ಬದ್ಧತೆ

ಹೊಸ ಹೇಳಿಕೆಯಲ್ಲಿ, "ಆಧಾರ್ ಪರಿಸರ ವ್ಯವಸ್ಥೆಯು ಬಳಕೆದಾರರ ಗುರುತು ಮತ್ತು ಗೌಪ್ಯತೆಯನ್ನು ರಕ್ಷಿಸಲು ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ. ಬಳಕೆದಾರರು "ಸಾಮಾನ್ಯವಾಗಿ ಬಳಕೆ ಮಾಡುವಂತೆ ಸಲಹೆ ನೀಡಲಾಗುತ್ತಿದೆ," ಎಂದು ಹೇಳಿದೆ.

ಪ್ರಾಧಿಕಾರದಿಂದ ಪರವಾನಗಿ ಪಡೆದವರಿಗೆ ಮಾತ್ರ ಅನುಮತಿ

ಪ್ರಾಧಿಕಾರದಿಂದ ಪರವಾನಗಿ ಪಡೆದವರಿಗೆ ಮಾತ್ರ ಅನುಮತಿ

"ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ ಬಳಕೆದಾರರ ಪರವಾನಗಿ ಪಡೆದ ಸಂಸ್ಥೆಗಳು ಮಾತ್ರ ವ್ಯಕ್ತಿಯ ಗುರುತನ್ನು ಸ್ಥಾಪಿಸಲು ಆಧಾರ್ ಅನ್ನು ಬಳಸಬಹುದು" ಎಂದು ಸರ್ಕಾರ ಹೇಳಿದೆ. ಸಂಸ್ಥೆಯು ತಮ್ಮ ಆಧಾರ್ ಕಾರ್ಡ್‌ಗಳನ್ನು ಹಂಚಿಕೊಳ್ಳುವ ಮೊದಲು UIDAI ನಿಂದ ಮಾನ್ಯವಾದ ಬಳಕೆದಾರ ಪರವಾನಗಿಯನ್ನು ಹೊಂದಿದೆಯೇ ಎಂದು ಪರಿಶೀಲಿಸಲು ಸರ್ಕಾರವು ನಾಗರಿಕರಿಗೆ ಸೂಚಿಸಲಾಗಿದೆ.

ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವ ಮುನ್ನ ಎಚ್ಚರಿಕೆ ವಹಿಸಿ

ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವ ಮುನ್ನ ಎಚ್ಚರಿಕೆ ವಹಿಸಿ

ದೇಶದಲ್ಲಿ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವುದಕ್ಕೂ ಪೂರ್ವದಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಇಂಟರ್ನೆಟ್ ಕೆಫೆಗಳಲ್ಲಿ ಮತ್ತು ಸಾರ್ವಜನಿಕ ಕಂಪ್ಯೂಟರ್‌ಗಳನ್ನು ಬಳಸಿಕೊಂಡು ಯಾವುದೇ ಕಾರಣಕ್ಕೂ ನಿಮ್ಮ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಡಿ. "ನೀವು ಹಾಗೆ ಮಾಡಿದರೆ, ಆ ಕಂಪ್ಯೂಟರ್‌ನಿಂದ ಡೌನ್‌ಲೋಡ್ ಮಾಡಿದ ಎಲ್ಲಾ ಇ-ಆಧಾರ್ ಪ್ರತಿಗಳನ್ನು ನೀವು ಶಾಶ್ವತವಾಗಿ ಡಿಲೀಟ್ ಮಾಡಿದ್ದೀರಾ ಎಂಬುದನ್ನು ಖಾತ್ರಿಪಿಡಿಸಿಕೊಳ್ಳಬೇಕು," ಎಂದು ಸರ್ಕಾರದ ಸಲಹೆಯಲ್ಲಿ ಉಲ್ಲೇಖಿಸಲಾಗಿದೆ.

Recommended Video

ಇಡೀ ವೃತ್ತಿಜೀವನದಲ್ಲಿ ಮಾಡದೇ ಇರೋ ತಪ್ಪನ್ನ‌ಎಲ್ಲ ವಿರಾಟ್ ಈ ಸೀಸನ್ ನಲ್ಲಿ ಮಾಡಿದ್ದಾರೆ | OneIndia Kannada

English summary
Union government withdraws warning on national biometric ID after people panic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X