ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಷಾರ್! ಕೊರೊನಾ ಲಸಿಕೆ ಸಂಗ್ರಹಣೆ ಬಗ್ಗೆ ಮಾಹಿತಿ ನೀಡುವಂತಿಲ್ಲ?

|
Google Oneindia Kannada News

ನವದೆಹಲಿ, ಜೂನ್ 10: ಕೊರೊನಾವೈರಸ್ ಲಸಿಕೆ ದಾಸ್ತಾನು ಮತ್ತು ಎಲೆಕ್ಟ್ರಾನಿಕ್ ಲಸಿಕೆ ಗುಪ್ತಚರ ಜಾಲದ(ಇವಿನ್) ವ್ಯವಸ್ಥೆ ಬಗ್ಗೆ ಯಾವುದೇ ಕಾರಣಕ್ಕೂ ಮಾಹಿತಿಯನ್ನು ಬಹಿರಂಗವಾಗಿ ನೀಡದಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.

ಕೊವಿಡ್-19 ಲಸಿಕೆ ಸಂಗ್ರಹಣೆ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಲಸಿಕೆ ಶೇಖರಣೆಯ ತಾಪಮಾನ ಎಷ್ಟಿರಬೇಕು ಎಂಬುದು "ಸೂಕ್ಷ್ಮ ಮಾಹಿತಿ" ಆಗಿದೆ. ಈ ಅಂಶಗಳನ್ನು ಯೋಜನೆಯ ಸುಧಾರಣೆಗೆ ಮಾತ್ರ ಬಳಸುವಂತೆ ಸೂಚಿಸಲಾಗಿದೆ.

Good News: ಭಾರತದಲ್ಲಿ ಅತಿ ಕಡಿಮೆ ಬೆಲೆಯ ಕೊರೊನಾವೈರಸ್ ಲಸಿಕೆ! Good News: ಭಾರತದಲ್ಲಿ ಅತಿ ಕಡಿಮೆ ಬೆಲೆಯ ಕೊರೊನಾವೈರಸ್ ಲಸಿಕೆ!

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (ಯುಎನ್‌ಡಿಪಿ) ಸಹಕಾರದೊಂದಿಗೆ ಕೇಂದ್ರ ಆರೋಗ್ಯ ಸಚಿವಾಲಯವು ಯುಐಪಿ ಅಡಿಯಲ್ಲಿ ಇವಿನ್ ವ್ಯವಸ್ಥೆಯನ್ನು ಹೊರತಂದಿರುವ ಬಗ್ಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆಯಲಾಗಿದೆ. ಈ ವ್ಯವಸ್ಥೆಯಿಂದಾಗಿ ಕೊವಿಡ್-19 ಲಸಿಕೆಯ ಪ್ರಮಾಣ ಮತ್ತು ತಾಪಮಾನ ಪತ್ತೆಹಚ್ಚಲು ಸಾಧ್ಯವಾಗುತ್ತದೆ.

Central Govt Suggest To States To Not Share Data On Coronavirus Vaccine Stock, Storage Temperature

ಲಸಿಕೆ ವಿತರಣೆ ಅಂಕಿ-ಅಂಶಗಳ ಲೆಕ್ಕ:

ಕೊವಿಡ್-19 ಲಸಿಕೆಗಳ ಶೇಖರಣೆ ಪ್ರಮಾಣ ಮತ್ತು ವಿತರಣೆಯ ಅಂಕಿ-ಸಂಖ್ಯೆಗಳನ್ನು ಪ್ರತಿನಿತ್ಯ ಅಪ್ ಡೇಟ್ ಮಾಡುವುದಕ್ಕೆ ಎಲ್ಲಾ ರಾಜ್ಯಗಳು ಅತಿಹೆಚ್ಚಾಗಿ ಬಳಸುತ್ತಿರುವ ಬಗ್ಗೆ ಕೇಂದ್ರ ಸರ್ಕಾರ ತನ್ನ ಪತ್ರದಲ್ಲಿ ಉಲ್ಲೇಖಿಸಿದೆ.

"ಈ ನಿಟ್ಟಿನಲ್ಲಿ ಲಸಿಕೆಯ ದಾಸ್ತಾನು ಮತ್ತು ತಾಪಮಾನಕ್ಕಾಗಿ ಇವಿನ್‌ನಿಂದ ಉತ್ಪತ್ತಿಯಾಗುವ ದತ್ತಾಂಶ ಮತ್ತು ವಿಶ್ಲೇಷಣೆಗಳು ಆರೋಗ್ಯ ಸಚಿವಾಲಯದ ಒಡೆತನದಲ್ಲಿದೆ. ಇದನ್ನು ಯಾವುದೇ ಸಂಸ್ಥೆ, ಪಾಲುದಾರ ಸಂಸ್ಥೆ, ಮಾಧ್ಯಮ ಸಂಸ್ಥೆ, ಆನ್‌ಲೈನ್ ಮತ್ತು ಆಫ್‌ಲೈನ್ ಸಾರ್ವಜನಿಕ ವೇದಿಕೆಗಳೊಂದಿಗೆ ಒಪ್ಪಿಗೆಯಿಲ್ಲದೆ ಹಂಚಿಕೊಳ್ಳಬಾರದು ಎಂದು ಸಲಹೆ ನೀಡಿದೆ.

English summary
Central Govt Suggest To States To Not Share Data On Coronavirus Vaccine Stock, Storage Temperature.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X