ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್ 1: ವಿದೇಶಿ ಪ್ರಯಾಣಿಕರಿಗಾಗಿ ಹೊಸ ಮಾರ್ಗಸೂಚಿ ಇಂದಿನಿಂದಲೇ ಜಾರಿ

|
Google Oneindia Kannada News

ನವದೆಹಲಿ, ಡಿಸೆಂಬರ್ 1: ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಅತಿವೇಗವಾಗಿ ಹರಡುತ್ತದೆ ಎಂಬ ಎಚ್ಚರಿಕೆ ನಡುವೆ ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ ಕೇಂದ್ರ ಸರ್ಕಾರವು ಹೊರಡಿಸಿದ ಪರಿಷ್ಕೃತ ಮಾರ್ಗಸೂಚಿಗಳು ಬುಧವಾರದಿಂದ ಜಾರಿಗೆ ಬರಲಿದೆ.

ಭಾರತದಲ್ಲಿ ಓಮ್ರಿಕಾನ್ ರೂಪಾಂತರ ವೈರಸ್ ಪ್ರವೇಶಿಸದಂತೆ ತಡೆಯುವ ನಿಟ್ಟಿನಲ್ಲಿ ಎಲ್ಲ ರೀತಿ ಶಿಸ್ತುಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇಂದಿನಿಂದ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತದೆ. ಅದಕ್ಕಾಗಿ ಕೇಂದ್ರ ಸರ್ಕಾರದ ಪ್ರಮಾಣಿಕ ಕಾರ್ಯವಿಧಾನ ನಿಯಮಗಳು ಜಾರಿಗೊಳಿಸಲಾಗಿದೆ.

ಭಾರತದಲ್ಲಿ ಹೊಸ ರೂಪಾಂತರಿ ಓಮಿಕ್ರಾನ್ ಒಂದೇ ಒಂದು ಪ್ರಕರಣವಿಲ್ಲಭಾರತದಲ್ಲಿ ಹೊಸ ರೂಪಾಂತರಿ ಓಮಿಕ್ರಾನ್ ಒಂದೇ ಒಂದು ಪ್ರಕರಣವಿಲ್ಲ

ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ತೀವ್ರ ಪರೀಕ್ಷೆಗೆ ಒಳಪಡಿಸುವುದು, ಕೊವಿಡ್-19 ನೆಗೆಟಿವ್ ವರದಿ ಸಲ್ಲಿಸುವುದು, 14 ದಿನಗಳ ಪ್ರಯಾಣ ವಿವರವನ್ನು ಸಲ್ಲಿಸುವುದು, RT-PCR ಪರೀಕ್ಷೆ ನಂತರದ ನೆಗೆಟಿವ್ ವರದಿಯನ್ನು ಪ್ರಯಾಣ ಆರಂಭಕ್ಕೂ ಮೊದಲೇ ಏರ್ ಸುವಿಧ್ ಪೋರ್ಟಲ್ ನಲ್ಲಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಓಮ್ರಿಕಾನ್ ರೂಪಾಂತರ ವೈರಸ್ ಅಪಾಯ ಎದುರಿಸುತ್ತಿರುವ ರಾಷ್ಟ್ರಗಳಿಂದ ಆಗಮಿಸಿದ ಪ್ರಯಾಣಿಕರಿಗೆ ಹೆಚ್ಚಿನ ಪರೀಕ್ಷೆಗೊಳಪಡಿಸಲು ಕ್ರಮ ತೆಗೆದುಕೊಳ್ಳಲಾಗಿದ್ದು, ಈ ಕುರಿತು ಒಂದು ವರದಿ ಇಲ್ಲಿದೆ ಓದಿ.

ಜಗತ್ತಿನ 14 ರಾಷ್ಟ್ರಗಳಲ್ಲಿ ಓಮಿಕ್ರಾನ್ ಪ್ರಕರಣ ಪತ್ತೆ

ಜಗತ್ತಿನ 14 ರಾಷ್ಟ್ರಗಳಲ್ಲಿ ಓಮಿಕ್ರಾನ್ ಪ್ರಕರಣ ಪತ್ತೆ

ಆಫ್ರಿಕಾದ ಬೋಟ್ಸ್ವಾನಾದಲ್ಲಿ ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಮೊದಲ ಪ್ರಕರಣ ಪತ್ತೆಯಾಯಿತು. ತದನಂತರ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯು ಈ ಹೊಸ ರೂಪಾಂತರಿಯನ್ನು 'ಕಾಳಜಿ ರೂಪಾಂತರ' ಪ್ರಬೇಧಕ್ಕೆ ಸೇರಿದೆ ಎಂದು ತಿಳಿಸಿತು. ಜಗತ್ತಿನಲ್ಲಿ ಈವರೆಗೂ ಒಟ್ಟು 14 ರಾಷ್ಟ್ರಗಳಲ್ಲಿ ಈ ಒಮಿಕ್ರಾನ್ ರೂಪಾಂತರ ಪ್ರಕರಣಗಳು ಪತ್ತೆಯಾಗಿವೆ. ಹೊಸ ರೂಪಾಂತರದ ಹರಡುವಿಕೆಯನ್ನು ತಡೆಯುವುದಕ್ಕಾಗಿ ಅನೇಕ ದೇಶಗಳು ದಕ್ಷಿಣ ಆಫ್ರಿಕಾದ ಪ್ರಯಾಣಿಕರನ್ನು ನಿಷೇಧಿಸಿವೆ. ಇದರ ಮಧ್ಯೆ ಭಾರತ ಸರ್ಕಾರವು ಭಾನುವಾರ ಬಿಡುಗಡೆಗೊಳಿಸಿರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪರಿಷ್ಕೃತ ಮಾರ್ಗಸೂಚಿಗಳು ಇಂದಿನಿಂದ ಜಾರಿಗೆ ಬರಲಿವೆ.

ಕಂದ್ರದಿಂದ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮಾರ್ಗಸೂಚಿ

ಕಂದ್ರದಿಂದ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮಾರ್ಗಸೂಚಿ

* ಎಲ್ಲಾ ಪ್ರಯಾಣಿಕರು ಆನ್‌ಲೈನ್ ಏರ್ ಸುವಿಧಾ ಪೋರ್ಟಲ್‌ನಲ್ಲಿ (https://www.newdelhiairport.in/airsuvidha/apho-registration) ಕಳೆದ 14 ದಿನಗಳ ಪ್ರಯಾಣದ ವಿವರಗಳನ್ನು ಒಳಗೊಂಡಂತೆ ನಿಗದಿತ ಪ್ರಯಾಣದ ಮೊದಲು ಸ್ವಯಂ ಘೋಷಣೆ ಅರ್ಜಿಯನ್ನು ಸಲ್ಲಿಸಬೇಕು.

* ಏರ್‌ಲೈನ್ಸ್‌ಗಳು ಏರ್ ಸುವಿಧಾ ಪೋರ್ಟಲ್‌ನಲ್ಲಿ ಸ್ವಯಂ ಘೋಷಣೆ ಫಾರ್ಮ್ ಅನ್ನು ಭರ್ತಿ ಮಾಡಿದ ಪ್ರಯಾಣಿಕರಿಗೆ ಮಾತ್ರ ಪ್ರಯಾಣ ಆರಂಭಿಸುವುದಕ್ಕೆ ಅನುಮತಿಸಲಾಗುತ್ತದೆ. ನೆಗೆಟಿವ್ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯನ್ನು ಅಪ್‌ಲೋಡ್ ಮಾಡಿದ ಹಾಗೂ ಥರ್ಮಲ್ ಸ್ಕ್ರೀನಿಂಗ್ ವೇಳೆ ಲಕ್ಷಣರಹಿತ ಪ್ರಯಾಣಿಕರಿಗೆ ಮಾತ್ರ ವಿಮಾನ ಏರುವುದಕ್ಕೆ ಅನುಮತಿ ನೀಡಲಾಗುತ್ತದೆ.

* ಪ್ರಯಾಣ ಆರಂಭಿಸುವುದಕ್ಕೂ 72 ಗಂಟೆಗಳ ಮೊದಲು ನಡೆಸಿದ ವೈದ್ಯಕೀಯ RT-PCR ಪರೀಕ್ಷೆಯ ನೆಗೆಟಿವ್ ವರದಿಯನ್ನು ಅಪ್‌ಲೋಡ್ ಮಾಡಬೇಕು.

* ಪ್ರತಿ ಪ್ರಯಾಣಿಕರು ವರದಿಯ ದೃಢೀಕರಣಕ್ಕೆ ಸಂಬಂಧಿಸಿದಂತೆ ಘೋಷಣೆಯನ್ನು ಸಲ್ಲಿಸಬೇಕು, ಇಲ್ಲದಿದ್ದರೆ ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕಾಗುತ್ತದೆ.

* ಪ್ರಯಾಣವನ್ನು ಕೈಗೊಳ್ಳಲು ಅನುಮತಿಸುವ ಮೊದಲು ಅವರು ಪೋರ್ಟಲ್‌ನಲ್ಲಿ ಅಥವಾ ಭಾರತ ಸರ್ಕಾರದ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸಂಬಂಧಿಸಿದ ವಿಮಾನಯಾನ ಸಂಸ್ಥೆಗಳ ಮೂಲಕ ಮನೆ ಅಥವಾ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಲು ಸೂಕ್ತ ಸರ್ಕಾರಿ ಪ್ರಾಧಿಕಾರದ ನಿರ್ಧಾರಕ್ಕೆ ಬದ್ಧರಾಗುತ್ತಾರೆ ಎಂದು ಭರವಸೆ ನೀಡಬೇಕು.

* ಎಲ್ಲಾ ಪ್ರಯಾಣಿಕರು ತಮ್ಮ ಮೊಬೈಲ್ ನಲ್ಲಿ ಆರೋಗ್ಯ ಸೇತು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಲು ಸಲಹೆ ನೀಡಲಾಗಿದೆ.

ಓಮಿಕ್ರಾನ್ ಸೋಂಕಿನ ಅಪಾಯದಲ್ಲಿರುವ ರಾಷ್ಟ್ರಗಳು

ಓಮಿಕ್ರಾನ್ ಸೋಂಕಿನ ಅಪಾಯದಲ್ಲಿರುವ ರಾಷ್ಟ್ರಗಳು

ಜಗತ್ತಿನಲ್ಲಿ ಒಟ್ಟು 14 ರಾಷ್ಟ್ರಗಳು ಓಮಿಕ್ರಾನ್ ರೂಪಾಂತರ ವೈರಸ್ ಭೀತಿಯನ್ನು ಎದುರಿಸುತ್ತಿವೆ. ಇವುಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಬೋಟ್ಸ್ವಾನಾ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಜಿಂಬಾಬ್ವೆ, ಸಿಂಗಾಪುರ್, ಹಾಂಗ್ ಕಾಂಗ್ ಮತ್ತು ಇಸ್ರೇಲ್ ಸೇರಿವೆ. 'ಓಮಿಕ್ರಾನ್ ಅಪಾಯದಲ್ಲಿರುವ' ಈ 14 ದೇಶಗಳಿಂದ ಭಾರತಕ್ಕೆ ಪ್ರವೇಶಿಸುವ ಪ್ರಯಾಣಿಕರಿಗೆ ಕಟ್ಟುನಿಟ್ಟಾದ ಸ್ಕ್ರೀನಿಂಗ್ ಅನ್ನು ಮಾರ್ಗಸೂಚಿಗಳು ಸೂಚಿಸುತ್ತವೆ.

ಓಮ್ರಿಕಾನ್ ಭೀತಿ ಎದುರಿಸುತ್ತಿರುವ ದೇಶದ ಪ್ರಯಾಣಿಕರಿಗೆ ಈ ನಿಯಮ

ಓಮ್ರಿಕಾನ್ ಭೀತಿ ಎದುರಿಸುತ್ತಿರುವ ದೇಶದ ಪ್ರಯಾಣಿಕರಿಗೆ ಈ ನಿಯಮ

* ಭಾರತಕ್ಕೆ ಆಗಮಿಸಿದ ಸಂದರ್ಭದಲ್ಲಿ ಕೊವಿಡ್-19 ಪರೀಕ್ಷೆಗಾಗಿ ಮಾದರಿ ನೀಡುವುದು,(ಪರೀಕ್ಷೆ ಹಣವನ್ನು ಪ್ರಯಾಣಿಕರೇ ಪಾವತಿಸಬೇಕು) ಅಂತಹ ಪ್ರಯಾಣಿಕರು ಹೊರಡುವ ಮೊದಲು ವಿಮಾನ ನಿಲ್ದಾಣದಲ್ಲಿ ತಮ್ಮ ಪರೀಕ್ಷಾ ಫಲಿತಾಂಶಕ್ಕಾಗಿ ಕಾಯಬೇಕಾಗುತ್ತದೆ.

* ಕೊವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ, 7 ದಿನಗಳ ಕಾಲ ಹೋಂ ಕ್ವಾರಂಟೈನ್ ಮಾಡಲಾಗುವುದು. ಭಾರತಕ್ಕೆ ಆಗಮಿಸಿದ 8ನೇ ದಿನದಂದು ಮರು-ಪರೀಕ್ಷೆ ನಡೆಸಿದ ವೇಳೆ ನೆಗೆಟಿವ್ ವರದಿ ಬಂದರೆ, ಮುಂದಿನ 7 ದಿನಗಳವರೆಗೆ ಅವರ ಆರೋಗ್ಯವನ್ನು ಸ್ವಯಂ-ಮೇಲ್ವಿಚಾರಣೆಗೆ ಒಳಪಡಿಸಿಕೊಳ್ಳಬೇಕು.

* ಆದಾಗ್ಯೂ, ಅಂತಹ ಪ್ರಯಾಣಿಕರು ಪಾಸಿಟಿವ್ ವರದಿ ಕಂಡು ಬಂದರೆ, ಅವರ ಮಾದರಿಗಳನ್ನು INSACOG ಪ್ರಯೋಗಾಲಯದಲ್ಲಿ ಜೀನೋಮಿಕ್ ಪರೀಕ್ಷೆಗೆ ಕಳುಹಿಸಲಾಗುವುದು.

* ಅವುಗಳನ್ನು ಪ್ರತ್ಯೇಕ ಪ್ರತ್ಯೇಕ ಸೌಲಭ್ಯದಲ್ಲಿ ನಿರ್ವಹಿಸಬೇಕು ಮತ್ತು ಸಂಪರ್ಕ ಪತ್ತೆಹಚ್ಚುವಿಕೆ ಸೇರಿದಂತೆ ನಿಗದಿತ ಪ್ರಮಾಣಿತ ಪ್ರೋಟೋಕಾಲ್ ಪ್ರಕಾರ ಚಿಕಿತ್ಸೆ ನೀಡಬೇಕು.

* ಅಂತಹ ಪಾಸಿಟಿವ್ ವರದಿ ಬಂದಿರುವ ಪ್ರಯಾಣಿಕರನ್ನು ಸಾಂಸ್ಥಿಕ ಕ್ವಾರಂಟೈನ್ ಅಡಿಯಲ್ಲಿ ಇರಿಸಬೇಕು ಅಥವಾ ನಿಗದಿಪಡಿಸಿದ ಪ್ರೋಟೋಕಾಲ್ ಪ್ರಕಾರ ಹೋಮ್ ಕ್ವಾರಂಟೈನ್‌ನಲ್ಲಿ ಸಂಬಂಧಪಟ್ಟ ರಾಜ್ಯ ಸರ್ಕಾರವು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಬೇಕು.

Recommended Video

ಸರ್ಕಾರದ ನಿರ್ಧಾರ ಎನ್ ಗೊತ್ತಾ? | Oneindia Kannada

English summary
Central Govt Revised Guidelines Implemented from Today For International Arrivals Amid Omicron Variant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X