ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

24 ರಾಜ್ಯಗಳಿಗೆ 86,912 ಕೋಟಿ ರೂ. ಜಿಎಸ್‌ಟಿ ಪರಿಹಾರ ಘೋಷಿಸಿದ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಮೇ 31: ಕೇಂದ್ರ ಸರ್ಕಾರವು ರಾಜ್ಯಗಳಿಗೆ ಭರ್ಜರಿ ಕೊಡುಗೆ ನೀಡಿದೆ. 2022ರ ಮೇ 31ರವರೆಗೆ ಎಲ್ಲಾ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಹಾರ ಬಾಕಿಗಳನ್ನು ತೆರವುಗೊಳಿಸಿದೆ. ಆ ಮೂಲಕ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಬರೋಬ್ಬರಿ 86,912 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

"ರಾಜ್ಯಗಳು ತಮ್ಮ ಸಂಪನ್ಮೂಲಗಳನ್ನು ನಿರ್ವಹಿಸುವುದಕ್ಕೆ ನೆರವಾಗಲು ಮತ್ತು ತಮ್ಮ ಕಾರ್ಯಕ್ರಮಗಳನ್ನು ವಿಶೇಷವಾಗಿ ಬಂಡವಾಳದ ಮೇಲಿನ ವೆಚ್ಚವನ್ನು ಈ ಹಣಕಾಸು ವರ್ಷದಲ್ಲಿ ಯಶಸ್ವಿಯಾಗಿ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ," ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಕಚ್ಚಾತೈಲ ಬೆಲೆ ಹೆಚ್ಚಳ: ಮತ್ತೆ ಏರಿಕೆಯಾಗುತ್ತಾ ಪೆಟ್ರೋಲ್, ಡೀಸೆಲ್ ಬೆಲೆ?ಕಚ್ಚಾತೈಲ ಬೆಲೆ ಹೆಚ್ಚಳ: ಮತ್ತೆ ಏರಿಕೆಯಾಗುತ್ತಾ ಪೆಟ್ರೋಲ್, ಡೀಸೆಲ್ ಬೆಲೆ?

ಜಿಎಸ್‌ಟಿ ಪರಿಹಾರ ನಿಧಿಯಲ್ಲಿ 25 ಸಾವಿರ ಕೋಟಿ ರೂಪಾಯಿ ಮಾತ್ರ ಲಭ್ಯವಿದ್ದರೂ ಸರ್ಕಾರ ಸಂಪೂರ್ಣ ಪಾವತಿ ಮಾಡಿದೆ. ಬಾಕಿ ಹಣವನ್ನು ಕೇಂದ್ರದ ಸ್ವಂತ ಸಂಪನ್ಮೂಲಗಳಿಂದ ಸೆಸ್ ಸಂಗ್ರಹ ಬಾಕಿಯಿಂದ ಪಾವತಿಸಲಾಗಿದೆ.

ಬಾಕಿ ಚುಕ್ತಾ ಮಾಡಿದ ಕೇಂದ್ರ ಸರ್ಕಾರ!

ಬಾಕಿ ಚುಕ್ತಾ ಮಾಡಿದ ಕೇಂದ್ರ ಸರ್ಕಾರ!

ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ ಬಿಡುಗಡೆಯಾದ ಒಟ್ಟು 86,912 ಕೋಟಿ ರೂಪಾಯಿಗಳಲ್ಲಿ 47,617 ಕೋಟಿ ರೂಪಾಯಿ ಮೌಲ್ಯದ ಪರಿಹಾರವು ಜನವರಿವರೆಗೆ ಬಾಕಿಯಾಗಿದ್ದರೆ, 21,322 ಕೋಟಿ ರೂಪಾಯಿ ಫೆಬ್ರವರಿ-ಮಾರ್ಚ್‌ನ ಬಾಕಿಯಾಗಿದೆ. ಅದೇ ರೀತಿ 17,973 ಕೋಟಿ ರೂಪಾಯಿ ಹಣವು ಏಪ್ರಿಲ್-ಮೇ ತಿಂಗಳ ಬಾಕಿ ಎಂದು ಹಣಕಾಸು ಸಚಿವಾಲಯವು ತಿಳಿಸಿದೆ.

ಕೋವಿಡ್-19 ಸಂದರ್ಭದಲ್ಲಿ ಸೆಸ್ ಸಂಗ್ರಹಣೆ ಇಳಿಕೆ

ಕೋವಿಡ್-19 ಸಂದರ್ಭದಲ್ಲಿ ಸೆಸ್ ಸಂಗ್ರಹಣೆ ಇಳಿಕೆ

ಕಳೆದ 2017-18, 2018-19ರ ಅವಧಿಗೆ ರಾಜ್ಯಗಳಿಗೆ ದ್ವೈ-ಮಾಸಿಕ ಜಿಎಸ್‌ಟಿ ಪರಿಹಾರವನ್ನು ಪರಿಹಾರ ನಿಧಿಯಿಂದ ಸಮಯಕ್ಕೆ ಬಿಡುಗಡೆ ಮಾಡಲಾಗಿದೆ. ರಾಜ್ಯಗಳ ಸಂರಕ್ಷಿತ ಆದಾಯವು ಶೇ.14ರಷ್ಟು ಸಂಯೋಜಿತ ಬೆಳವಣಿಗೆಯಲ್ಲಿ ಬೆಳೆಯುತ್ತಿದೆ. ಆದರೆ ಸೆಸ್ ಸಂಗ್ರಹವು ಅದೇ ಅನುಪಾತದಲ್ಲಿ ಹೆಚ್ಚಾಗದ ಕಾರಣ, ಕೋವಿಡ್ -19 ರಕ್ಷಿತ ಆದಾಯ ಮತ್ತು ಸೆಸ್ ಸಂಗ್ರಹದಲ್ಲಿನ ಕಡಿತ ಸೇರಿದಂತೆ ನಿಜವಾದ ಆದಾಯದ ಸ್ವೀಕೃತಿಯ ನಡುವಿನ ಅಂತರ ಮತ್ತಷ್ಟು ಹೆಚ್ಚಿದೆ ಎಂದು ಸರ್ಕಾರ ಹೇಳಿದೆ.

ರಾಜ್ಯಗಳ ಸಂಪನ್ಮೂಲ ಕೊರತೆ ನೀಗಿಸಲು ಪರಿಹಾರ

ರಾಜ್ಯಗಳ ಸಂಪನ್ಮೂಲ ಕೊರತೆ ನೀಗಿಸಲು ಪರಿಹಾರ

ಅಲ್ಪ ಪ್ರಮಾಣದ ಪರಿಹಾರ ಬಿಡುಗಡೆಯಿಂದಾಗಿ ರಾಜ್ಯಗಳ ಸಂಪನ್ಮೂಲ ಅಂತರವನ್ನು ಪೂರೈಸಲು ಕೇಂದ್ರ ಸರ್ಕಾರವು 2020-21ರ ಸಾಲಿಗೆ ಸಂಬಂಧಿಸಿದಂತೆ 1.1 ಲಕ್ಷ ಕೋಟಿ ರೂಪಾಯಿ ಮತ್ತು 2021-22 ರಲ್ಲಿ 1.59 ಲಕ್ಷ ಕೋಟಿ ರೂಪಾಯಿ ಸಾಲವನ್ನು ಪಡೆದು ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ ಎಷ್ಟು ಜಿಎಸ್‌ಟಿ ಪರಿಹಾರವನ್ನು ಘೋಷಿಸಲಾಗಿದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರ ನೀಡಿರುವ ಜಿಎಸ್‌ಟಿ ಪರಿಹಾರ ಎಷ್ಟು ಎಂಬುದನ್ನು ಈ ಪಟ್ಟಿಯಲ್ಲಿ ತಿಳಿದುಕೊಳ್ಳೋಣ.

ದಕ್ಷಿಣದ ರಾಜ್ಯಗಳಿಗೆ ಕೇಂದ್ರದ ಜಿಎಸ್‌ಟಿ ಪರಿಹಾರ:

* ಆಂಧ್ರ ಪ್ರದೇಶ - 3199 ಕೋಟಿ ರೂಪಾಯಿ

* ಗೋವಾ - 1291 ಕೋಟಿ ರೂಪಾಯಿ

* ಕರ್ನಾಟಕ - 8633 ಕೋಟಿ ರೂಪಾಯಿ

* ಕೇರಳ - 5693 ಕೋಟಿ ರೂಪಾಯಿ

* ಮಹಾರಾಷ್ಟ್ರ - 14145 ಕೋಟಿ ರೂಪಾಯಿ

* ತಮಿಳುನಾಡು - 9602 ಕೋಟಿ ರೂಪಾಯಿ

* ತೆಲಂಗಾಣ - 296 ಕೋಟಿ ರೂಪಾಯಿ

ಜಿಎಸ್‌ಟಿ ನೀತಿ ಜಾರಿಯಾಗಿದ್ದು ಯಾವಾಗ?

ಜಿಎಸ್‌ಟಿ ನೀತಿ ಜಾರಿಯಾಗಿದ್ದು ಯಾವಾಗ?

ಕಳೆದ 2017ರ ಜುಲೈ 1ರಂದು ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ ನೀತಿ(ಜಿಎಸ್‌ಟಿ)ಯನ್ನು ಪರಿಚಯಿಸಲಾಯಿತು. ಐದು ವರ್ಷಗಳ ಅವಧಿಗೆ GST (ರಾಜ್ಯಗಳಿಗೆ ಪರಿಹಾರ) ಕಾಯಿದೆ, 2017ರ ನಿಬಂಧನೆಗಳ ಪ್ರಕಾರ GST ಅನುಷ್ಠಾನದ ಖಾತೆಯಲ್ಲಿ ಉಂಟಾಗುವ ಯಾವುದೇ ಆದಾಯದ ನಷ್ಟಕ್ಕೆ ಪರಿಹಾರಕ್ಕಾಗಿ ರಾಜ್ಯಗಳಿಗೆ ಭರವಸೆ ನೀಡಲಾಗಿತ್ತು.

Recommended Video

ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ 86,912 ಕೋಟಿ ರೂಪಾಯಿ ಜಿಎಸ್​ಟಿ ಪರಿಹಾರ | #India | OneIndia Kannada

English summary
Central Govt Releases Entire GST Compensation Due Till Date May 31st, 2022. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X