ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಕೆ-103:ರಷ್ಯಾದ ಯಾವ ಪ್ರಸ್ತಾವವನ್ನು ಭಾರತ ತಿರಸ್ಕರಿಸಿತು ಗೊತ್ತೇ?

By Nayana
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 4 : ಈಗಾಗಲೇ ಫ್ರಾನ್ಸ್ ಜೊತೆ ರಫೇಲ್ ಡೀಲ್ ಒಪ್ಪಂದದಲ್ಲಿ ವಿರೋಧ ಪಕ್ಷಗಳ ತೀವ್ರ ಪ್ರತಿರೋಧ ಎದುರಿಸುತ್ತಿರುವ ಕೇಂದ್ರ ಸರ್ಕಾರ ಅದಾನಿ ಗ್ರೂಪ್ ಮೂಲಕ ಎಕೆ-103 ರೈಫಲ್‌ಗಳನ್ನು ಸರಬರಾಜು ಮಾಡುತ್ತೇವೆಂಬ ರಷ್ಯಾ ಸರ್ಕಾರದ ಪ್ರಸ್ತಾವನೆಯನ್ನು ಭಾರತ ಸರ್ಕಾರ ತಿರಸ್ಕರಿಸಿದೆ.

ಕಳೆದ ಏಪ್ರಿಲ್ ನಲ್ಲಿ ಕೇಂದ್ರ ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ಭೇಟಿ ವೇಳೆ ಭಾರತ ಹಾಗೂ ರಷ್ಯಾ ನಡುವೆ ಮೂರು ಸಾವಿರ ಕೋಟಿ ರೂ. ಮೌಲ್ಯದ ಎಕೆ-103 ರೈಫಲ್‌ಗಳನ್ನು ಪೂರೈಸುವ ಒಪ್ಪಂದಕ್ಕೆ ಚಾಲನೆ ನೀಡಲಾಗಿತ್ತು.

ರಫೇಲ್ ಒಪ್ಪಂದ: ಬಿಜೆಪಿ ಹಣಿಯಲು ಸಮಿತಿ ರಚಿಸಿದ ರಾಹುಲ್ ಗಾಂಧಿರಫೇಲ್ ಒಪ್ಪಂದ: ಬಿಜೆಪಿ ಹಣಿಯಲು ಸಮಿತಿ ರಚಿಸಿದ ರಾಹುಲ್ ಗಾಂಧಿ

ಇಂಡಿಯನ್ ಆರ್ಡಿನೆನ್ಸ್‌ ಪ್ಯಾಕ್ಟರಿ ಮೂಲಕ ಸರಬರಾಜು ಮಾಡಲು ಆರಂಭದಲ್ಲಿ ಸರ್ಕಾರ ಒಪ್ಪಿತ್ತಾದರೂ ತಾಂತ್ರಿಕ ಹಾಗೂ ಕಚ್ಚಾವಸ್ತುಗಳು ವಿನಿಮಯದಲ್ಲಿನ ಕಾರಣಗಳಿಂದಾಗಿ ಅದಾನಿ ಗ್ರೂಪ್ ನ ಯುದ್ಧ ಸಾಮಗ್ರಿ ಏಜೆನ್ಸಿ ಮೂಲಕ ಕಳುಹಿಸುವುದಾಗಿ ಪ್ರಸ್ತಾವನೆ ಸಲ್ಲಿಸಿತ್ತು.

Central Govt rejects, Russias request for Adanis Ak-rifle deal partner

ಕೇಂದ್ರ ಸರ್ಕಾರವು ಫ್ರ್ಯಾನ್ಸ್ ಜೊತೆಗೆ ರಫೇಲ್ ಯುದ್ಧ ವಿಮಾನಗಳ ಜತೆಗೆ ವ್ಯವಹಾರ ನಡೆಸಿರುವ ಕಾರಣ ವಿರೋಧಪಕ್ಷದ ಕೆಂಗಣ್ಣಿಗೆ ಗುರಿಯಾಗಿದೆ. ಇದೇ ಸಂದರ್ಭದಲ್ಲಿ ಭಾರತೀಯ ಸೇನೆಗೆ ರೈಫಲ್‌ಗಳನ್ನು ಒದಗಿಸಲು ಹಾಗೂ ಭಾರತದ ಜತೆಗೆ ಪಾಲುದಾರರಾಗಲು ಮುಂದೆ ಬಂದಿರುವ ರಷ್ಯಾದ ಪ್ರಸ್ತಾವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

ರಫೆಲ್ ಡೀಲ್ ಅಂದ್ರೇನು? ಟೀಸರ್ ಬಿಡುಗಡೆ ಮಾಡಿದ ಕಾಂಗ್ರೆಸ್!ರಫೆಲ್ ಡೀಲ್ ಅಂದ್ರೇನು? ಟೀಸರ್ ಬಿಡುಗಡೆ ಮಾಡಿದ ಕಾಂಗ್ರೆಸ್!

ಏಪ್ರಿಲ್ ತಿಂಗಳಿನಲ್ಲಿ ಎರಡು ಸರ್ಕಾರಗಳು ರಷ್ಯಾದ ಯುದ್ಧೋಪಕರಣಗಳನ್ನು ಪಡೆದುಕೊಳ್ಳಲು ಸಮ್ಮತಿ ಸೂಚಿಸಿದ್ದವು. ಆದರೆ ರಕ್ಷಣಾ ಸಚಿವಾಲಯ ಆಗಸ್ಟ್ ತಿಂಗಳಿನಲ್ಲಿ ನಡೆದ ಸಭೆಯ ಬಳಿಕ ರಷ್ಯಾದ ಮನವಿಯನ್ನು ತಿರಸ್ಕರಿಸಿದೆ. ಭಾರತೀಯ ಮೂಲಕ ಕಂಪನಿಗಳಿಂದಲೇ ಯುದ್ಧೋಪಕರಣಗಳನ್ನು ಪಡೆಯಲಾಗುತ್ತದೆ ಸರ್ಕಾರದಲ್ಲಿ ಈ ಮೊದಲೇ ಆತಂರಿಕ ಒಪ್ಪಂದ ನಡೆದಿದೆ ಎಂದು ತಿಳಿಸಿದೆ.

ಆದರೆ ರಷ್ಯಾದ ಅದಾನಿ ಗ್ರೂಪ್‌ ಅವರಿಗೆ ಪಾಲುದಾರರಾಗಲು ಸಾಧ್ಯವಿಲ್ಲ ಆದರೆ ಟೆಂಡರ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿಲಾಗಿದೆ. ಆದರೆ ಈ ಪ್ರಸ್ತಾವವನ್ನು ಭಾರತ ಸರ್ಕಾರ ತಿರಸ್ಕರಿಸಿದೆ. ಬರುವ ಅಕ್ಟೋಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಸ್ಕೋಗೆ ಭೇಟಿ ನೀಡಲಿದ್ದು ಆ ವೇಳೆಗೆ ಎಕೆ-103ರೈಫಲ್ ಗಳ ಪೈರೈಕೆ ಒಪ್ಪಂದ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

English summary
Already under Opposition fire over the Rafale fighter deal with France, the government has turned down a Russian request to make the Adani Group its partner for the joint manufacture of Rs 3,000-crore worth of AK-103 assault rifles for the Indian Army.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X