ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಹಿನೂರು ವಜ್ರ ಭಾರತಕ್ಕೆ ತರುವ ಯತ್ನಕ್ಕೆ ಮರುಜೀವ

|
Google Oneindia Kannada News

ನವದೆಹಲಿ, ಏಪ್ರಿಲ್, 20: : ಭಾರತದ ಕೊಹಿನೂರು ವಜ್ರವನ್ನು ಇಂಗ್ಲೆಂಡಿನಿಂದ ತರುವ ಪ್ರಯತ್ನಕ್ಕೆ ಮತ್ತೆ ಜೀವ ಬಂದಿದೆ. ವಜ್ರವನ್ನು ವಾಪಸ್ ತರಲು ಸಾಧ್ಯವಿಲ್ಲ ಎಂದು ಹೇಳಿದ್ದ ಕೇಂದ್ರ ಸರ್ಕಾರ ತನ್ನ ನಿಲುವು ಬದಲಾವಣೆ ಮಾಡಿಕೊಂಡಿದೆ.

ಅತ್ಯಮೂಲ್ಯ ವಜ್ರವನ್ನು ದೇಶಕ್ಕೆ ತರಲು ಸಾಧ್ಯವಿರುವ ಎಲ್ಲ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದೆ. ವಜ್ರವನ್ನು ಕದ್ದು ಅಥವಾ ಬಲವಂತವಾಗಿ ಒಯ್ದದ್ದಲ್ಲ. ಪಂಜಾಬ್‌ನ ಅರಸರು ಇದನ್ನು ಈಸ್ಟ್‌ ಇಂಡಿಯಾ ಕಂಪನಿಗೆ ಉಡುಗೊರೆಯಾಗಿ ನೀಡಿದ್ದರು ಎಂದು ಹೇಳಿದ್ದ ಕೇಂದ್ರ ಸರ್ಕಾರ ತನ್ನ ನಿಲುವನ್ನು ಬದಲಾಯಿಸಿದೆ.[ದುಬಾರಿ ವಜ್ರ 'ಕೊಹಿನೂರು' ಏನಿದರ ತಕರಾರು]

Central Govt Reiterates Resolve to Bring Back Kohinoor Diamond

ಸರ್ಕಾರದ ನೀತಿ ಸ್ಪಷ್ಟ
ವಜ್ರದ ಸಂಬಂಧ ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾದ ಪರಿಣಾಮ ಕೇಂದ್ರ ಸರ್ಕಾರ ತನ್ನ ನಿಲುವನ್ನು ತಿಳಿಸಿದೆ.

ಸುಪ್ರೀಂ ಕೋರ್ಟ್‌ಗೆ ಸರ್ಕಾರದ ನಿಲುವನ್ನು ಇನ್ನೂ ತಿಳಿಸಲಾಗಿಲ್ಲ. ಮಾಧ್ಯಮದಲ್ಲಿ ಈ ಬಗ್ಗೆ ತಪ್ಪು ವರದಿಗಳು ಪ್ರಕಟವಾಗಿವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಈ ವಿಚಾರ ಈಗ ನ್ಯಾಯಾಲಯದಲ್ಲಿ ಇದೆ. ಹಾಗಾಗಿ ಈ ಬಗ್ಗೆ ಏನಾದರೂ ಹೇಳುವುದು ನ್ಯಾಯಾಲಯ ನಿಂದನೆಯಾಗುತ್ತದೆ ಸರ್ಕಾರ ಹೇಳಿದೆ.

'ಭಾರತ ಸರ್ಕಾರದ ನಿಲುವು ಏನು ಎಂಬುದನ್ನು ತಿಳಿಸುವಂತೆ ಸಾಲಿಸಿಟರ್‌ ಜನರಲ್‌ ಅವರಿಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಕೇಂದ್ರದ ನಿಲುವನ್ನು ಇನ್ನೂ ಕೋರ್ಟ್‌ಗೆ ತಿಳಿಸಲಾಗಿಲ್ಲ. ವಿಚಾರಣೆ ವೇಳೆ ಅವರು ಕೊಹಿನೂರ್ ವಜ್ರದ ಇತಿಹಾಸವನ್ನು ತಿಳಿಸಿದ್ದಾರೆ. ಆದರೆ ಇದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಹೇಳಿದೆ.[ಕೊಹಿನೂರು ವಜ್ರ ಮೋದಿ ಕೈಗೆ ಕೊಟ್ಟು ಬಿಡಿ: ಯುಕೆ ಸಂಸದ]

ವರದಿ ಸಲ್ಲಿಕೆ ಮಾಡಲು ಕೇಂದ್ರ ಸರ್ಕಾರಕ್ಕೆ ಆರು ವಾರಗಳ ಅವಧಿಯನ್ನು ನ್ಯಾಯಾಲಯ ನೀಡಿದೆ. ಕೇಂದ್ರದ ವರದಿ ಬಳಿಕ ಸ್ಪಷ್ಟ ನಿರ್ದೇಶನ ಹೊರಬೀಳಲಿದೆ.

ವಜ್ರದ ಬಗ್ಗೆ ನೆಹರು ನಿಲುವೇನಿತ್ತು?
ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಸಹ ವಜ್ರವನ್ನು ವಾಪಸ್ ತರುವುದು ಸುಲಭದ ಕೆಲಸ ಅಲ್ಲ ಎಂದು ಹೇಳಿದ್ದರು. ಕೆಲವೊಂದು ದೇಶಗಳೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಲು ಇಂಥ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಎನ್ ಡಿ ಎ ಸರ್ಕಾರ ಏನು ಮಾಡುತ್ತಿದೆ?
10ನೇ ಶತಮಾನಕ್ಕೆ ಸೇರಿದ ಭಾರತದ ಮೂರ್ತಿಯೊಂದನ್ನು 2015ರ ಏಪ್ರಿಲ್ ನಲ್ಲಿ ಜರ್ಮನಿಯ ಛಾನ್ಸೆಲರ್ ಅಂಜೆಲಾ ಮಾರ್ಕೆಲ್ ಹಿಂದಿರುಗಿಸಿದ್ದರು. ಭಾರತಕ್ಕೆ ಭೇಟಿ ನೀಡಿದ್ದ ಆಸ್ಟ್ರೇಲಿಯಾದ ಪ್ರಧಾನಿ ಸಹ ಭಾರತ ಮೂಲದ ಪುರಾತನ ವಸ್ತುಗಳನ್ನು ಹಿಂದಕ್ಕೆ ನೀಡುತ್ತೇನೆ ಎಂದು ಹೇಳಿಕೆ ನೀಡಿದ್ದರು.

ನರೇಂದ್ರ ಮೋದಿಯವರ ವಿದೇಶ ಪ್ರವಾಸದ ವೇಳೆ ಪುರಾತನ ವಸ್ತುಗಳನ್ನು ಹಿಂದಕ್ಕೆ ಪಡೆಯುವ ಬಗ್ಗೆಯೂ ಚರ್ಚೆ ನಡೆದಿತ್ತು. ಇದೀಗ ಅತ್ಯಮೂಲ್ಯ ಕೊಹಿನೂರು ವಜ್ರವನ್ನು ದೇಶಕ್ಕೆ ಮರಳಿ ತರುವ ಯತ್ನ ಆರಂಭವಾಗಿದೆ.

English summary
The Government of India issued a clarification with regards to its stand on Kohinoor Diamond and stated that some news items appearing in the media are not based on the facts.The Government of India further reiterated its resolve to make all possible efforts to bring back the Kohinoor Diamond in an amicable manner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X