• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಿನಗೂಲಿ ಪರಿಷ್ಕರಣೆಗೆ ಮುಂದಾದ ಕೇಂದ್ರ ಸರ್ಕಾರ

By Madhusoodhan
|

ನವದೆಹಲಿ, ಜುಲೈ, 05: ರಸಗೊಬ್ಬರ ದರ ಇಳಿಕೆ ಮಾಡಿ ರೈತರಿಗೆ ಸಿಹಿಸುದ್ದಿ ನೀಡಿದ್ದ ಕೇಂದ್ರ ಸರ್ಕಾರ ದಿನಗೂಲಿ ನೌಕರರ ಕುಟುಂಬಕ್ಕೂ ಸಿಹಿಸುದ್ದಿ ನೀಡಲು ಮುಂದಾಗಿದೆ.

ಕೃಷಿ, ಕಟ್ಟಡ ನಿರ್ಮಾಣ, ಗಣಿ, ಝಾಡಮಾಲಿಗಳು ಸೇರಿ 45 ವಲಯಗಳ ದಿನಗೂಲಿ ನೌಕರರ ಕನಿಷ್ಠ ವೇತನ ಪರಿಷ್ಕರಣೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಕೇಂದ್ರ ಕಾರ್ಮಿಕ ಇಲಾಖೆ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಹಾಗಾಗಿ ಇನ್ನು ಮುಂದೆ ದಿನಗೂಲಿ ಕಾರ್ಮಿಕರ ಕನಿಷ್ಠ ವೇತನ 400 ರು. ಗಿಂತ ಅಧಿಕವಾಗಲಿದೆ.[ಕಾರ್ಮಿಕನ ಕಾಡಿಸಿ ಬಸ್ ಕಳೆದುಕೊಂಡ ಕೆಎಸ್ಆರ್‌ಟಿಸಿ!]

ದೆಹಲಿಯಲ್ಲಿನ ಅಸಂಘಟಿತ ವಲಯದ ಕಾರ್ಮಿಕರ ದಿನಗೂಲಿ 449 ರು. ಗೆ ನಿಗದಿಯಾಗುವ ಸಾಧ್ಯತೆ ಇದೆ. ಶಸ್ತ್ರಾಸ್ತ್ರ ರಹಿತ ಭದ್ರತಾ ಸಿಬ್ಬಂದಿ ಪ್ರಸ್ತುತ 407 ರೂ. ದಿನಗೂಲಿ ಪಡೆಯುತ್ತಿದ್ದು, ಇವರ ದಿನಗೂಲಿ 169 ರೂ. ಹೆಚ್ಚಳಗೊಂಡು 576 ರೂ.ಗೆ ತಲುಪಲಿದೆ.[ಭವಿಷ್ಯ ನಿಧಿ ನೀತಿ ಬದಲು, ಸರ್ಕಾರ ಕೈ ಸುಟ್ಟಿಕೊಂಡಿದ್ದು ಹೇಗೆ?]

ಕನಿಷ್ಠ ಕೂಲಿ ಕಾನೂನು ಏನು ಹೇಳುತ್ತದೆ?

1948 ರ ಕನಿಷ್ಠ ಕೂಲಿ ಕಾನೂನು ಪ್ರಕಾರ ದಿನಗಗೂಲಿಯನ್ನು ಪ್ರತಿ 5 ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಬೇಕು. ಕೃಷಿ ಕ್ಷೇತ್ರದಲ್ಲಿ ಕೊನೆಯದಾಗಿ 2005 ರಲ್ಲಿ ಪರಿಷ್ಕರಣೆ ಮಾಡಲಾಗಿತ್ತು. ಸ್ವಚ್ಛತೆ ಕಾರ್ಮಿಕರಿಗೆ ಸಂಬಂಧಿಸಿ 2008 ರಲ್ಲಿ ಪರಿಷ್ಕರಣೆ ಮಾಡಲಾಗಿತ್ತು. ಕಟ್ಟಡ ಕಾರ್ಮಿಕರಿಗೆ 2009 ರಲ್ಲಿ ಪರಿಷ್ಕರಣೆ ನೀಡಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಎಲ್ಲ ವಿಭಾಗದ ದಿನಗೂಲಿ ಪರಿಷ್ಕರಣೆಗೆ ಮುಂದಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The central NDA government is in the process of revising the minimum wages of millions of workers in several sectors, including agriculture, construction and mining. The daily wages of a sweeper or an unskilled construction worker in Delhi, for instance, is proposed to be increased by Rs 81 to Rs 449.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more