ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಚ್ಚುವರಿ ಆದಾಯಕ್ಕೆ ಕೇಂದ್ರ ಸರ್ಕಾರದ ಮಾರ್ಗವೇನು?

|
Google Oneindia Kannada News

ನವದೆಹಲಿ, ನವೆಂಬರ್.07: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಿದೆ.

ಈ ಮೂಲಕ ಹೆಚ್ಚುವರಿ ಆದಾಯ ಗಳಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಪ್ರತಿ ಲೀಟರ್ ಪೆಟ್ರೋಲ್ ಮೇಲೆ 1.60 ರೂ. ಮತ್ತು ಪ್ರತೀ ಲೀಟರ್ ಡೀಸಲ್ ಮೇಲೆ 40 ಪೈಸೆ ಅಬಕಾರಿ ಸುಂಕ ಹೆಚ್ಚಿಸಲಾಗಿದೆ. ನವೆಂಬರ್ 1 ರಂದು ಪರಟ್ರೋಲ್ ದರವನ್ನು 50 ಪೈಸೆ ಕಡಿಮೆ ಮಾಡಲಾಗಿತ್ತು. [69 ತೈಲ ನಿಕ್ಷೇಪಗಳ ಹರಾಜಿಗೆ ಕೇಂದ್ರದ ಒಪ್ಪಿಗೆ]

petrol

ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಾಲ್ಕನೇ ಸಾರಿ ಅಬಕಾರಿ ಸುಂಕ ಹೆಚ್ಚಳ ಮಾಡಿದೆ. ಕೋಲ್ ಇಂಡಿಯಾ ಹರಾಜು, ತರಂಗಾಂತರ ಹಂಚಿಕೆ ಮೂಲಕವೂ ಕೇಂದ್ರ ಸರ್ಕಾರ ಬೊಕ್ಕಸವನ್ನು ಭರ್ತಿ ಮಾಡಿಕೊಂಡಿತ್ತು. ಇದೀಗ ಅಬಕಾರಿ ಸುಂಕ ಹೆಚ್ಚಳ ಮಾಡಲಾಗಿದ್ದು ಮತ್ತಷ್ಟು ಆದಾಯ ಹರಿದುಬರುವ ನಿರೀಕ್ಷೆಯಿದೆ. 20 ಸಾವಿರ ಕೋಟಿ ರೂ. ಆದಾಯವನ್ನು ಕೇಂದ್ರ ಸರ್ಕಾರ ಗಳಿಸಿದೆ.[ಆನ್ ಲೈನ್ ನಲ್ಲೇ ಹೊಸ ಗ್ಯಾಸ್ ಸಂಪರ್ಕ ಪಡೆಯಿರಿ]

ತೈಲ ದರ ಏರುವುದೆ?
ಅಬಕಾರಿ ಸುಂಕ ಏರಿಕೆ ಹಿನ್ನೆಲೆಯಲ್ಲಿ ತೈಲ ದರ ಮತ್ತೆ ಏರಿಕೆಯಾಗುವುದೇ? ಎಂಬ ಪ್ರಶ್ನೆ ಮೂಡುತ್ತಿದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರಲ್ ತೈಲ ದರ ಕಡಿಮೆ ಇರುವ ಕಾರಣ ದರ ಏರಿಕೆಯಾಗುವ ಯಾವ ಲಕ್ಷಣಗಳಿಲ್ಲ ಎಂದು ಹೇಳಲಾಗಿದೆ.

English summary
The government tonight hiked excise duty on petrol by Rs 1.60 per litre and the same on diesel by 40 paisa a litre to mop up additional revenue to meet budgetary targets. The basic excise duty on unbranded or normal petrol was increased from Rs 5.46 per litre to Rs 7.06 a litre, according to a CBEC notification.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X