ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಮಿ ಮೇಲೆ ಹೇರಿದ್ದ ನಿಷೇಧ ಇನ್ನೂ ಐದು ವರ್ಷ ಮುಂದುವರಿಕೆ

|
Google Oneindia Kannada News

ನವದೆಹಲಿ, ಫೆಬ್ರವರಿ 2 : ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದಿಟ್ಟ ಹೆಜ್ಜೆ ಇಟ್ಟಿದ್ದು, ಸ್ಟುಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆಯನ್ನು 'ಕಾನೂನು ವಿರೋಧಿ ಸಂಘಟನೆ' ಎಂದು ಘೋಷಿಸಿದೆ.

ಈ ಪ್ರಕಟಣೆಯನ್ನು ಕೇಂದ್ರ ಗೃಹ ಇಲಾಖೆ ಹೊರಡಿಸಿದ್ದು, ಈ ಕಾನೂನು ವಿರೋಧಿ ಸಂಘಟನೆಗೆ ಸಮಾಜದ ಸಾಮರಸ್ಯವನ್ನು ಕದಡುವ ಸಾಮರ್ಥ್ಯವಿದೆ ಮತ್ತು ಅದರ ಚಟುವಟಿಕೆಗಳು ದೇಶದ ಸುರಕ್ಷತೆಗೆ ಮಾರಕವಾಗಿವೆ. ಈ ಸಂಘಟನೆಯ ಮೇಲೆ ಹೇರಿದ್ದ ನಿಷೇಧವನ್ನು ಇನ್ನೂ ಐದು ವರ್ಷಕ್ಕೆ ಮುಂದುವರಿಸಲಾಗುವುದು ಎಂದು ಹೇಳಿದೆ.

ಮೋದಿ ಬಜೆಟ್ ಬಗ್ಗೆ ಮೂಡೀಸ್ ಗಿಲ್ಲ ಉತ್ತಮ ಅಭಿಪ್ರಾಯ! ಮೋದಿ ಬಜೆಟ್ ಬಗ್ಗೆ ಮೂಡೀಸ್ ಗಿಲ್ಲ ಉತ್ತಮ ಅಭಿಪ್ರಾಯ!

ಕಳೆದ ಸರಕಾರವೇ 2014ರಲ್ಲಿ ಈ ಸಂಘಟನೆಯನ್ನು ನಿಷೇಧಿಸಿತ್ತು. ಈ ನಿಷೇಧವನ್ನು ಇನ್ನೂ ಐದು ವರ್ಷಗಳ ಕಾಲ ಮುಂದುವರಿಸಲಾಗಿದೆ. ಆದರೆ, ಈ ಸಂಘಟನೆಯನ್ನು ಪರ್ಮನಂಟ್ ಆಗಿ ಏಕೆ ಬ್ಯಾನ್ ಮಾಡುತ್ತಿಲ್ಲ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಕೆಲವರು ತಡವಾಗಿಯಾದರೂ ಕೇಂದ್ರ ಸರಕಾರ ಸರಿಯಾದ ಕ್ರಮ ಜರುಗಿಸಿದೆ ಎಂದು ಶ್ಲಾಘಿಸಿದ್ದಾರೆ.

Central govt declared SIMI as unlawful association and bans

ಸಿಮಿ ಸಂಘಟನೆಯನ್ನು ಹಿಂದೆ ಕೂಡ ಹಲವಾರು ಬಾರಿ ನಿಷೇಧಿಸಲಾಗಿದೆ. ಮೊದಲ ಬಾರಿ ಅಮೆರಿಕದ ಮೇಲೆ 2001ರ ಸೆಪ್ಟೆಂಬರ್ 26ರಂದು ಭಯೋತ್ಪಾದಕ ದಾಳಿಯಾದ ನಂತರ ಸಿಮಿಯನ್ನು ಮೊದಲ ಬಾರಿ ನಿಷೇಧಿಸಲಾಗಿತ್ತು. ನಂತರ 2003ರಿಂದ 2005ರವರೆಗೆ ಎರಡನೇ ಬಾರಿ ನಿಷೇಧಿಸಲಾಗಿತ್ತು. ನಂತರ ಮೂರನೇ ಬಾರಿ 2006ರ ಫೆಬ್ರವರಿ 8ರಂದು ಸಿಮಿಯನ್ನು ಬ್ಯಾನ್ ಮಾಡಲಾಗಿತ್ತು. 2008ರಲ್ಲಿ ಈ ನಿಷೇಧವನ್ನು ದೆಹಲಿ ಹೈಕೋರ್ಟ್ ತೆರವುಗೊಳಿಸಿತ್ತು. ಆದರೆ, ಅದರ ಮರುದಿನವೇ ಆ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿತ್ತು.

ಚಿತ್ರವಿವರ: ಚುನಾವಣೆಯ ದಿಕ್ಕು ಬದಲಿಸೀತು ಬಜೆಟ್ ನ ಈ 5 ಘೋಷಣೆಚಿತ್ರವಿವರ: ಚುನಾವಣೆಯ ದಿಕ್ಕು ಬದಲಿಸೀತು ಬಜೆಟ್ ನ ಈ 5 ಘೋಷಣೆ

1977ರಲ್ಲಿ ಉತ್ತರ ಪ್ರದೇಶದ ಅಲಿಘರ್ ನಲ್ಲಿ ಸ್ಥಾಪಿತವಾದ ಈ ಸಂಘಟನೆ 20ಕ್ಕೂ ಹೆಚ್ಚು ವಿಧ್ವಂಸಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಪಾಕಿಸ್ತಾನದ ಉಗ್ರ ಸಂಘಟನೆಗಳೊಂದಿಗೂ ಸಂಪರ್ಕ ಹೊಂದಿದೆ. ಉಗ್ರ ಸಂಘಟನೆ ಇಂಡಿಯನ್ ಮುಜಾಹಿದ್ದಿನ್ ಇದೇ ಸಿಮಿಯ ಒಂದು ಶಾಖೆ ಎಂದು ಹೇಳಲಾಗುತ್ತಿದೆ.

English summary
The Central Government hereby declares the Students Islamic Movement of India (SIMI) as an unlawful association. The home minister in a press release has stated that SIMI had potential to create communal disharmony, and its activities were prejudicial to the security of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X