ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Good News: ಶೀಘ್ರದಲ್ಲೇ ಇಡೀ ದೇಶದಲ್ಲಿ ಉಚಿತ ವೈ-ಫೈ ಸೌಲಭ್ಯ

|
Google Oneindia Kannada News

ನವದೆಹಲಿ, ಡಿಸೆಂಬರ್ 09: ಶೀಘ್ರದಲ್ಲೇ ಇಡೀ ದೇಶದಲ್ಲಿ ಉಚಿತ ಇಂಟರ್ನೆಟ್ ಸೌಲಭ್ಯ ಪ್ರಾರಂಭವಾಗಲಿದೆ. ಪ್ರತಿಯೊಬ್ಬರೂ ಉತ್ತಮ ಡೌನ್‌ಲೋಡ್ ವೇಗ ಮತ್ತು ಉಚಿತ ವೈ-ಫೈ ವ್ಯವಸ್ಥೆಯನ್ನು ಒದಗಿಸಲು ಕೇಂದ್ರ ಕ್ಯಾಬಿನೆಟ್ ನಿರ್ಧರಿಸಿದೆ.

ವಾಸ್ತವವಾಗಿ, ಪರವಾನಗಿ ಪಡೆಯದ ಘಟಕಗಳನ್ನು ಬಳಸಿಕೊಂಡು ಸಾರ್ವಜನಿಕ ವೈಫೈ ಮಾರ್ಗದ ಮೂಲಕ ದೇಶಾದ್ಯಂತ ಬ್ರಾಡ್‌ಬ್ಯಾಂಡ್ ಉತ್ತೇಜಿಸಲು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಶಿಫಾರಸನ್ನು ಕೇಂದ್ರ ಕ್ಯಾಬಿನೆಟ್ ಅನುಮೋದಿಸಿದೆ.

ಆತ್ಮನಿರ್ಭರ್ ಭಾರತ: ಹೊಸ ಉದ್ಯೋಗಗಳಿಗೆ ಪ್ರೋತ್ಸಾಹ; 2023 ರ ವೇಳೆಗೆ 22,810 ಕೋಟಿ ರೂ. ವೆಚ್ಚಆತ್ಮನಿರ್ಭರ್ ಭಾರತ: ಹೊಸ ಉದ್ಯೋಗಗಳಿಗೆ ಪ್ರೋತ್ಸಾಹ; 2023 ರ ವೇಳೆಗೆ 22,810 ಕೋಟಿ ರೂ. ವೆಚ್ಚ

ಟ್ರಾಯ್ ಸೂಚಿಸಿದ ಅಗ್ರಿಗೇಟರ್ ಮಾದರಿಯನ್ನು ಕ್ಯಾಬಿನೆಟ್ ಬುಧವಾರ ಅಂಗೀಕರಿಸಿತು, ಸಾರ್ವಜನಿಕ ಡೇಟಾ ಆಫೀಸ್ (ಪಿಡಿಒ), ಸಾರ್ವಜನಿಕ ಡೇಟಾ ಆಫೀಸ್ ಅಗ್ರಿಗೇಟರ್ (ಪಿಡಿಒಎ) ಮತ್ತು ಅಪ್ಲಿಕೇಶನ್ ಪೂರೈಕೆದಾರ ವರ್ಗಗಳಿಗೆ ಪರವಾನಗಿ ಪಡೆಯದ ಸಾರ್ವಜನಿಕ ವೈಫೈ ಸೇವೆಯನ್ನು ಒದಗಿಸಲು ದಾರಿ ಮಾಡಿಕೊಟ್ಟಿತು.

Central Govt approves PM WANI scheme to unleash Wi-Fi revolution

ಪಿಎಂ ವೈಫೈ ಆಕ್ಸೆಸ್ ನೆಟ್‌ವರ್ಕ್ ಇಂಟರ್ಫೇಸ್ (ಪಿಎಂ-ವಾನಿ) ವೇದಿಕೆಯಡಿ ಯಾವುದೇ ಪರವಾನಗಿ ಶುಲ್ಕವನ್ನು ವಿಧಿಸದೆ ಸಾರ್ವಜನಿಕ ಡೇಟಾ ಕಚೇರಿಗಳ ಮೂಲಕ ಸಾರ್ವಜನಿಕ ವೈ-ಫೈ ಸೇವೆಯನ್ನು ಒದಗಿಸಲು ಮತ್ತು ವೈ-ಫೈ ನೆಟ್‌ವರ್ಕ್‌ಗಳನ್ನು ಸ್ಥಾಪಿಸಿಲು ಕ್ಯಾಬಿನೆಟ್ ಅನುಮೋದನೆ ನೀಡಿದೆ.

ಇದರೊಂದಿಗೆ ಭಾರತದಲ್ಲಿ ವೈ-ಫೈ ನೆಟ್‌ವರ್ಕ್ ಅನ್ನು ಬಹಳ ದೊಡ್ಡ ಮಟ್ಟದಲ್ಲಿ ಪ್ರಾರಂಭಿಸಬಹುದು. ಇದು ದೇಶಾದ್ಯಂತ ಸಾರ್ವಜನಿಕ ದತ್ತಾಂಶ ಕೇಂದ್ರಗಳನ್ನು ತೆರೆಯುವುದಾಗಿ ಮಾಹಿತಿ ತಂತ್ರಜ್ಞಾನ (ಐಟಿ) ಸಚಿವ ರವಿಶಂಕರ್ ಪ್ರಸಾದ್ ಘೋಷಿಸಿದ್ದಾರೆ. ಇದಕ್ಕಾಗಿ ಯಾವುದೇ ಪರವಾನಗಿ, ಶುಲ್ಕ ಅಥವಾ ನೋಂದಣಿ ಇರುವುದಿಲ್ಲ.

ಸಾರ್ವಜನಿಕ ವೈ-ಫೈ ಪ್ರವೇಶ ನೆಟ್‌ವರ್ಕ್ ಇಂಟರ್ಫೇಸ್ ಅನ್ನು ಪಿಎಂ-ವಾಣಿ ಎಂದು ಕರೆಯಲಾಗುತ್ತದೆ. ಈ ಪ್ರಸ್ತಾಪವು ದೇಶದಲ್ಲಿ ಸಾರ್ವಜನಿಕ ವೈ-ಫೈ ನೆಟ್‌ವರ್ಕ್ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು. ಪ್ರಸ್ತುತ, ಭಾರತದಾದ್ಯಂತ ವೈ-ಫೈ ಹಾಟ್‌ಸ್ಪಾಟ್‌ಗಳ ಸಂಖ್ಯೆ ಸುಮಾರು 1 ಲಕ್ಷವಾಗಿದ್ದು, ಇದು 2020 ರ ವೇಳೆಗೆ 50 ಲಕ್ಷ ಮತ್ತು 2022 ರ ವೇಳೆಗೆ 1 ಕೋಟಿ ಗುರಿ ಹೊಂದಿದೆ.

English summary
The Union Cabinet Wednesday approved the setting up of public WiFi networks across the country in a bid to strengthen the public WiFi service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X