ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸಗೊಬ್ಬರ ದರ ಗಣನೀಯ ಇಳಿಕೆ: ಕೇಂದ್ರಕ್ಕೆ ಧನ್ಯವಾದ

By Madhusoodhan
|
Google Oneindia Kannada News

ಬೆಂಗಳೂರು, ಜುಲೈ, 04: ರಸಗೊಬ್ಬರ ಪೂರೈಕೆ ಮತ್ತು ಸರಿಯಾದ ದರದಲ್ಲಿ ರೈತರಿಗೆ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದ್ದು ಗೊಬ್ಬರ ದರವನ್ನು ಕಡಿಮೆ ಮಾಡಿ ರೈತರಿಗೆ ಸಿಹಿ ಸುದ್ದಿ ನೀಡಿದೆ.

ಇಂದಿನಿಂದಲೇ ಜಾರಿಗೆ ಬರುವಂತೆ ಅಮೋನಿಯಂ ಫಾಸ್ಫೇಟ್ (ಡಿಎಪಿ), ಪೊಟ್ಯಾಶ್ (ಎಂಒಪಿ) ಮತ್ತು ಸಾರಜನಕ ಫಾಸ್ಫೇಟ್ ಮತ್ತು ಪೊಟ್ಯಾಶ್ ಸಂಯೋಜನೆ (ಎನ್ ಪಿ ಕೆ) ಗೊಬ್ಬರಗಳ ದರ ಇಳಿಕೆ ಮಾಡಲಾಗಿದೆ. ದೇಶದಲ್ಲಿ ರಸಗೊಬ್ಬರ ಕೊರತೆ ಇಲ್ಲ. ಯುರಿಯಾ, ಡಿ ಎಪಿ, ಎನ್ ಪಿಕೆ ಸೇರಿದಂತೆ ಎಲ್ಲ ಗೊಬ್ಬರಗಳನ್ನು ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಇಡಲು ಸೂಚಿಸಲಾಗಿದೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ತಿಳಿಸಿದರು.[ಹಸಿರೇ ಉಸಿರು ಎಂದ ಅದಮ್ಯ ಚೇತನ]

bjp

ನವದೆಹಲಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರ ನೆರವಿಗೆ ಕೇಂದ್ರ ಸರ್ಕಾರ ಸದಾ ಬದ್ಧವಿದ್ದು, ಗೊಬ್ಬರಗಳ ಎಂ ಆರ್ ಪಿ ದರದಲ್ಲೂ ಕಡಿತ ಮಾಡಲಾಗಿದೆ ಎಂದು ತಿಳಿಸಿದರು.

ದರ ಕಡಿತದ ಲಾಭವನ್ನು ರೈತರು ಪಡೆದುಕೊಳ್ಳಬೇಕು ಜತೆಗೆ ಯಾವುದೇ ಮಾರುಕಟ್ಟೆಯಲ್ಲೂ ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟವಾಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸಚಿವರು ತಿಳಿಸಿದರು. ಗೊಬ್ಬರ ತಯಾರಿಕಾ ಕಂಪನಿಗಳು ದರ ಇಳಿಕೆಗೆ ಸಮ್ಮತಿ ನೀಡಿವೆ ಎಂದು ತಿಳಿಸಿದರು.[ಉಡುಪಿಯಲ್ಲಿ ಖರ್ಜೂರ ಬೆಳೆದು ತೋರಿಸಿದ ಸಾಧಕ!]

ಗೊಬ್ಬರ ದರ ಕಡಿತ ಪಟ್ಟಿ
* ಡಿಎಪಿ- 50 ಕೆಜಿಯ ಚೀಲದ ಡಿಎಪಿ ಮೇಲೆ 125 ರು. ಕಡಿತ ಮಾಡಲಾಗಿದೆ.
* ಎಮ್ ಒಪಿ- 50 ಕೆಜಿಯ ಚೀಲದ ಡಿಎಪಿ ಮೇಲೆ 250 ರು. ಕಡಿತ ಮಾಡಲಾಗಿದೆ.
* ಎನ್ ಪಿಕೆ- 50 ಕೆಜಿಯ ಚೀಲದ ಡಿಎಪಿ ಮೇಲೆ ಸರಾಸರಿ 50 ರು. ಕಡಿತ ಮಾಡಲಾಗಿದೆ.

English summary
In a bid to promote more balanced use of all varieties of fertilisers, the government has announced reduction in prices of key fertilisers such as Diammonium Phosphate (DAP), Muriate of Potash (MOP) and Nitrogen Phosphate and Potash composition (NPK). Chemical and Fertiliser Minister Ananth Kumar said at a press conference on Monday July 4, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X