• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಸುಳ್ಳುಸುದ್ದಿ' ಕಡಿವಾಣದ ನೆಪದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ?!

|
Google Oneindia Kannada News

ನವದೆಹಲಿ, ಏಪ್ರಿಲ್ 03: 'ಸುಳ್ಳು ಸುದ್ದಿ' ಪ್ರಕಟಿಸುವ, ಅಥವಾ ಹಬ್ಬಿಸುವ ಪತ್ರಕರ್ತರ ಮಾನ್ಯತೆ ರದ್ದುಗೊಳಿಸುವ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರದ ಕುರಿತು ಟ್ವಿಟ್ಟರ್ ನಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಪತ್ರಕರ್ತರ ಮಾನ್ಯತೆಗೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳಲ್ಲಿ ತಿದ್ದುಪಡಿ ತಂದು, ಸುಳ್ಳು ಸುದ್ದಿ ಬಿತ್ತರಿಸಿದ್ದು ಸಾಬೀತಾದರೆ ಅಂಥ ಪತ್ರಕರ್ತರ ಮಾನ್ಯತೆ(ಅಕ್ರೆಡಿಷನ್) ರದ್ದು ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಆದರೆ, 'ಈ ತಿದ್ದುಪಡಿ ದುರುಪಯೋಗವಾಗುವ ಸಾಧ್ಯತೆ ಹೆಚ್ಚು. ದುರುಪಯೋಗವಾದಲ್ಲಿ ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯ ಕಿತ್ತುಕೊಂಡಂತಾಗುತ್ತದೆ' ಎಂದು ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಅಭಿಪ್ರಾಯಕ್ಕೆ ಶ್ರೀಸಾಮಾನ್ಯರೂ ದನಿಗೂಡಿಸಿದ್ದಾರೆ.

ಸುಳ್ಳು ಸುದ್ದಿ ಮಾಡುವ ಪತ್ರಕರ್ತರ ಮಾನ್ಯತಾ ಪತ್ರ ರದ್ದು ಸುಳ್ಳು ಸುದ್ದಿ ಮಾಡುವ ಪತ್ರಕರ್ತರ ಮಾನ್ಯತಾ ಪತ್ರ ರದ್ದು

'ಸುಳ್ಳು ಸುದ್ದಿ ಪ್ರಕಟಿಸದಿದ್ದರಾಯ್ತು. ಸುಳ್ಳು ಸುದ್ದಿಯಲ್ಲ ಎಂಬ ವಿಶ್ವಾಸ ನಿಮಗಿದ್ದರೆ ಭಯಪಡುವ ಅಗತ್ಯವೇನಿದೆ? ಅದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾದಂತೆ ಹೇಗಾಗುತ್ತದೆ' ಎಂದು ಹಲವರು ಪತ್ರಕರ್ತರನ್ನೂ ಕುಟುಕಿದ್ದಾರೆ. ಒಟ್ಟಿನಲ್ಲಿ 'ಫೇಕ್ ನ್ಯೂಸ್' ಹ್ಯಾಶ್ ಟ್ಯಾಗ್ ಈಗ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದೆ.

ಇದೆಂಥ ಹುಚ್ಚು ನಿರ್ಧಾರ?!

ಅಕಸ್ಮಾತ್ ಈ ಸರ್ಕಾರ ತನ್ನ ವಿರುದ್ಧ ಬರುವ ಸುದ್ದಿಯನ್ನೆಲ್ಲ ಸುಳ್ಳು ಸುದ್ದಿ ಎಂದರೆ ಅದಕ್ಕೇನು ಮಾಡೋಣ? ಇದು ಪತ್ರಕರ್ತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ. ಈ ಆದೇಶವನ್ನೇ ಸುಳ್ಳು ಸುದ್ದಿ ಎಂದು ಪ್ರಕಟಿಸಬೇಕು! ಮತ್ತು ತಿರಸ್ಕರಿಸಬೇಕು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ ರವಿ ಸೊರಾಥಿಯಾ.

ಭಾರತದಲ್ಲಿ ಕುಸಿದ ಪತ್ರಿಕಾ ಸ್ವಾತಂತ್ರ್ಯ, ರಾಷ್ಟ್ರೀಯತೆ ಹೆಸರಲ್ಲಿ ಬೆದರಿಕೆ: ವರದಿ ಭಾರತದಲ್ಲಿ ಕುಸಿದ ಪತ್ರಿಕಾ ಸ್ವಾತಂತ್ರ್ಯ, ರಾಷ್ಟ್ರೀಯತೆ ಹೆಸರಲ್ಲಿ ಬೆದರಿಕೆ: ವರದಿ

ಸ್ವಾಗತಾರ್ಹ ನಿರ್ಧಾರ

ಕೇಂದ್ರ ಸರ್ಕಾರ 'ಸುಳ್ಳು ಸುದ್ದಿ'ಯ ಮೇಲೆ ಕಡಿವಾಣ ಹಾಕುತ್ತಿರುವ ಈ ನಿರ್ಧಾರ ನಿಜಕ್ಕೂ ಸ್ವಾಗತಾರ್ಹ. ಮುಖ್ಯ ವಾಹಿನಿಯ ಮಾಧ್ಯಮಗಳು ಇನ್ನಾದರೂ ಸುಳ್ಳು ಸುದ್ದಿಗಳ ಮೂಲಕ ನಾಗರಿಕರಿಗೆ ಕಿರಿಕಿರಿ ನೀಡುವುದನ್ನು ನಿಲ್ಲಿಸಬೇಕು ಎಂದು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ ಕೆ.ಜಿ.ಸುದರ್ಶನ್.

ಸುಳ್ಳು ಸುದ್ದಿ ಎಂದು ತೀರ್ಮಾನಿಸುವುದು ನಿಮ್ಮ ಪಕ್ಷವೇ?

ಅಷ್ಟಕ್ಕೂ ಇದು ಸುಳ್ಳು ಸುದ್ದಿ ಎಂದು ತೀರ್ಮಾನಿಸುವವರು ಯಾರು? ನಿಮ್ಮ ಪಕ್ಷವೇ? ನಿನ್ನೆ ಭಾರತ್ ಬಂದ್ ಆಗಿದ್ದು ಸತ್ಯಾವೇ? ಅಥವಾ ಅದು ಕೇವಲ ಸುಳ್ಳು ಸುದ್ದಿಯೇ?/ ನಿರುದ್ಯೋಗ ಸುಳ್ಳು ಸುದ್ದಿಯೇ? ಅಪನಗದೀಕರಣದಿಂದ ಸಾವಿಗೀಡಾಗಿದ್ದು? ಸುಳ್ಳು ಸುದ್ದಿ ಅಲ್ಲವೇ? ಪ್ರಶ್ನೆ ಪತ್ರಿಕೆ ಸೋರಿಕೆ? ಅದು ಸುಳ್ಳೋ, ಸತ್ಯವೋ? ಎಂದು ಕಿಡಿಕಾರಿದ್ದಾರೆ ಪತ್ರಕರ್ತೆ ಸಾಗರಿಕಾ ಘೋಷ್.

ಪತ್ರಕರ್ತರು ಸತ್ಯನಿಷ್ಠರಾಗಿರಬೇಕು

ಸುಳ್ಳು ಸುದ್ದಿ ಬಿತ್ತುವ ಪತ್ರಕರ್ತರ ಮಾನ್ಯತೆಯನ್ನು ಶಾಶ್ವತವಾಗಿ ರದ್ದು ಮಾಡುವುದಾಗಿ ಸರ್ಕಾರ ಹೇಳಿದೆ. ಈ ನಿರ್ಧಾರ ನಿಜಕ್ಕೂ ಸ್ವಾಗತಾರ್ಹ. ಈ ನಿರ್ಧಾರಕ್ಕೆ ತಕ್ಕಂತೆ ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೆ ತರಬೇಕು. ಪತ್ರಕರ್ತರಾದವರು ಎಂದಿಗೂ ಸತ್ಯನಿಷ್ಠರಾಗಿರಬೇಕು ಎಂದು ವಿವೇಕಾನಂದ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಸುಳ್ಳು ಸುದ್ದಿಗೆ ಕಡಿವಾಣ ಓಕೆ, ಸುಳ್ಳು ಡಿಗ್ರಿ ಕತೆ ಏನು..?

ಸುಳ್ಳು ಸುದ್ದಿ ಪ್ರಕಟಿಸುವ, ಬಿತ್ತರಿಸುವ ಪತ್ರಕರ್ತರ ವಿರುದ್ಧ ಕ್ರಮ ಮತ್ತು ಮಾನ್ಯತೆ ರದ್ದುಗೊಳಿಸುವ ನಿರ್ಧಾರವೇನೋ ಸರಿ. ಆದರೆ ಸುಳ್ಳು ಡಿಗ್ರಿ ಪಡೆದವರ ಕತೆ ಏನು ಎಂದು ಸ್ಮೃತಿ ಇರಾಣಿ ಅವರನ್ನುದ್ದೇಶಿಸಿ ಪ್ರಶ್ನಿಸಿದ್ದಾರೆ ರಮಣ್ ಶರ್ಮಾ.

ನಿಮಗ್ಯಾಕೆ ಇಷ್ಟೆಲ್ಲ ಭಯ?

ಸುಳ್ಳುಸುದ್ದಿಗೆ ಸಂಬಂಧಿಸಿದಂತೆ ಸರ್ಕಾರ ನಿರ್ಧಾರ ತೆಗೆದುಕೊಂಡರೆ ನಿಮಗೇಕೆ ಭಯ? ನಿಮ್ಮ ಕಡೆಯಿಂದ ಯಾವುದೇ ಸುಳ್ಳು ಸುದ್ದಿ ಪ್ರಕಟವಾಗಿಲ್ಲ ಎಂಬ ವಿಶ್ವಾಸವಿದ್ದರೆ ಭಯಪಡುವ ಅಗತ್ಯವೇನಿದೆ? ಈ ನಿರ್ಧಾರವನ್ನು ನಿಮಗಾಗಿಯೇ ಮಾಡಿದ್ದು ಎಂದು ಯಾಕೆ ತಿಳಿಯುತ್ತೀರಿ? ಭಯವಾಗುತ್ತಿದೆಯೇ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ ಆಶೇಶ್ ಖಾಂಡೇಲ್.

ಇದು ಭಯಪಡುವ ವಿಚಾರ!

ನೀವು ಬಿಜೆಪಿಯೋ, ಕಾಂಗ್ರೆಸ್ಸೊ ಅಥವಾ ಇನ್ಯಾರೋ. ಈ ನಿರ್ಧಾರಕ್ಕೆ ಬೆಂಬಲಿಸುವುದು ಆತಂಕಕಾರಿ ವಿಚಾರ. ಏಕೆಂದರೆ ಸರ್ಕಾರ ಬದಲಾಗುತ್ತಿರುತ್ತದೆ. ಈ ತಿದ್ದುಪಡಿಯಿಂದ ಕಂಡ ಕಂಡ ಸುದ್ದಿಗಳಿಗೆಲ್ಲ ಪತ್ರಕರ್ತರ ಮೇಲೆ ಪ್ರಕರಣ ದಾಖಲಾಗು ಮಾಡುವುದಕ್ಕೆ ಆರಂಭಿಸಿದರೆ ಪತ್ರಕರ್ತನ ವಿಶ್ವಾಸಾರ್ಹತೆ ಕಡಿಮೆಯಾಗುತ್ತದೆ, ಆತನ ಘನತೆಗೆ ಇದು ಪೆಟ್ಟು ಕೊಟ್ಟಂತೆ ಎಂದಿದ್ದಾರೆ ಆದಿತ್ಯ ಎಂಬುವವರು.

ಅದು ಓದುಗರಿಗೆ ಬಿಟ್ಟಿದ್ದು!

ಸುಳ್ಳು ಸುದ್ದಿಯನ್ನು ನಿಲ್ಲಿಸುವುದಕ್ಕೆ ಯಾರಿಗೂ ಸಾಧ್ಯವಿಲ್ಲ. ಕೆಲವೊಮ್ಮೆ ಸುದ್ದಿ ಪ್ರಕಟಿಸಿದ ಪತ್ರಕರ್ತನಿಗೂ ಗೊತ್ತರುವುದಿಲ್ಲ. ಆ ಕುರಿತು ಪರಾಮರ್ಶಿಸಿದರೂ ಗೊತ್ತಾಗದೆ ಇರಬಹುದು. ಸುಳ್ಳು ಸುದ್ದಿಗಳ ಮೇಲೆ ಕಡಿವಾಣ ಹಾಕಿದರೆ ಯಾರೊಬ್ಬರು ಯಾರ ಮೇಲೂ ಭ್ರಷ್ಟಾಚಾರದ ಆರೋಪ ಹೊರಿಸುವುದಿಲ್ಲ. ಅತವಾ ತಪ್ಪನ್ನು ಬೆರಳುಮಾಡಿ ತೋರಿಸುವುದಕ್ಕೆ ಹೋಗುವುದಿಲ್ಲ. ಇದರಿಂದ ಭ್ರಷ್ಟಾಚಾರ ಮತ್ತು ತಪ್ಪುಗಳು ಬೆಳಕಿಗೆ ಬರುವುದೇ ಇಲ್ಲ. ಸುದ್ದಿಯನ್ನು ಓದುಗರಿಗೆ ಬಿಡಿ. ಅದು ಸುಳ್ಳೋ, ಸತ್ಯವೋ ಎಂಬುದನ್ನು ಅವರೇ ನಿರ್ಧರಿಸಲಿ ಎಂದೊಬ್ಬರು ಟ್ವೀಟ್ ಮಾಡಿದ್ದಾರೆ.

English summary
The central government on April 3rd said the accreditation of a journalist could be permanently cancelled if the person is found generating or propagating fake news, as it came out with stringent measures to contain the menace. Mant people oppose this decision and some people supported. Here are Twitter statements on Fake news!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X