ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್‌ನಿಂದ ಮೃತಪಟ್ಟವರ ಕುಟುಂಬಕ್ಕೆ 4 ಲಕ್ಷ ರೂ ಪರಿಹಾರ

|
Google Oneindia Kannada News

ನವದೆಹಲಿ, ಮಾರ್ಚ್ 14: ಕೊರೊನಾ ವೈರಸ್( ಕೊವಿಡ್ 19)ನಿಂದ ಮೃತಪಟ್ಟವರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಇದುವರೆಗೆ ದೇಶದಲ್ಲಿ ಇಬ್ಬರು ಕೊರೊನಾ ವೈರಸ್‌ನಿಂದ ಜೀವ ಕಳೆದುಕೊಂಡಿದ್ದಾರೆ. ದೇಶದಲ್ಲಿ ಇದುವರೆಗೂ ಒಟ್ಟು 83 ಪ್ರಕರಣಗಳು ಪತ್ತೆಯಾಗಿವೆ. ಏಪ್ರಿಲ್ 15ರವರೆಗೆ ಎಲ್ಲಾ ವೀಸಾವನ್ನು ರದ್ದುಪಡಿಸಲಾಗಿದೆ.

ಕೇಂದ್ರ ಸರ್ಕಾರವು ಮಾಸ್ಕ್‌ಗಳನ್ನು ಧರಿಸಿ, ಸ್ಯಾನಿಟೈಸರ್‌ನಿಂದ ಪದೇ ಪದೇ ಕೈ ತೊಳೆಯಿರಿ ಎಂದು ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಎಂಆರ್ಪಿ ದರಕ್ಕೆ ಯಾವುದೂ ಲಭ್ಯವಾಗುತ್ತಿಲ್ಲ.

modi

ದೇಶದ ಹಲವೆಡೆ ಶಾಲಾ, ಕಾಲೇಜುಗಳು, ಹೋಟೆಲ್‌ಗಳು, ಚಿತ್ರ ಮಂದಿರ, ಮಾಲ್‌ಗಳು, ಮಾರ್ಕೆಟ್‌, ಹೋಟೆಲ್‌ಗಳನ್ನು ಬಂದ್ ಮಾಡಲಾಗಿದೆ.
ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಗೋವಾ, ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಪಂಜಾಬ್, ಪಶ್ಚಿಮ ಬಂಗಾಳದಲ್ಲಿ ಕೊರೊನಾವನ್ನು ಸಾಂಕ್ರಾಮಿಕ ರೋಗ ಎಂದು ಕರೆಯಲಾಗಿದೆ.

ಅಯ್ಯೋ ಪಾಪ.. ಆಗಷ್ಟೇ ಹುಟ್ಟಿದ ಹಸುಗೂಸಿಗೂ ಕೊರೊನಾ ಸೋಂಕು!ಅಯ್ಯೋ ಪಾಪ.. ಆಗಷ್ಟೇ ಹುಟ್ಟಿದ ಹಸುಗೂಸಿಗೂ ಕೊರೊನಾ ಸೋಂಕು!

ಅಮೆರಿಕ ಸೇನಾಪಡೆ ಕೊರೊನಾ ವೈರಸ್​ ಅನ್ನು ವುಹಾನ್​ಗೆ ತಂದಿರಬಹುದು ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿಜಿಯಾನ್ ಝಾವೋ ಹೇಳಿದ್ದರು.
ಇದುವರೆಗೂ ಚೀನಾದಲ್ಲಿ 4 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.

English summary
The Narendra Modi government on Saturday decided to treat COVID-19 as a notified ‘disaster’ in a bid to provide much-needed relief under the State Disaster Response Fund (SDRF).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X