• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ದಲಿತ' ಪದಬಳಕೆಗೆ ಬ್ರೇಕ್: ಅದು ಜಾತಿಯಲ್ಲ ಚಳವಳಿ!

|

'ದಲಿತ' ಎಂಬ ಪದ ಬಳಕೆಯನ್ನು ನಿಲ್ಲಿಸುವಂತೆ ಮತ್ತು ಅದರ ಬದಲಾಗಿ ಪರಿಶಿಷ್ಟ ಜಾತಿ ಎಂಬ ಸಾಂವಿಧಾನಿಕ ಪದವನ್ನು ಬಳಸುವಂತೆ ಕೇಂದ್ರ ಸರ್ಕಾರ ಮಾಧ್ಯಮಗಳಿಗೆ ಸೂಚನೆ ನೀಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ಕುರಿತು ಸಾಕಷ್ಟು ಜನ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. 'ದಲಿತ' ಎಂಬ ಪದ ಒಂದು ಜಾತಿಯ ಸೂಚಕವಲ್ಲ, ಅದೊಂದು ಚಳವಳಿ ಎಂದು ಆ ಪದಬಳಕೆಯನ್ನು ಹಲವರು ಸಮರ್ಥಿಸಿಕೊಂಡಿದ್ದಾರೆ.

'ದಲಿತ' ಪದ ಪ್ರಯೋಗಕ್ಕೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ!

'ಹೌದು, ನಾವೆಲ್ಲ ಭಾರತೀಯರು, ನಾವೆಲ್ಲ ಹಿಂದುಗಳು. ಹಾಗಿದ್ದ ಮೇಲೆ ದಲಿತ ಎಂದಾಗಲೀ, ಇನ್ಯಾವುದೇ ಹೆಸರಿನಿಮದ ಗುರುತಿಸಿಕೊಳ್ಳುವುದೇಕೆ? ಹಿಂದು ಎಂದರೆ ಸಾಕಲ್ಲವೇ' ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಒಟ್ಟಿನಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಈ ಸೂಚನೆ ಒಂದಷ್ಟು ಬಿಸಿ ಬಿಸಿ ಚರ್ಚೆಗೆ ಆಹಾರವಾಗಿದೆ!

ಅದೊಂದು ಚಳವಳಿ

ಬಾಬಾ ಸಾಹೇಬ್ ಅಂಬೇಡ್ಕರ್ ಎಂದಿಗೂ ಹೇಳುತ್ತಿದ್ದರು, ಸಂವಿಧಾನವು ಶೋಷಿತವರ್ಗಕ್ಕೆ ಕಾನೂನಾತ್ಮಕ ಸಮಾನತೆ ಮತ್ತು ಸ್ವಾತಂತ್ರ್ಯ ನೀಡಿದೆ. ಆದರೆ ಭ್ರಾತೃತ್ವ ನೀಡಿಲ್ಲ ಎಂದು. ಅವರನ್ನು ಈಗಲೂ ಅಸಮಾನತೆಯಿಂದಲೇ ನೋಡಲಾಗುತ್ತಿದೆ, ಅವರಿಗೆ ಸಾಮಾಜಿಕ ನ್ಯಾಯ ನೀಡಲಾಗುತ್ತಿಲ್ಲ. ದಲಿತ ಎಂಬ ಪದಸಾಮಾಜಿಕ ನ್ಯಾಯವನ್ನು ಉಡುಕುವ ಒಂದು ಚಳವಳಿಯಾಗಿದೆ' ಎಂದಿದ್ದಾರೆ ಅಶುತೋಷ್.

ಹೆಸರು ಬದಲಿಸುವುದರಲ್ಲೇನಿದೆ?

ಒಬ್ಬ ದಲಿತ ಎಂದರೆ ದಲಿತ ಅಷ್ಟೇ. ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯವರನ್ನು, ಹಿಂದುಳಿದವರನ್ನು ಮುಂದೆ ತರುವುದು ದೇಶದ ಕರ್ತವ್ಯ. ಹೆಸರು ಬದಲಿಸುವುದರಿಂದ ಏನು ಪ್ರಯೋಜನ ಎಂದಿದ್ದಾರೆ ಜಾರ್ಜ್ ಕಳ್ಳಿವಯಾಲಿಲ್.

ಮಾಹಿತಿ ಮತ್ತು ಪ್ರಸಾರ ಖಾತೆಗೆ ಈ ಅಧಿಕಾರ ಇದೆಯೇ?

ದಲಿತ ಎಂಬ ಪದಪ್ರಯೋಗದ ಮೇಲೆ ನಿರ್ಬಂಧ ಹೇರಿವ ಅಧಿಕಾರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯಕ್ಕಿದೆಯೇ? ಇಂದು ಅವರು ದಲಿತ ಎಂಬ ಪದಪ್ರಯೋಗ ಮಾಡದಂತೆ ಮಾಧ್ಯಮಗಳಿಗೆ ಸೂಚಿಸಿದ್ದಾರೆ. ನಾಳೆ 'ಸಿಕ್ಯುಲರ್', 'ಅರ್ಬನ್ ನಕ್ಸಲ್ ' ಅಥವಾ ಇನ್ನಿತರ ಪದಗಳ ಮೇಲೆ ಮತ್ತು ಅವುಗಳ ವ್ಯಾಖ್ಯಾನದ ಮೇಲೂ ನಿರ್ಬಂಧ ಹೇರುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ ಗುರದೀಪ್ ಸಿಂಗ್ ಸಪ್ಪಲ್.

ಶೂದ್ರದ ಬದಲು ಈ ಪದ ಬಳಸಿದರೆ ತಪ್ಪೇನು?

ಪದಬಳಕೆಗೆ ಬ್ರೇಕ್ ಹಾಕುವ ನಿಯಮವನ್ನು ವಿದೇಯವಾಗಿ ಖಮಡಿಸುತ್ತೇನೆ. ಮೊದಲು ಶೂದ್ರ ಎಂದು ಕರೆಯಲಾಗುತ್ತಿತ್ತು. ಅದರಿಂದ ಬೇಸತ್ತು ಈಗ ದಲಿತ ಎಂಬ ಪದ ಬಳಸುತ್ತಿದ್ದೇವೆ. ತಪ್ಪೇನು? ಆದರೆ ಈ ಪದ ರಾಜಕಾರಣಿಗಳಿಗೆ, ಮಾಧ್ಯಮಗಳಿಗೆ ಒಂದು ಸಾಧನವಾಗಿದೆ ಅಷ್ಟೆ. ಮುಖ್ಯವಾಹಿನಿಗೆ ಅವರನ್ನು ಕರೆತರುವ ಕೆಲಸವಾಗುತ್ತಿಲ್ಲ' ಎಂದು ವಿಷಾದ ವ್ಯಕ್ತಪಡಿಸಿದ್ದಾರೆ ಅನುಪಮ್ ಸಿಂಗ್.

ಈ ಪದ ದುರ್ಬಳಕೆಯಾಗುತ್ತಿದೆಯಷ್ಟೆ!

ದಲಿತ ಎಂಬ ಪದ ಕೇವಲ ವೋಟ್ ಬ್ಯಾಂಕಿಗಷ್ಟೇ. ನಿಜಕ್ಕೂ ಅವರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ರಾಜಕಾರಣಿಗಳು ಆ ಪದವನ್ನು ಮತಕ್ಕಾಗಿ ಬಳಸಿಕೊಳ್ಳುತ್ತಾರೆ. ಮಾಧ್ಯಮಗಳು ಗಮನ ಸೆಳೆಯಲು ಈ ಪದ ಬಳಸುತ್ತವೆ ಅಷ್ಟೆ. ನಿಜಕ್ಕೂ ಈ ಪದ ದುರ್ಬಳಕೆಯಾಗುತ್ತಿದೆ ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ ಪಂಕಜ್.

ದಲಿತ ಎಂದು ಯಾಕೆ ಕರೆಯಬೇಕು?

ದಲಿತ ಎಂದು ಒಬ್ಬ ವ್ಯಕ್ತಿಯನ್ನು ಯಾಕೆ ಕರೆಯಬೇಕು? ಹಾಗೆ ಕರೆದರೆ ಸಮಾನತೆಗೆ ಯಾವ ಬೆಲೆ ಬಂದಂತಾಯ್ತು? ನಮ್ಮ ಮೂಲಭೂತ ಹಕ್ಕುಗಳ ಕತೆ ಏನಾಯ್ತು? ಇದೆಂಥ ಆಷಾಡಭೂತಿತನ? ನಿಜಕ್ಕೂ ನಾಚಿಕೆಗೇಡು! ಎಂದಿದ್ದಾರೆ ವಿಷ್ಣು ಗೋಪಾಲ್.

ಅದೊಂದು ಅಸಾಂವಿಧಾನಿಕ ಪದ

ದಲಿತ ಎಂಬುದು ಒಂದು ಅಸಾಂವಿಧಾನಿಕ ಪದ. ಅಂಥದೊಂದು ಸಮುದಾಯವೇ ಭಾರತದಲ್ಲಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡದ ಹಿಂದುಗಳನ್ನು ಮಾತ್ರವೇ ಸಂವಿಧಾನದಲ್ಲಿ ಗುರುತಿಸಲಾಗಿದೆ. ಸಂವಿಧಾನವೇ ನಮ್ಮ ಧರ್ಮ ಎನ್ನುವ ಉದಾರವಾದಿಗಳು ಇದನ್ನು ಒಪ್ಪಲೇಬೇಕು ಎಂದಿದ್ದಾರೆ ಅನಿಲ್ ಕುಮಾರ್ ಜಿ.

ಹಾಗಿದ್ದರೆ ಸಂವಿಧಾನ ಬದಲಿಸಿ!

ನಮ್ಮ ಸಂವಿಧಾನದ ಬಗ್ಗೆ ನಾವು ಓದುವಾಗ ಎಲ್ಲಿಯಾದರೂ ದಲಿತ, ಬ್ರಾಹ್ಮಣ ಎಂಬ ಪದವನ್ನು ಓದಿದ್ದೇವೆ? ಹಾಗೊಮ್ಮೆ ಅದರಲ್ಲಿ ಇಂಥ ಪದಗಳಿದ್ದಿದ್ದೇ ಆದರೆ ಸಂವಿಧಾನವನ್ನು ಬದಲಿಸಿ ಎಂದಿದ್ದಾರೆ ರಾಕೇಶ್.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
'Dalit, the word doesn't represent a caste, but it is a movement, many twitterians said. The opinion comes after 'Central government told to media not to use word 'Dalit' and instead use Scheduled Caste.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more