ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಕೇಂದ್ರದ ಮೊದಲ ಕ್ರಮವೇನು?

|
Google Oneindia Kannada News

ನವದೆಹಲಿ, ಜೂನ್ 14: ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪ್ರಭಾವ ತೋರಲಿದೆ. ಈ ಅವಧಿಯಲ್ಲಿ ಅಧಿಕ ಮಕ್ಕಳು ಕೊರೊನಾ ಸೋಂಕಿಗೆ ತುತ್ತಾಗಲಿದ್ದಾರೆ ಎಂದು ಕೆಲವು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮಕ್ಕಳಲ್ಲಿ ಕೊರೊನಾ ಸೋಂಕಿನ ಸಾಧ್ಯತೆಗಳ ಕುರಿತು ಸಾಕಷ್ಟು ವರದಿಗಳು ಲಭ್ಯವಿಲ್ಲದಿದ್ದರೂ ಕೇಂದ್ರ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.

ಇದೇ ನಿಟ್ಟಿನಲ್ಲಿ ಸರ್ಕಾರ ಹಲವು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಮಕ್ಕಳಿಗೆ ಆದ್ಯತೆಯಲ್ಲಿ ಲಸಿಕೆ ನೀಡುವ ಆಲೋಚನೆಯೊಂದಿಗೆ ಕೋವ್ಯಾಕ್ಸಿನ್ ಲಸಿಕೆಯ ಪ್ರಯೋಗವನ್ನೂ ನಡೆಸಲಾಗುತ್ತಿದೆ. ಇದೀಗ 12-18ರ ವಯೋಮಾನದ 130 ಮಿಲಿಯನ್ ಮಕ್ಕಳಲ್ಲಿ 80% ಮಕ್ಕಳಿಗೆ ಲಸಿಕೆ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿರುವುದಾಗಿ ತಿಳಿದುಬಂದಿದೆ. ಮುಂದೆ ಓದಿ...

 210 ಮಿಲಿಯನ್ ಡೋಸ್ ಲಸಿಕೆ ಅಗತ್ಯ

210 ಮಿಲಿಯನ್ ಡೋಸ್ ಲಸಿಕೆ ಅಗತ್ಯ

ಮಕ್ಕಳಿಗೆ ಮುಂಚಿತವಾಗಿಯೇ ಲಸಿಕೆ ನೀಡುವುದು ಕೊರೊನಾ ಸೋಂಕು ತಡೆಯುವ ಪ್ರಮುಖ ಸಾಧನವಾಗಲಿದೆ ಎಂದು ಕೇಂದ್ರ ಸರ್ಕಾರ ಲಸಿಕೆ ನೀಡಲು ಮುಂದಾಗಿದ್ದು, ಪ್ರಯೋಗಗಳನ್ನು ನಡೆಸುತ್ತಿದೆ. ಸದ್ಯಕ್ಕೆ 130 ಮಿಲಿಯನ್ ಮಕ್ಕಳಿಗೆ ಲಸಿಕೆ ನೀಡಲು 210 ಮಿಲಿಯನ್ ಡೋಸ್‌ ಲಸಿಕೆಗಳ ಸಂಗ್ರಹ ಅಗತ್ಯವಿರುವುದಾಗಿ ತಿಳಿದುಬಂದಿದೆ.

ಕೊರೊನಾದಿಂದ ರಕ್ಷಿಸಲು ಮಕ್ಕಳನ್ನು ಮನೆಯಲ್ಲೇ ಸುರಕ್ಷಿತವಾಗಿಡುವುದು ಹೇಗೆ?ಕೊರೊನಾದಿಂದ ರಕ್ಷಿಸಲು ಮಕ್ಕಳನ್ನು ಮನೆಯಲ್ಲೇ ಸುರಕ್ಷಿತವಾಗಿಡುವುದು ಹೇಗೆ?

 ಮಕ್ಕಳಲ್ಲಿ ಬೇರೆ ಬೇರೆ ಲಕ್ಷಣಗಳು ಗೋಚರ

ಮಕ್ಕಳಲ್ಲಿ ಬೇರೆ ಬೇರೆ ಲಕ್ಷಣಗಳು ಗೋಚರ

ಮಕ್ಕಳಲ್ಲಿ ಕೊರೊನಾ ಸೋಂಕಿನ ಕುರಿತು ಪ್ರತಿಷ್ಠಿತ ಮಕ್ಕಳ ತಜ್ಞರೊಂದಿಗೆ ಲ್ಯಾನ್ಸೆಟ್ ಕಮಿಷನ್ ಇಂಡಿಯಾ ಕಾರ್ಯಪಡೆ ವರದಿ ಸಿದ್ಧಪಡಿಸಿದೆ. ಕೊರೊನಾ ಹೊಂದಿರುವ ಹೆಚ್ಚಿನ ಮಕ್ಕಳು ಲಕ್ಷಣ ರಹಿತರಾಗಿದ್ದಾರೆ. ಬಹುಪಾಲು ಮಕ್ಕಳಿಗೆ ಜ್ವರದೊಂದಿಗೆ ಉಸಿರಾಟದಲ್ಲಿ ಕೊಂಚ ತೊಂದರೆ ಕಾಣಿಸಿಕೊಳ್ಳುತ್ತಿದೆ. ಬೇಧಿ, ವಾಂತಿ ಹೊಟ್ಟೆ ನೋವಿನಂಥ ಜಠರಗರುಳಿನ ಸಮಸ್ಯೆಗಳು ಕಂಡುಬರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ. ವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ ಬೇರೆಯದೇ ರೀತಿಯ ಲಕ್ಷಣಗಳು ಕಂಡುಬರುತ್ತಿವೆ. ಮಕ್ಕಳ ವಯಸ್ಸಿನ ಅನುಗುಣವಾಗಿ ಸೋಂಕಿನ ರೋಗಲಕ್ಷಣದ ತೀವ್ರತೆಯೂ ಇರುತ್ತದೆ. ವಯಸ್ಸು ಹೆಚ್ಚಾದಂತೆ ಸೋಂಕಿನ ಪ್ರಮಾಣವೂ ಹೆಚ್ಚಿರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 2600 ಮಕ್ಕಳ ಸೋಂಕಿನ ವಿಶ್ಲೇಷಣೆ

2600 ಮಕ್ಕಳ ಸೋಂಕಿನ ವಿಶ್ಲೇಷಣೆ

ದೇಶದಲ್ಲಿ ಕೊರೊನಾ ಎರಡನೇ ಅಲೆಯಲ್ಲಿ ಮಕ್ಕಳಲ್ಲಿನ ಸೋಂಕಿನ ಪ್ರಮಾಣದ ಮಾಹಿತಿ ಸಂಗ್ರಹಿಸಲಾಗಿದ್ದು, ಇದುವರೆಗೂ ಸೋಂಕಿನಿಂದ ಆಸ್ಪತ್ರೆ ಸೇರಿದ 10 ವರ್ಷಕ್ಕೂ ಕಡಿಮೆ ವಯಸ್ಸಿನ 2600 ಮಕ್ಕಳ ಪರಿಸ್ಥಿತಿ ವಿಶ್ಲೇಷಣೆ ಮಾಡಲಾಗಿದೆ. ತಮಿಳುನಾಡು, ಕೇರಳ, ಮಹಾರಾಷ್ಟ್ರ, ದೆಹಲಿಯ ಹತ್ತು ಆಸ್ಪತ್ರೆಗಳಲ್ಲಿ ದಾಖಲಾದ ಮಕ್ಕಳ ಪರಿಶೀಲನೆ ನಡೆಸಿ ಮಾಹಿತಿಯನ್ನು ಸಂಗ್ರಹಿಸಿ ವಿಶ್ಲೇಷಣೆ ನಡೆಸಲಾಗಿದೆ. ಲಭ್ಯವಾದ ಈ ಮಾಹಿತಿಯಂತೆ, 10 ವರ್ಷ ಕೆಳಗಿನ ಮಕ್ಕಳ ಮರಣ ಪ್ರಮಾಣ 2.4% ಇದ್ದು, ಸಾವನ್ನಪ್ಪಿದ 40% ಮಕ್ಕಳಲ್ಲಿ ಇನ್ನಿತರ ಆರೋಗ್ಯ ಸಮಸ್ಯೆಗಳೂ ಇದ್ದವು ಎಂಬುದು ತಿಳಿದುಬಂದಿದೆ.

ಕೋವಿಡ್ 3ನೇ ಅಲೆ: 25 ಲಕ್ಷ ಮಕ್ಕಳ ಚಿಕಿತ್ಸೆಗೆ ಬೆಂಗಳೂರಿನಲ್ಲಿ ತಜ್ಞರ ಕೊರತೆ, ಪೂರಕ ಕ್ರಮಕೋವಿಡ್ 3ನೇ ಅಲೆ: 25 ಲಕ್ಷ ಮಕ್ಕಳ ಚಿಕಿತ್ಸೆಗೆ ಬೆಂಗಳೂರಿನಲ್ಲಿ ತಜ್ಞರ ಕೊರತೆ, ಪೂರಕ ಕ್ರಮ

 ದೇಶದಲ್ಲಿ ಮಕ್ಕಳಿಗೆ ಲಸಿಕೆ ನೀಡಲು ಸಿದ್ಧತೆ

ದೇಶದಲ್ಲಿ ಮಕ್ಕಳಿಗೆ ಲಸಿಕೆ ನೀಡಲು ಸಿದ್ಧತೆ

ಆಸ್ಪತ್ರೆಗೆ ಸೇರಿದ್ದ 10 ವರ್ಷ ಕೆಳಗಿನ ಮಕ್ಕಳಲ್ಲಿ 9% ಮಕ್ಕಳಿಗೆ ತೀವ್ರತರ ಜ್ವರ ಕಾಣಿಸಿಕೊಂಡಿತ್ತು ಎಂಬುದು ವಿಶ್ಲೇಷಣೆಯಿಂದ ತಿಳಿದುಬಂದಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಲಸಿಕೆ ನೀಡುವ ಸಿದ್ಧತೆ ನಡೆಸಲಾಗುತ್ತಿದೆ. ಏಮ್ಸ್‌ನ ಶೆಫಾಲಿ ಗುಲಾಟಿ, ಸುಶೀಲ್ ಕೆ ಕಬ್ರಾ ಹಾಗೂ ರಾಕೇಶ್ ಲೋಧಾ ಈ ಅಧ್ಯಯನ ನಡೆಸಿದ್ದಾರೆ.

English summary
Central government has planned to inoculate 80% of children aged 12-18 says reports
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X