ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದ ಮಹತ್ವದ ನಿರ್ಧಾರ: ಅರುಣಾಚಲ ಪ್ರದೇಶದಿಂದ ಎಎಫ್‌ಎಸ್‌ಪಿಎ ಭಾಗಶಃ ವಾಪಸ್

|
Google Oneindia Kannada News

ಇಟಾನಗರ, ಏಪ್ರಿಲ್ 3: ಅಧಿಕಾರಕ್ಕೆ ಬಂದರೆ ವಿವಾದಾತ್ಮಕ ಸಶಸ್ತ್ರ ಪಡೆಗಳ ವಿಶೇಷಾಧಿಕಾರಿ ಕಾಯ್ದೆ (ಎಎಫ್‌ಎಸ್‌ಪಿಎ) ಅನ್ನು ರದ್ದುಗೊಳಿಸುವುದಾಗಿ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅದರ ಬೆನ್ನಲ್ಲೇ ಕೇಂದ್ರ ಸರ್ಕಾರ ಅರುಣಾಚಲ ಪ್ರದೇಶದಲ್ಲಿನ ಎಎಫ್‌ಎಸ್‌ಪಿಎಅನ್ನು ಭಾಗಶಃ ಹಿಂದಕ್ಕೆ ಪಡೆದುಕೊಂಡಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಎಎಫ್‌ಎಸ್‌ಪಿಎಅನ್ನು ಜಾರಿಗೊಳಿಸಿದ 32 ವರ್ಷಗಳ ಬಳಿಕ ಅದನ್ನು ಭಾಗಶಃ ತೆಗೆದುಹಾಕಿರುವುದಾಗಿ ಗೃಹ ಸಚಿವಾಲಯ ತಿಳಿಸಿದೆ.

ಕಾಂಗ್ರೆಸ್ ಪ್ರಣಾಳಿಕೆ : ಕಾಮ್, ದಾಮ್, ಶಾನ್, ಸುಶಾಸನ್, ಸ್ವಾಭಿಮಾನ್ ಮತ್ತು ಸಮ್ಮಾನ್! ಕಾಂಗ್ರೆಸ್ ಪ್ರಣಾಳಿಕೆ : ಕಾಮ್, ದಾಮ್, ಶಾನ್, ಸುಶಾಸನ್, ಸ್ವಾಭಿಮಾನ್ ಮತ್ತು ಸಮ್ಮಾನ್!

ಈ ಕಾಯ್ದೆಯ ಅನ್ವಯ ಸಶಸ್ತ್ರ ಪಡೆಗಳು ಯಾವುದೇ ಕಾರ್ಯಾಚರಣೆ ನಡೆಸಲು ಮತ್ತು ಯಾವುದೇ ನೋಟಿಸ್ ನೀಡದೆ ಯಾವ ವ್ಯಕ್ತಿಯನ್ನಾದರೂ, ಎಲ್ಲಿಯಾದರೂ ಬಂಧಿಸುವ ಅಧಿಕಾರ ಅಧಿಕಾರ ಹೊಂದಿರುತ್ತವೆ. ಈ ಕಾಯ್ದೆಯನ್ನು ರಾಜ್ಯದ ಒಂಬತ್ತು ಜಿಲ್ಲೆಗಳ ಪೈಕಿ ಮೂರು ಜಿಲ್ಲೆಗಳಿಂದ ವಾಪಸ್ ಪಡೆಯಲಾಗಿದೆ. ಆದರೆ, ಮಯನ್ಮಾರ್‌ಗೆ ಗಡಿಭಾಗಗಳಲ್ಲಿ ಇರುವ ಪ್ರದೇಶಗಳಲ್ಲಿ ಜಾರಿಯಲ್ಲಿ ಇರುತ್ತದೆ ಎಂದು ಸಚಿವಾಲಯದ ಆದೇಶ ಹೇಳಿದೆ.

Central government partially withdrawn controversial AFSPA from Arunachal Pradesh

ನಾಗರಿಕ ಆಡಳಿತಕ್ಕೆ ನೆರವಾಗುವ ರೀತಿಯಲ್ಲಿ ಸಶಸ್ತ್ರ ಪಡೆಗಳು ಎಎಫ್‌ಎಸ್‌ಪಿಎ ಘೋಷಣೆ ಆಗಿರುವ ಪ್ರದೇಶಗಳಲ್ಲಿ ಕೆಲಸ ಮಾಡುತ್ತವೆ. ಕೇಂದ್ರ ಅಥವಾ ರಾಜ್ಯ ಸರ್ಕಾರವು ಕಾಯ್ದೆಯ ಸೆಕ್ಷನ್ 3ಅಡಿಯಲ್ಲಿ ಕ್ಷೋಭೆಗಳಗಾದ ಪ್ರದೇಶ ಎಂದು ಘೋಷಿಸಿದರೆ ಆ ಪ್ರದೇಶದಲ್ಲಿ ಎಎಫ್‌ಎಸ್‌ಪಿಎ ಮಾನ್ಯವಾಗುತ್ತದೆ.

ಕಾಂಗ್ರೆಸ್ ಪ್ರಣಾಳಿಕೆ ಮುಖ್ಯಾಂಶ ತಿಳಿಯಲು ಕೆಪಿಸಿಸಿ ಟ್ವೀಟ್ ನೋಡಿ ಕಾಂಗ್ರೆಸ್ ಪ್ರಣಾಳಿಕೆ ಮುಖ್ಯಾಂಶ ತಿಳಿಯಲು ಕೆಪಿಸಿಸಿ ಟ್ವೀಟ್ ನೋಡಿ

ಎಎಫ್‌ಎಸ್‌ಪಿಎ ಅಡಿ ಕ್ಷೋಭೆಯ ಪ್ರದೇಶಗಳೆಂದು ಘೋಷಣೆಯಾಗಿದ್ದ ಅರುಣಾಚಲ ಪ್ರದೇಶದ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯ ಸ್ಥಳಗಳಲ್ಲಿ ಈ ವಿಶೇಷ ಕಾಯ್ದೆಯ ಅಗತ್ಯ ಈಗಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರ ವಿರೋಧ ಪಕ್ಷಗಳಿಗೆ ಹೊಸ ಆಹಾರವಾಗಿ ಪರಿಣಮಿಸಿದೆ. ಮಂಗಳವಾರವಷ್ಟೇ ಕಾಂಗ್ರೆಸ್ ಬಿಡುಗಡೆ ಮಾಡಿದ್ದ ಚುನಾವಣಾ ಪ್ರಣಾಳಿಕೆಯಲ್ಲಿ ಎಎಫ್‌ಎಸ್‌ಪಿಎ ಕಾಯ್ದೆಯ ತಿದ್ದುಪಡಿಯ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಇದಕ್ಕೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಸ್ವತಃ ಕೇಂದ್ರ ಸರ್ಕಾರವೇ ಈ ನಿರ್ಧಾರ ತೆಗೆದುಕೊಂಡಿದೆ.

'ಎಎಫ್‌ಎಸ್‌ಪಿಎ ತಿದ್ದುಪಡಿ ದೇಶ ವಿರೋಧಿ ಎಂದಾದರೆ ಅರುಣಾಚಲ ಪ್ರದೇಶದ ಮೂರು ಜಿಲ್ಲೆಗಳಿಂದ ಈ ಕಾಯ್ದೆಯನ್ನು ಕೇಂದ್ರ ಸರ್ಕಾರ ಏಕೆ ಹಿಂದಕ್ಕೆ ಪಡೆದುಕೊಂಡಿದೆ?

 ನಿರುದ್ಯೋಗ ನಿವಾರಣೆಗೆ ಕಾಂಗ್ರೆಸ್ ನೀಡಿದೆ ಭಾರಿ ಭರವಸೆಗಳು ನಿರುದ್ಯೋಗ ನಿವಾರಣೆಗೆ ಕಾಂಗ್ರೆಸ್ ನೀಡಿದೆ ಭಾರಿ ಭರವಸೆಗಳು

ತ್ರಿಪುರಾದಲ್ಲಿ 2015ರಲ್ಲಿ ಎಎಫ್‌ಎಸ್‌ಪಿಎಯನ್ನು ಏಕೆ ಸಂಪೂರ್ಣವಾಗಿ ಹಿಂದಕ್ಕೆ ಪಡೆದುಕೊಳ್ಳಲಾಯಿತು ಮತ್ತು ಮತ್ತೆ ಜಾರಿಗೊಳಿಸಲಿಲ್ಲ? ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪ್ರಶ್ನಿಸಿದ್ದಾರೆ.

English summary
Ministry of Home Affairs (MHA) ordered to partial withdrawn of the controversial Armed Forces Special Powers Act (AFSPA) from Arunachal Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X