ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಭಾವಿಗಳ ಮಾಹಿತಿ ಕದ್ದ ವಾಟ್ಸಪ್ ವಿರುದ್ಧ ಕೇಂದ್ರದ ತನಿಖೆ ಸಾಧ್ಯತೆ

|
Google Oneindia Kannada News

ನವದೆಹಲಿ, ನವೆಂಬರ್ 29: ಭಾರತದಲ್ಲಿ 121 ಪ್ರಭಾವಿಗಳ ಮೊಬೈಲ್‌ಗಳಲ್ಲಿನ ಮಾಹಿತಿಗಳ ಕಳ್ಳತನಕ್ಕೆ ಸಂಬಂಧಿಸಿ ವಾಟ್ಸಪ್ ವಿರುದ್ಧ ತನಿಖೆಗೆ ಕೇಂದ್ರ ಸರ್ಕಾರ ಮುಂದಾಗಿದೆ.

ಎನ್‌ಎಸ್‌ಓ ಗ್ರೂಪ್‌ನ ಪೆಗಾಸಿಸ್ ಸ್ಪೈವೇರ್‌ನಿಂದ 121 ಭಾರತೀಯ ವಾಟ್ಸಪ್ ಖಾತೆ ಮೇಲೆ ನಿಗಾ ಇಡಲಾಗಿತ್ತು. ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಪಡೆದಿರಲಿಲ್ಲ ಎನ್ನುವ ಆರೋಪವಿದೆ.

ವಾಟ್ಸಪ್ ಮೆಸೇಜ್,ಒಂದು ಮದುವೆ ನಿಲ್ಲಿಸಿ, ಮತ್ತೊಂದು ಮದುವೆ ಮಾಡಿಸ್ತುವಾಟ್ಸಪ್ ಮೆಸೇಜ್,ಒಂದು ಮದುವೆ ನಿಲ್ಲಿಸಿ, ಮತ್ತೊಂದು ಮದುವೆ ಮಾಡಿಸ್ತು

ವಾಟ್ಸಪ್‌ನಿಂದ ಈಗಾಗಲೇ ಈ ಕುರಿತು ಮಾಹಿತಿ ಕೋರಲಾಗಿದೆ. ಆದರೆ ವಾಟ್ಸಪ್‌ನ ಭದ್ರತಾ ಅಂಶಗಳ ಬಗ್ಗೆ ಪರಿಶೋಧನೆ ಹಾಗೂ ತನಿಖೆಗೆ ಕೇಂದ್ರ ಸರ್ಕಾರ ಮುಂದಾಗಿದೆ ಹಾಗೂ ಇದನ್ನು ಗಂಭೀರವಾಗಿ ಪರಿಗಣಿಸಲು ನಿರ್ಧರಿಸಿದೆ.

Central Government May Conduct Enquiry Against Whats App

ವಾಟ್ಸಪ್‌ನ ಈ ಮಾಹಿತಿ ಸೋರಿಕೆಗೆ ಸಂಬಂಧಿಸಿದಂತೆ ವಿವಾದವು ತಾರಕಕ್ಕೇರಿತ್ತು. ಕೇಂದ್ರ ಸರ್ಕಾರವೇ ಇದರೊಳಗೆ ಭಾಗಿಯಾಗಿದೆ ಎಂದ ಆರೋಪವೂ ಕೇಳಿಬಂದಿತ್ತು. ಈ ಮಾಹಿತಿ ಕಳ್ಳತನಕ್ಕೆ ಸಂಬಂಧಿಸಿ ಕೇಂದ್ರದ ಸಂಸ್ಥೆಗಳಿಗೆ ತಿಳಿಸಿದ್ದರೂ ಎಚ್ಚರಿಕೆ ವಹಿಸಲಿಲ್ಲ ಎಂಬ ಆರೋಪವೂ ಕೇಳಿಬಂದಿತ್ತು, ವಾಟ್ಸಪ್ ಕೂಡ ಇದನ್ನೇ ಹೇಳಿತ್ತು.

ಹೀಗಾಗಿ ಈಗ ಕೇಂದ್ರ ನಡೆಸಲಿರುವ ತನಿಖೆ ಮೇಲೆ ಕುತೂಹಲ ಆರಂಭವಾಗಿದೆ. ಎನ್ಎಸ್‌ಓ ಸಂಸ್ಥೆಯು ಸ್ಪೈವೇರ್‌ನ್ನು ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ಕೊಡುತ್ತದೆ ಎನ್ನುವ ಮಾಹಿತಿ ಇದೆ ಹೀಗಾಗಿ ಸರ್ಕಾರವೇ ಈ ಸ್ಪೈವೇರ್ ಬಳಸಿ ಕೆಲವು ಹೋರಾಟಗಾರರು ಹಾಗೂ ಕೆಲವು ವಕೀಲರ ಮೊಬೈಲ್‌ಗಳ ಮೇಲೆ ನಿಗಾ ಇರಿಸಿದೆ ಎನ್ನುವ ಆರೋಪವೂ ಕೇಳಿಬಂದಿತ್ತು. ಆದರೆ ಕೇಂದ್ರ ಗೃಹ ಇಲಾಖೆ ಇದನ್ನು ಸಾರಸಾಗಟಾಗಿ ನಿರಾಕರಿಸಿದೆ.

English summary
Union Cabinet Minister Ravishankar Prasad May Give Hint About Government will Conduct Enquiry Against Whats App.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X