ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಸಿಯುತ್ತಿರುವ ರೂಪಾಯಿ, ಮತ್ತೆ ಆಮದು ಸುಂಕ ಹೆಚ್ಚಿಸಿದ ಕೇಂದ್ರ

|
Google Oneindia Kannada News

ನವದೆಹಲಿ, ಅಕ್ಟೋಬರ್ 12: ರೂಪಾಯಿ ಮೌಲ್ಯ ದಿನೇ ದಿನೇ ಕುಸಿಯುತ್ತಿದ್ದು, ಆಮದು ತುಟ್ಟಿಯಾಗಿತ್ತಿರುವ ಕಾರಣ ವಿದೇಶಿ ವಸ್ತುಗಳ ಆಮದಿನ ಪ್ರಮಾಣ ಕಡಿಮೆ ಮಾಡಲು ಕೇಂದ್ರ ಸರ್ಕಾರವು ಆಮದು ಸುಂಕವನ್ನು ಹೆಚ್ಚಿಸಿದೆ.

ತಿಂಗಳಿನ ಹಿಂದಷ್ಟೆ ರೆಫ್ರಿಜಿರೇಟರ್, ಎಸಿ, ಕಾರು ಟೈರ್‌, ವಿಮಾನದ ಇಂಧನ ಸೇರಿ ಒಟ್ಟು 20 ವಸ್ತುಗಳ ಮೇಲೆ ಆಮದು ಸುಂಕ ಹೆಚ್ಚಿಸಿತ್ತು. ಈಗ ಮತ್ತೊಮ್ಮೆ ಆಯ್ದ ವಸ್ತುಗಳ ಮೇಲೆ ಆಮದು ಸುಂಕ ಹೆಚ್ಚಳ ಮಾಡಲಾಗಿದೆ.

ಇರಾನ್‌ನಿಂದ ತೈಲ ಖರೀದಿ ನಿಲ್ಲಿಸಲು ಭಾರತಕ್ಕೆ ಹೆಚ್ಚುವರಿ ಕಾಲಾವಕಾಶ: ಅಮೆರಿಕ ಇರಾನ್‌ನಿಂದ ತೈಲ ಖರೀದಿ ನಿಲ್ಲಿಸಲು ಭಾರತಕ್ಕೆ ಹೆಚ್ಚುವರಿ ಕಾಲಾವಕಾಶ: ಅಮೆರಿಕ

ವಿಶೇಷವಾಗಿ ಮೊಬೈಲ್ ಉಪಕರಣಗಳ ಮೇಲೆ ಆಮದು ಸುಂಕವನ್ನು ಶೇ 20ರಷ್ಟು ಹೆಚ್ಚಿಸಿದ್ದು, ಮೊಬೈಲ್ ಉಪಕರಣಗಳು ದುಬಾರಿಯಾಗಲಿವೆ. ಜೊತೆಗೆ ಸಂಪರ್ಕಕ್ಕೆ ಸಂಬಂಧಿಸಿದ ಇನ್ನೂ ಕೆಲವು ಉಪಕರಣಗಳ ಆಮದಿನ ಸುಂಕ ಹೆಚ್ಚಳ ಮಾಡಲಾಗಿದೆ.

Central government hikes import duty on communication items

ನಮ್ಮ ಸ್ನೇಹಿತ ಭಾರತಕ್ಕೆ ಬೇರೆ ಕಡೆಯಿಂದ ತೈಲ ಕೊಡಿಸ್ತೀವಿ: ಅಮೆರಿಕ ನಮ್ಮ ಸ್ನೇಹಿತ ಭಾರತಕ್ಕೆ ಬೇರೆ ಕಡೆಯಿಂದ ತೈಲ ಕೊಡಿಸ್ತೀವಿ: ಅಮೆರಿಕ

ಸೌಂಡ್ ರೆಕಾರ್ಡರ್‌, ಟಿವಿ ರೆಕಾರ್ಡರ್‌, ಐಪಿ ರೇಡಿಯೋಗಳು, ಆಪ್ಟಿಕಲ್ ಸಂಪರ್ಕ ಸಾಧನಗಳು ಇನ್ನೂ ಕೆಲವು ಸುಧಾರಿತ ಸಂಪರ್ಕ ಸಾಧನಗಳ ಮೇಲೆ ಆಮದು ಸುಂಕ ಏರಿಸಲಾಗಿದೆ. ಈ ಆದೇಶವು ಇಂದಿನಿಂದಲೇ ಜಾರಿಗೆ ಬರಲಿದೆ.

ಇರಾನ್‌ನಿಂದ ತೈಲ ಖರೀದಿಸಿದರೆ ನೆಟ್ಟಗಿರೊಲ್ಲ: ಟ್ರಂಪ್ ಬೆದರಿಕೆ, ಭಾರತಕ್ಕೂ ಸಂಕಷ್ಟ ಇರಾನ್‌ನಿಂದ ತೈಲ ಖರೀದಿಸಿದರೆ ನೆಟ್ಟಗಿರೊಲ್ಲ: ಟ್ರಂಪ್ ಬೆದರಿಕೆ, ಭಾರತಕ್ಕೂ ಸಂಕಷ್ಟ

ಭಾರತವು 2018 ರ ಆರ್ಥಿಕ ವರ್ಷದಲ್ಲಿ ಈ ವರೆಗೆ 1548 ಕೋಟಿ ರೂಪಾಯಿ ಮೌಲ್ಯದ ಸಂಪರ್ಕ ಸಾಧನಗಳನ್ನು ಆಮದು ಮಾಡಿಕೊಂಡಿದೆ. ಕಳೆದ ಆರ್ಥಿಕ ವರ್ಷದಲ್ಲಿ 1192 ಕೋಟಿ ರೂಪಾಯಿ ಮೌಲ್ಯದ ಸಂಪರ್ಕ ಸಾಧನ ಆಮದು ಮಾಡಿಕೊಂಡಿತ್ತು.

English summary
Central government today hikes import duty on several communication items including mobile parts, radio etc. Month before government hikes import duty on 19 items.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X