ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಎಲ್ಲ ಕಚೇರಿಗಳಲ್ಲಿ ಈ ನಿಯಮಗಳ ಪಾಲನೆ ಕಡ್ಡಾಯ!

|
Google Oneindia Kannada News

ನವದೆಹಲಿ, ಜೂನ್.04: ಭಾರತದಲ್ಲಿ ಪ್ರತಿನಿತ್ಯ ಸಾವಿರಾರು ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಗುರುವಾರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನೀಡಿದ ಅಂಕಿ-ಅಂಶಗಳ ಪ್ರಕಾರದ ಕಳೆದ 24 ಗಂಟೆಗಳಲ್ಲೇ 9,304 ಮಂದಿಗೆ ಸೋಂಕು ತಗಲಿರುವುದು ಪತ್ತೆಯಾಗಿದೆ. ಇದರಿಂದ ದೇಶದಲ್ಲಿ ಸೋಂಕಿತರ ಸಂಖ್ಯೆಯು 2,16,919ಕ್ಕೆ ಏರಿಕೆಯಾಗಿದೆ.

ಭಾರತದಲ್ಲಿ 5ನೇ ಬಾರಿ ಲಾಕ್ ಡೌನ್ ವಿಸ್ತರಿಸಿದ ಕೇಂದ್ರ ಸರ್ಕಾರವು ಬಹುತೇಕ ಎಲ್ಲ ವಲಯಗಳಿಗೂ ಬಿಗ್ ರಿಲೀಫ್ ನೀಡಿದೆ. ದೇಶಾದ್ಯಂತ ಸರ್ಕಾರಿ ಕಚೇರಿ ಹಾಗೂ ಖಾಸಗಿ ಕಚೇರಿಗಳನ್ನು ತೆರೆಯುವುದಕ್ಕೆ ಅನುಮತಿ ನೀಡಲಾಗಿದೆ.

ಜೂನ್ 8 ರಿಂದ ಜಂಗಲ್ ಲಾಡ್ಜ್, ರೆಸಾರ್ಟ್ ಆರಂಭಕ್ಕೆ ಮಾರ್ಗಸೂಚಿಜೂನ್ 8 ರಿಂದ ಜಂಗಲ್ ಲಾಡ್ಜ್, ರೆಸಾರ್ಟ್ ಆರಂಭಕ್ಕೆ ಮಾರ್ಗಸೂಚಿ

ಕೇಂದ್ರ ಗೃಹ ಸಚಿವಾಲಯದ ಈ ಕುರಿತು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಭಾರತದಲ್ಲಿ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಕಚೇರಿಗಳಲ್ಲಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಯಾವ ರೀತಿಯ ನಿಯಮಗಳನ್ನು ಪಾಲಿಸಬೇಕು ಎನ್ನುವುದರ ಬಗ್ಗೆ ಮಾರ್ಗಸೂಚಿಗಳಲ್ಲಿ ಸೂಚಿಸಲಾಗಿದೆ.

ಸ್ವಚ್ಛತೆಗೆ ಆದ್ಯತೆ ನೀಡುವಂತೆ ಮಾರ್ಗಸೂಚಿಯಲ್ಲಿ ಉಲ್ಲೇಖ

ಸ್ವಚ್ಛತೆಗೆ ಆದ್ಯತೆ ನೀಡುವಂತೆ ಮಾರ್ಗಸೂಚಿಯಲ್ಲಿ ಉಲ್ಲೇಖ

ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಸಿಬ್ಬಂದಿಗಿಂತ ಹೆಚ್ಚಾಗಿ ವಸ್ತುಗಳ ಮೂಲಕವೇ ಕೊರೊನಾ ವೈರಸ್ ಸೋಂಕು ಹರಡುವ ಆತಂಕ ಹೆಚ್ಚಾಗಿರುತ್ತದೆ. ಕಚೇರಿಯ ಕಾರಿಡಾರ್, ಮೆಟ್ಟಿಲು, ಲಿಫ್ಟ್, ಎಸ್ಕಲೇಟರ್, ಕೆಫೆಟೇರಿಯಾ, ಮೀಟಿಂಗ್ ಹಾಲ್, ಕಾನ್ಫರೆನ್ಸ್ ಹಾಲ್, ವಾಹನ ನಿಲುಗಡೆ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಕಂಟೇನ್ಮೆಂಟ್ ಝೋನ್ ಗಳಲ್ಲಿ ತೆರೆಯಲ್ಲ ಕಚೇರಿಗಳು

ಕಂಟೇನ್ಮೆಂಟ್ ಝೋನ್ ಗಳಲ್ಲಿ ತೆರೆಯಲ್ಲ ಕಚೇರಿಗಳು

ಕೊರೊನಾ ವೈರಸ್ ಸೋಂಕು ಹರಡದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಇದರ ಜೊತೆಗೆ ಕಂಟೇನ್ಮೆಂಟ್ ಝೋನ್ ಗಳಿಂದ ಹೊರಭಾಗಗಳಲ್ಲಿ ಮಾತ್ರ ಕಚೇರಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಕಂಟೇನ್ಮೆಂಟ್ ಝೋನ್ ಗಳಲ್ಲಿ ಮೊದಲಿನಂತೆ ಎಲ್ಲ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ಬಂದ್ ಆಗಿರಲಿವೆ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಕೆಲಸದ ಸ್ಥಳ ಹಾಗೂ ಕಚೇರಿಗಳಲ್ಲಿ ನಿಯಮ ಪಾಲನೆ ಅಗತ್ಯ

ಕೆಲಸದ ಸ್ಥಳ ಹಾಗೂ ಕಚೇರಿಗಳಲ್ಲಿ ನಿಯಮ ಪಾಲನೆ ಅಗತ್ಯ

- ಕಚೇರಿ ಪ್ರವೇಶಕ್ಕೂ ಮೊದಲು ಸ್ಯಾನಿಟೈಸರ್ ನಿಂದ ಕೈ ತೊಳೆದುಕೊಳ್ಳುವುದು ಮತ್ತು ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸುವುದು.

- ಕೊರೊನಾ ವೈರಸ್ ಸೋಂಕು ಇಲ್ಲದ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಮಾತ್ರ ಅವಕಾಶ.

- ಕಂಟೇನ್ಮೆಂಟ್ ವಲಯಗಳಲ್ಲಿ ಇರುವ ಸಿಬ್ಬಂದಿಯು ಹಿರಿಯ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಕಚೇರಿಗೆ ಹಾಜರಾಗುವಂತಿಲ್ಲ. ಕಂಟೇನ್ಮೆಂಟ್ ಝೋನ್ ಮುಕ್ತ ಎನಿಸಿಕೊಳ್ಳುವವರೆಗೂ ಸಿಬ್ಬಂದಿಯು ಕಚೇರಿಗೆ ಹಾಜರಾಗುವಂತಿಲ್ಲ. ಈ ಅವಧಿಯಲ್ಲಿ ಮನೆಯಿಂದಲೇ ಕಾರ್ಯ ನಿರ್ವಹಿಸಬೇಕು. ಈ ವೇಳೆಯನ್ನು ರಜೆ ಎಂದು ಪರಿಗಣಿಸುವಂತಿಲ್ಲ ಹಾಗೂ ಯಾವುದೇ ರೀತಿ ವೇತನವನ್ನು ಕಡಿತಗೊಳಿಸುವಂತಿಲ್ಲ.

- ಕಚೇರಿಯ ವಾಹನ ಚಾಲಕರು, ಹಿರಿಯ ಅಧಿಕಾರಿಗಳು, ಕಚೇರಿಯ ಸಿಬ್ಬಂದಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸರ್ಕಾರದ ಮಾರ್ಗಸೂಚಿಯಂತೆ ನಿಯಮಗಳನ್ನು ಪಾಲನೆ ಮಾಡಬೇಕು. ಒಂದು ವೇಳೆ ವಾಹನ ಚಾಲಕರು ಕಂಟೇನ್ಮೆಂಟ್ ವಲಯಗಳಲ್ಲಿ ವಾಸವಿದ್ದರೆ ಯಾವುದೇ ಕಾರಣಕ್ಕೂ ಕರ್ತವ್ಯಕ್ಕೆ ಹಾಜರಾಗುವಂತಿಲ್ಲ.

- ಸರ್ಕಾರಿ ಕಚೇರಿಗಳಲ್ಲಿ ಬಳಸುವ ವಾಹನಗಳಲ್ಲಿ ಹ್ಯಾಂಡಲ್, ಬೀಗ, ಸ್ಟೇರಿಂಗ್, ವಾಹನಗಳ ಬಾಗಿಲುಗಳಿಂದ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಶೇ.1ರಷ್ಟು ಸೋಡಿಯಂ ಹೈಪೋಕ್ಲೋರಿಟ್ ನ್ನು ಸಿಂಪಡಿಸುವುದು.

- ಕೊರೊನಾ ವೈರಸ್ ನಿಂದ ಹೆಚ್ಚು ಅಪಾಯದಲ್ಲಿ ಇರುವಂತಾ ಸಿಬ್ಬಂದಿಯ ಬಗ್ಗೆ ತೀವ್ರ ಕಟ್ಟೆಚ್ಚರ ವಹಿಸುವುದು. ಈ ಪೈಕಿ ಹಿರಿಯ ವಯಸ್ಸಿನ ಸಿಬ್ಬಂದಿ, ಗರ್ಭಿಣಿ, ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಸಿಬ್ಬಂದಿಗೆ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು. ಸಾರ್ವಜನಿಕರು ಹಾಗೂ ಸಿಬ್ಬಂದಿ ಜೊತೆಗೆ ನೇರವಾಗಿ ಸಂಪರ್ಕ ಹೊಂದದಂತೆ ಎಚ್ಚರಿಕೆ ವಹಿಸುವುದು. ಸಾಧ್ಯವಾದಷ್ಟು ಮನೆಯಿಂದಲೇ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡುವುದು.

- ಕಚೇರಿ ಮತ್ತು ಕೆಲಸದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಸೇರಿದಂತೆ ಪ್ರತಿಯೊಬ್ಬರು ಮುಖಕ್ಕೆ ಬಟ್ಟೆ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

- ತಾತ್ಕಾಲಿಕ ಪಾಸ್ ಗಳನ್ನು ನೀಡುವುದನ್ನು ನಿಷೇಧಿಸಲಾಗಿದೆ. ಯಾವ ಅಧಿಕಾರಿಗಳನ್ನು ಭೇಟಿ ಮಾಡುತ್ತೀರಿ ಎನ್ನುವುದರ ಬಗ್ಗೆ ಮೊದಲೇ ಅನುಮತಿ ಪತ್ರವನ್ನು ಪಡೆದುಕೊಂಡಿರಬೇಕು. ಸೂಕ್ತ ವೈದ್ಯಕೀಯ ತಪಾಸಣೆ ನಂತರವಷ್ಟೇ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ.

- ಸಾಧ್ಯವಾದಷ್ಟು ಮಟ್ಟಿಗೆ ವಿಡಿಯೋ ಸಂವಾದದ ಮೂಲದವೇ ಸಭೆಗಳನ್ನು ನಡೆಸುವುದು.

- ಕೊರೊನಾ ವೈರಸ್ ಹರಡದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸೂಚನಾ ಫಲಕಗಳನ್ನು ಕಚೇರಿಗಳಲ್ಲಿ ಅಳವಡಿಸುವುದು.

- ವಾಹನ ನಿಲುಗಡೆ ಪ್ರದೇಶ ಮತ್ತು ಕಚೇರಿಗಳಲ್ಲಿ ಹೆಚ್ಚಿನ ಜನರು ಒಂದೇ ಕಡೆಯಲ್ಲಿ ಸೇರದಂತೆ ಮುನ್ನೆಚ್ಚರಿಕೆ ವಹಿಸುವುದು.

- ಕಚೇರಿಯಲ್ಲಿ ಇರುವ ಶೌಚಾಲಯಗಳಲ್ಲಿ ಸೋಪ್ ಮತ್ತು ಸ್ಯಾನಿಟೈಸರ್ ಗಳನ್ನು ಕಡ್ಡಾಯವಾಗಿ ಬಳಸುವಂತದ್ದು.

- ಕಚೇರಿಗಳಲ್ಲಿ ಸಿಬ್ಬಂದಿ ಕುಳಿತುಕೊಳ್ಳುವ ಸ್ಥಳಗಳ ನಡುವೆ ಕನಿಷ್ಠ ಅಂತರವನ್ನು ಕಾಯ್ದುಕೊಳ್ಳುವುದು.

- ಹಿರಿಯ ಅಧಿಕಾರಿಗಳು, ಸಿಬ್ಬಂದಿ ಬಳಸಿಕ ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳನ್ನು ಸುರಕ್ಷಿತ ಕ್ರಮಗಳಲ್ಲಿ ಬಿಸಾಡುವುದು.

ಒಬ್ಬ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡರೂ ಶಿಸ್ತುಕ್ರಮ

ಒಬ್ಬ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡರೂ ಶಿಸ್ತುಕ್ರಮ

- ಕಚೇರಿ, ಕೆಲಸದ ಸ್ಥಳದಲ್ಲಿ ಒಬ್ಬರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದಲ್ಲಿ ಸ್ಥಳದಲ್ಲಿರುವ ಎಲ್ಲರನ್ನೂ ಐಸೋಲೇಷನ್ ನಲ್ಲಿ ಇರಿಸುವುದು. ಮುಖಕ್ಕೆ ಬಟ್ಟೆ ಅಥವಾ ಮಾಸ್ಕ್ ಗಳನ್ನು ನೀಡುವುದು ಹಾಗೂ ವೈದ್ಯರಿಂದ ತಪಾಸಣೆಗೆ ಒಳಪಡಿಸುವುದು.

- ತಕ್ಷಣ ಹತ್ತಿರದ ಆಸ್ಪತ್ರೆಗೆ ಅಥವಾ ಜಿಲ್ಲಾ ಮತ್ತು ರಾಜ್ಯ ಸರ್ಕಾರದ ಸಹಾಯವಾಣಿಗೆ ಮಾಹಿತಿ ನೀಡುವುದು.

- ಕೊರೊನಾ ವೈರಸ್ ಸೋಂಕು ಪತ್ತೆಯಾದ ವ್ಯಕ್ತಿಯ ಸ್ಥಿತಿ ಆಧಾರದ ಮೇಲೆ ಗೃಹ ದಿಗ್ಬಂಧನದಲ್ಲಿ ಇರಿಸುವ ಬಗ್ಗೆ ತೀರ್ಮಾನಿಸಲಾಗುತ್ತದೆ.

- ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಸೋಂಕಿತನ ಸ್ಥಿತಿಯು ಕೊಂಚ ಗಂಭೀರವಾಗಿದ್ದರೆ ಶಿಷ್ಟಾಚಾರದ ಪ್ರಕಾರ ವೈದ್ಯಕೀಯ ಸೌಲಭ್ಯಗಳ ಅಡಿಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ.

- ವಿಶೇಷ ಅಧಿಕಾರಿಗಳ ತಂಡವು ಸೋಂಕಿತರು ಹೊಂದಿರುವ ಸಂಪರ್ಕಿತರ ಬಗ್ಗೆ ಮರು ಪ್ರಶ್ನಿಸಿ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ.

- ಸೋಂಕಿತನ ಜೊತೆಗೆ ಸಂಪರ್ಕರದಲ್ಲಿದ್ದ ಜನರನ್ನು ಕೂಡಾ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ.

- ಕಚೇರಿ ಮತ್ತು ಕೆಲಸದ ಸ್ಥಳದಲ್ಲಿ ಕನಿಷ್ಠ 15 ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕಿತನ ಜೊತೆಗೆ ಸಂಪರ್ಕವಿದ್ದಲ್ಲಿ ಎಲ್ಲ ಸಿಬ್ಬಂದಿಯನ್ನು ಐಸೋಲೇಷನ್ ನಲ್ಲಿ ಇರಿಸಲಾಗುತ್ತದೆ. ಜೊತೆಗೆ ಕಚೇರಿ ಹಾಗೂ ಕೆಲಸದ ಸ್ಥಳವನ್ನು ಮತ್ತೆ ಬಂದ್ ಮಾಡಲಾಗುತ್ತದೆ.

- ಹೆಚ್ಚಿನ ಅಪಾಯವುಳಅಳ ಸಿಬ್ಬಂದಿಯನ್ನು 14 ದಿನಗಳ ಕಾಲ ಕ್ವಾರೆಂಟೈನ್ ನಲ್ಲಿ ಇರಿಸಲಾಗುತ್ತದೆ.

ಸಾರ್ವಜನಿಕ ಪ್ರದೇಶಗಳಲ್ಲಿ ಈ ನಿಯಮಗಳ ಪಾಲನೆ ಕಡ್ಡಾಯ

ಸಾರ್ವಜನಿಕ ಪ್ರದೇಶಗಳಲ್ಲಿ ಈ ನಿಯಮಗಳ ಪಾಲನೆ ಕಡ್ಡಾಯ

- ಪ್ರತಿಯೊಬ್ಬ ವ್ಯಕ್ತಿಯು ಸಾರ್ವಜನಿಕ ಪ್ರದೇಶಗಳಲ್ಲಿ ಕನಿಷ್ಠ 6 ಅಡಿ ಅಂತರವನ್ನು ಕಾಯ್ದುಕೊಂಡಿರಬೇಕು.

- ಮುಖಕ್ಕೆ ಬಟ್ಟೆ ಅಥವಾ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

- ಆಗಾಗ ಸೋಪ್ ನಿಂದ ಕನಿಷ್ಠ 40-60 ಸೆಕೆಂಡ್ ಗಳ ಕಾಲ ಕೈತೊಳೆದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು.

- ಸಾಧ್ಯವಾದಲ್ಲಿ ಆಲ್ಕೋಹಾಲ್ ಅಂಶವುಳ್ಳ ಸ್ಯಾನಿಟೈಸರ್ ನಿಂದ 20 ಸೆಕೆಂಡ್ ಕೈಗಳನ್ನು ತೊಳೆಯಿರಿ.

- ಕೆಮ್ಮುವಾಗ, ಸೀನುವಾಗ ಬೇರೆಯವರಿಂದ ಅಂತರ ಕಾಯ್ದುಕೊಳ್ಳಿರಿ ಹಾಗೂ ಕೈ ಹಾಗೂ ಕರ್ಚಿಫ್ ಗಳನ್ನು ಹಿಡಿದುಕೊಳ್ಳಿರಿ.

- ಆರೋಗ್ಯದಲ್ಲಿ ಕೊಂಚ ಏರುಪೇರು ಆದರೂ ಜಿಲ್ಲಾ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿರಿ.

- ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದನ್ನು ನಿರ್ಬಂಧಿಸಲಾಗಿದೆ.

- ಎಲ್ಲರೂ ನಿಮ್ಮ ನಿಮ್ಮ ಮೊಬೈಲ್ ನಲ್ಲಿ ಆರೋಗ್ಯ ಸೇತು ಆ್ಯಪ್ ನ್ನು ಡೌನ್ ಲೋಡ್ ಮಾಡಿಕೊಳ್ಳಿ.

English summary
Guilelines For Preventive Measures To Contain Spread Covid-19 In Offices. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X