ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರದಲ್ಲಿ 5ಜಿ ಇಂಟರ್‌ನೆಟ್‌ ಸೇವೆ, ಎಲ್ಲಾ ಗ್ರಾಮಗಳಿಗೂ ಇಂಟರ್ನೆಟ್‌

|
Google Oneindia Kannada News

Recommended Video

ಹೊಸ ದೂರ ಸಂಪರ್ಕ ನೀತಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ | Oneindia Kannada

ನವದೆಹಲಿ, ಸೆಪ್ಟೆಂಬರ್ 26: ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಹೊಸ ದೂರ ಸಂಪರ್ಕ ನೀತಿಗೆ ಕೇಂದ್ರ ಅಸ್ತು ಎಂದಿದ್ದು, ಶೀಘ್ರದಲ್ಲೆ 5ಜಿ ಇಂಟರ್ನೆಟ್‌ ಸೇವೆ ಪಡೆಯುವ ಆಶಾಭಾವನೆ ಮೂಡಿಸಿದೆ.

ನೂತನ ದೂರಸಂಪರ್ಕ ನೀತಿಯು 10000 ಕೋಟಿ ಅಮೆರಿಕನ್ ಡಾಲರ್ ಬಂಡವಾಳ ಸೆಳೆಯುವ ಉದ್ದೇಶ ಹೊಂದಿದ್ದು 2022 ರ ವೇಳೆಗೆ 40 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ.

ಹಲವು ಮಹತ್ವದ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆಹಲವು ಮಹತ್ವದ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ನೂತನ ದೂರಸಂಪರ್ಕ ನೀತಿಯಲ್ಲಿ ಬಳಕೆದಾರರಿಗೆ ವೇಗದ 5ಜಿ ಇಂಟರ್ನೆಟ್ ಸೇವೆ ಒದಗಿಸುವುದು, ಆಪ್ಟಿಕಲ್ ಫೈಬರ್ ಬಳಕೆ ಮಾಡುವುದು, ದೇಶದ ಎಲ್ಲ ಭಾಗಗಳ ಜನರಿಗೆ 50 ಎಂಬಿಪಿಎಸ್‌ ವೇಗದ ಇಂಟರ್ನೆಟ್ ಸೇವೆ ದೊರಕುವುಂತೆ ಮಾಡುವ ಗುರಿಗಳನ್ನು ಹೊಂದಲಾಗಿದೆ.

100 ಜಿಬಿಪಿಎಸ್ ವೇಗದ ಇಂಟರ್ನೆಟ್ ಸಾಧ್ಯ : ಇಸ್ರೋ100 ಜಿಬಿಪಿಎಸ್ ವೇಗದ ಇಂಟರ್ನೆಟ್ ಸಾಧ್ಯ : ಇಸ್ರೋ

ದೂರಸಂಪರ್ಕ ನೀತಿಯಲ್ಲಿ 2022ರ ವೇಳೆಗೆ ಹಲವು ಗುರಿಗಳನ್ನು ಇರಿಸಿಕೊಳ್ಳಲಾಗಿದೆ. ಅವುಗಳಲ್ಲಿ ಕೆಲವು ಪ್ರಮುಖ ನಿರ್ಣಯಗಳು ಇಲ್ಲಿವೆ.

ಗ್ರಾಮ ನೆಟ್, ಭಾರತ್ ನೆಟ್ ಜಾರಿ

ಗ್ರಾಮ ನೆಟ್, ಭಾರತ್ ನೆಟ್ ಜಾರಿ

ಭಾರತ್ ನೆಟ್, ಗ್ರಾಮ ನೆಟ್‌, ಜನವೈಫೈ, ನಗರನೆಟ್‌ ಇನ್ನೂ ಹಲವು ಇಂಟರ್ನೆಟ್ ಸಂಬಂಧಿಸಿದ ಯೋಜನೆಗಳನ್ನು ಜಾರಿಗೊಳಿಸುವ ಬಗ್ಗೆ ನೂತನ ದೂರಸಂಪರ್ಕ ನೀತಿ 2018 ರಲ್ಲಿ ಉಲ್ಲೇಖಿಸಲಾಗಿದೆ.

50 ಎಂಬಿಪಿಎಸ್ ವೇಗದ ಇಂಟರ್ನೆಟ್ ಎಲ್ಲರಿಗೂ

50 ಎಂಬಿಪಿಎಸ್ ವೇಗದ ಇಂಟರ್ನೆಟ್ ಎಲ್ಲರಿಗೂ

* 50 ಎಂಬಿಪಿಎಸ್‌ ವೇಗದ ಇಂಟರ್ನೆಟ್‌ ಅನ್ನು ಎಲ್ಲರಿಗೂ ಕಲ್ಪಿಸುವುದು.

* 2020ರ ವೇಳೆಗೆ ಎಲ್ಲ ಗ್ರಾಮ ಪಂಚಾಯಿತಿಗಳಿಗೂ 1ಜಿಬಿಪಿಎಸ್‌ ವೇಗದ ಇಂಟರ್ನೆಟ್ ಸೇವೆ ಕಲ್ಪಿಸುವುದು ಮತ್ತು 2022ರ ವೇಳೆಗೆ ವೇಗವನ್ನು 10ಜಿಬಿಪಿಎಸ್‌ಗೆ ಹೆಚ್ಚಿಸುವುದು.

* 50 ಲಕ್ಷ ಜನ ವೈಫೈ ಪಾಯಿಂಟ್‌ಗಳನ್ನು 2020ರ ವೇಳೆಗೆ ನಿರ್ಮಿಸುವುದು ಹಾಗೂ 1 ಕೋಟಿ ಜನವೈಫೈ ಪಾಯಿಂಟ್‌ಗಳನ್ನು ಸ್ಥಾಪಿಸುವುದು.

ಭಾರತೀಯ ಇಂಟರ್ನೆಟ್ ಬಳಕೆದಾರರಿಗೆ ಗೂಗಲ್ ಹೊಸ ಸೌಲಭ್ಯಭಾರತೀಯ ಇಂಟರ್ನೆಟ್ ಬಳಕೆದಾರರಿಗೆ ಗೂಗಲ್ ಹೊಸ ಸೌಲಭ್ಯ

ಎಲ್ಲ ಗ್ರಾಮಗಳಿಗೂ ಇಂಟರ್ನೆಟ್‌

ಎಲ್ಲ ಗ್ರಾಮಗಳಿಗೂ ಇಂಟರ್ನೆಟ್‌

* ಫೈಬರ್ ಕೇಬಲ್‌ಗಳ ಮೂಲಕ ಮನೆಗಳಿಗೆ ಅಂತರ್ಜಾಲ ಸೇವೆ ವಿಸ್ತರಿಸುವುದು.

* 2022ರ ವೇಳೆಗೆ ಎಲ್ಲ ಗ್ರಾಮಗಳಿಗೂ ವೇಗದ ಅಂತರ್ಜಾಲ ಸೇವೆ ವಿಸ್ತರಿಸುವುದು.

* ಡಾಟಾ ಭದ್ರತೆಯನ್ನು ಹೆಚ್ಚು ಮಾಡುವುದು, ಸರ್ಕಾರಿ ಸೇವೆಗಳನ್ನು ಆನ್‌ಲೈನ್ ಮೂಲಕ ತಲುಪಿಸುವ ಹೊಸ ದಾರಿಗಳನ್ನು ಕಂಡುಕೊಳ್ಳುವುದು.

10000 ಕೋಟಿ ಡಾಲರ್ ಬಂಡವಾಳ ಆಕರ್ಷಿಸುವುದು

10000 ಕೋಟಿ ಡಾಲರ್ ಬಂಡವಾಳ ಆಕರ್ಷಿಸುವುದು

* ದೂರ ಸಂಪರ್ಕ ಕ್ಷೇತ್ರಕ್ಕೆ 10000 ಕೋಟಿ ಅಮೆರಿಕನ್ ಡಾಲರ್ ಬಂಡವಾಳ ಆಕರ್ಷಿಸುವುದು ಮತ್ತು 40 ಲಕ್ಷ ಹೊಸ ಉದ್ಯೋಗ ಸೃಷ್ಟಿಸುವುದು.

* ಡಿಜಿಟಲ್‌ ಸೇರಿದಂತೆ 10 ಲಕ್ಷ ಜನರಿಗೆ ವಿಶೇಷ ತರಬೇತಿ ನೀಡಿ ಕೌಶಲ್ಯಾಭಿವೃದ್ಧಿ ಮಾಡಲು ನಿಯೋಜಿಸುವುದು.

ಸ್ಥಿರ ಸಂಪರ್ಕ ಸಾಧನಗಳ ಬಳಕೆ ಹೆಚ್ಚಳ

ಸ್ಥಿರ ಸಂಪರ್ಕ ಸಾಧನಗಳ ಬಳಕೆ ಹೆಚ್ಚಳ

* ಸ್ಥಿರ ಸಂಪರ್ಕ ಸಾಧನಗಳ ಬಳಕೆದಾರರ ಸಂಖ್ಯೆಯನ್ನು 50 ಲಕ್ಷಕ್ಕೆ ಹೆಚ್ಚಿಸುವುದು.

* ಜಾಗತಿಕ ಡಿಜಿಟಲ್ ಅರ್ಥವ್ಯವಸ್ಥೆಯಲ್ಲಿ ಭಾರತವು ಪರಿಣಾಮಕಾರಿ ಅಭಿವೃದ್ಧಿ ಸಾಧಿಸುವಂತೆ ಮಾಡುವುದು.

English summary
Union Cabinet approves National Digital Communications Policy-2018 and re-designation of the Telecom Commission as the "Digital Communications Commission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X