ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಾಸ್ಟ್‌ ಟ್ಯಾಗ್ ಕಡ್ಡಾಯದ ಗಡುವು ವಿಸ್ತರಿಸಿದ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ನವೆಂಬರ್ 30: ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ ಟ್ಯಾಗ್ ಕಡ್ಡಾಯದ ದಿನವನ್ನು ಡಿಸೆಂಬರ್ 15ರವರೆಗೆ ವಿಸ್ತರಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿಂದಿನ ಆದೇಶದಂತೆ ಡಿಸೆಂಬರ್ 1ರಿಂದ ಕಡ್ಡಾಯವಾಗಿ ಎಲ್ಲಾ ವಾಹನಗಳು ಫಾಸ್ಟ್‌ ಟ್ಯಾಗ್ನ್ನು ಹೊಂದಿರಬೇಕಿತ್ತು. ಇಲ್ಲವಾದರೆ ದುಪ್ಪಟ್ಟು ಶುಲ್ಕ ನೀಡಬೇಕಿತ್ತು.

FASTag ಅಂದ್ರೇನು? ಡಿ.1 ರಿಂದ ಅದು ಎಲ್ಲಾ ವಾಹನಕ್ಕೂ ಕಡ್ಡಾಯ ಏಕೆ?FASTag ಅಂದ್ರೇನು? ಡಿ.1 ರಿಂದ ಅದು ಎಲ್ಲಾ ವಾಹನಕ್ಕೂ ಕಡ್ಡಾಯ ಏಕೆ?

ಆದರೆ ಟೋಲ್ ಪ್ಲಾಜಾಗಳೆಲ್ಲೆಡೆ ಫಾಸ್ಟ್‌ ಟ್ಯಾಗ್ ರೀಡರ್ ಯಂತ್ರಗಳನ್ನು ಅಳವಡಿಸದೇ ಇರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ದಿನಾಂಕವನ್ನು ವಿಸ್ತರಿಸಲಾಗಿದೆ.

Central Government Extends The Fastag Deadline

ದೇಶದ ಸಾಕಷ್ಟು ಟೋಲ್ ಪ್ಲಾಜಾಗಳಲ್ಲಿನ ಎಲ್ಲಾ ಲೇನ್‌ಗಳಲ್ಲಿ ಫಾಸ್ಟ್‌ ಟ್ಯಾಗ್ ರೀಡರ್‌ಗಳು ಇರಲಿಲ್ಲ. ಇದರಿಂದ ಫಾಸ್ಟ್ಯಾಗ್ ಹೊಂದಿದ ವಾಹನಗಳಿಗೂ ಸಮಸ್ಯೆಯಾಗುತ್ತಿತ್ತು.

'ಸುಂಕದ ಕಟ್ಟೆ'ಗಳಲ್ಲಿ FASTag ಹೇಗೆ ಕೆಲಸ ಮಾಡುತ್ತದೆ?'ಸುಂಕದ ಕಟ್ಟೆ'ಗಳಲ್ಲಿ FASTag ಹೇಗೆ ಕೆಲಸ ಮಾಡುತ್ತದೆ?

ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸರ್ಕಾರವನ್ನು ಪ್ರಶ್ನಿಸಲಾಗುತ್ತಿತ್ತು. ಫಾಸ್ಟ್‌ ಟ್ಯಾಗ್ ಹೊಂದಿರದಿದ್ದರೆ ದುಪ್ಪಟ್ಟು ಶುಲ್ಕವನ್ನು ವಸೂಲಿ ಮಾಡುತ್ತೀರಿ ಇದಕ್ಕೆ ಪೂರಕವಾದ ಮೂಲಸೌಕರ್ಯವಿಲ್ಲದಿದ್ದರೂ ದಂಡ ತೆರಲು ಸರ್ಕಾರ ಸಿದ್ಧವಿದೆಯೇ ಒಂದೊಮ್ಮೆ ಫಾಸ್ಟ್ಯಾಗ್ ರೀಡರ್‌ಗಳಿಲ್ಲದಿದ್ದರೆ ಶುಲ್ಕ ರಹಿತ ಸೇವೆ ನೀಡಲಾಗುವುದೇ ಎಂದು ಜನರು ಪ್ರಶ್ನಿಸಿದ್ದರು.

FASTag ಸಂಪೂರ್ಣ ಸುರಕ್ಷಿತವೇ? ಅದರ ಅನನುಕೂಲಗಳೇನು?FASTag ಸಂಪೂರ್ಣ ಸುರಕ್ಷಿತವೇ? ಅದರ ಅನನುಕೂಲಗಳೇನು?

ಹೀಗಾಗಿ ಅದಲ್ಲದೇ ಫಾಸ್ಟ್‌ ಟ್ಯಾಗ್ ಖರೀದಿಯೂ ಕೂಡ ಮುಂದುವರೆದಿತ್ತು. ಎಲ್ಲಾ ಗ್ರಾಹಕರು ಇನ್ನೂ ಫಾಸ್ಟ್ಯಾಗ್ ಖರೀದಿಸಿರಲಿಲ್ಲ ಹೀಗಾಗಿ ಫಾಸ್ಟ್ಯಾಗ್‌ ಡೆಡ್‌ಲೈನ್‌ ಮುಂದೂಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

English summary
Central Government Extended the Fastag Deadline upto December 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X