ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುತ್ ಶುಲ್ಕ ಪಾವತಿಗೆ ವಿನಾಯಿತಿ ನೀಡುವಂತೆ ಕೇಂದ್ರ ಸೂಚನೆ

|
Google Oneindia Kannada News

ನವದೆಹಲಿ, ಮಾರ್ಚ್ 28: ವಿದ್ಯುತ್ ಬಿಲ್ ಪಾವತಿಗೆ ವಿನಾಯಿತಿ ನೀಡುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳಿಗೂ ಸೂಚನೆ ನೀಡಿದೆ.

Recommended Video

ಲೈನ್ ಮ್ಯಾನ್‍ಗಳಿಗೆ ಬಯ್ಯೋ ಮುಂಚೆ ಈ ವಿಡಿಯೋ ನೋಡಿ | Oneindia Kannada

ವಿದ್ಯುತ್ ಶುಲ್ಕ ಪಾವತಿಗೆ ಮೂರು ತಿಂಗಳು ವಿನಾಯಿತಿ ನೀಡುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.ಕೊರೊನಾ ಆಪತ್ತಿನ ಹಿನ್ನೆಲೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿರುವ 1.7 ಲಕ್ಷ ಕೋಟಿ ರೂ.ಗಳ ಮೆಗಾ ಪರಿಹಾರ ಪ್ಯಾಕೇಜ್‌ಗೆ ಪಕ್ಷಭೇದವಿಲ್ಲದೆ ಒಕ್ಕೊರಲಿನ ಸ್ವಾಗತ ವ್ಯಕ್ತವಾಗಿದೆ.

ಕೊರೊನಾವನ್ನು ಶಾಶ್ವತವಾಗಿ ಹೋಗಲಾಡಿಸಲು ಸಾಧ್ಯವೇ?: ವಿಶ್ವ ಸಂಸ್ಥೆಯ ತಜ್ಞರು ಏನಂತಾರೆ? ಕೊರೊನಾವನ್ನು ಶಾಶ್ವತವಾಗಿ ಹೋಗಲಾಡಿಸಲು ಸಾಧ್ಯವೇ?: ವಿಶ್ವ ಸಂಸ್ಥೆಯ ತಜ್ಞರು ಏನಂತಾರೆ?

ಎಂಎಸ್‌ಎಂಇಗಳು ಕರೆಂಟ್‌ ಬಿಲ್‌ ಕಟ್ಟದಿದ್ದರೆ ತಕ್ಷಣ ಬಂದು ಸಂಪರ್ಕ ಕಡಿತಗೊಳಿಸುತ್ತಾರೆ. ಈ ವಿಪತ್ತಿನ ಸಂದರ್ಭದಲ್ಲಿ ಸರಕಾರ ರಿಯಾಯಿತಿ ನೀಡಬೇಕು. ಜಿಎಸ್‌ಟಿ, ಐಟಿ, ಟಿಡಿಎಸ್‌ ಇತ್ಯಾದಿಗಳಲ್ಲಿ ಜೂನ್‌ 30ರ ತನಕ ವಿಸ್ತರಣೆ ಮಾಡಿದ್ದರೂ, ಮತ್ತಷ್ಟು ಕಾಲಾವಕಾಶ ಬೇಕಾದೀತು ಎನ್ನುವ ಒತ್ತಾಯ ಕೇಳಿಬಂದಿತ್ತು.

Central Government Directs Exempt Payment Of Electricity Bills

ಲ್ಲ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಪಡೆದ ಎಲ್ಲ ರೀತಿಯ ಸಾಲಗಳ ಮೇಲೆ ಇಎಂಐ ಪಾವತಿಸುವುದರಿಂದ ಮೂರು ತಿಂಗಳ ಕಾಲ ವಿನಾಯಿತಿ ನೀಡಿರುವ ಆರ್‌ಬಿಐ, ಬ್ಯಾಂಕ್ ಬಡ್ಡಿದರಗಳನ್ನು (ರೆಪೋ) ಮತ್ತಷ್ಟು ಇಳಿಸಿದೆ. ಇದರಿಂದ ಜನರಿಗೆ ದೊಡ್ಡ ಮಟ್ಟದ ನಿರಾಳತೆ ಲಭಿಸಿದೆ.

ಬ್ಯಾಂಕುಗಳಿಂದ ವಿವಿಧ ಸಾಲಗಳನ್ನು ಪಡೆದಿರುವ ಜನರಿಗೆ ಈ ಸಂಕಷ್ಟ ಪರಿಸ್ಥಿತಿಯಲ್ಲಿ ದೊಡ್ಡ ರಿಲೀಫ್ ನೀಡಿರುವ ಆರ್‍ಬಿಐ ಮಾರ್ಚ್ 1 ರಿಂದ ಜಾರಿಗೆ ಬರುವಂತೆ ಮುಂದಿನ ಮೂರು ತಿಂಗಳು ಎಲ್ಲ ಸಾಲಗಳ ಮೇಲಿನ ಇಎಂಐ (ಸಮಾನ ಮಾಸಿಕ ಕಂತುಗಳ) ಮೇಲೆ ವಿನಾಯಿತಿ ನೀಡಿದೆ.

ಈ ಅವಧಿಯಲ್ಲಿ ಯಾವುದೇ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ಸಾಲ ಪಡೆದವರ ಮೇಲೆ ಇಎಂಐ ಪಾವತಿಗಾಗಿ ಒತ್ತಡ ಹೇರುವಂತಿಲ್ಲ ಅಥವಾ ಬಲವಂತ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು.

ಕೊರೊನಾ ಪಿಡುಗಿನಿಂದಾಗಿ ಇಡೀ ದೇಶವೇ 21 ದಿನಗಳ ಕಾಲ ಬಂದ್ ಆಗಿದೆ.ಇದೀಗ ವಿದ್ಯುತ್ ಬಿಲ್ ಪಾವತಿಯಲ್ಲೂ ವಿನಾಯಿತಿ ನೀಡಿರುವುದು ದೇಶದ ಜನರಲ್ಲಿ ಸ್ವಲ್ಪ ನಿರಾಳ ಭಾವ ಮೂಡಿದೆ.

English summary
Directions issued to Central Electricity Regulatory Commission to provide moratorium of 3 months to DISCOMs to make payments to generating companies/transmission licensees & not to levy penal rates of late payment surcharge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X