ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ನಿಯರಿಗೆ ಕೈಕೊಟ್ಟ ಎನ್‌ಆರ್‌ಐಗಳಿಗೆ ತಕ್ಕ ಶಾಸ್ತಿ ಮಾಡಿದ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಮಾರ್ಚ್‌ 04: ಪತ್ನಿಯರನ್ನು ತ್ಯಜಿಸಿರುವ 45 ಅನಿವಾಸಿ ಭಾರತೀಯರ (ಎನ್‌ಆರ್‌ಐ)ಗಳ ಪಾಸ್‌ಪೋರ್ಟ್‌ ಅನ್ನು ರದ್ದುಗೊಳಿಸಿರುವುದಾಗಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು ಇಂದು ಹೇಳಿದ್ದಾರೆ.

ಲೈಂಗಿಕ ದೌರ್ಜನ್ಯದ ದೂರು ನೀಡುವುದಕ್ಕೆ ಸಮಯದ ಮಿತಿಯಿಲ್ಲ: ಮನೇಕಾ ಗಾಂಧಿ ಲೈಂಗಿಕ ದೌರ್ಜನ್ಯದ ದೂರು ನೀಡುವುದಕ್ಕೆ ಸಮಯದ ಮಿತಿಯಿಲ್ಲ: ಮನೇಕಾ ಗಾಂಧಿ

ಪತ್ನಿಯರನ್ನು ತ್ಯಜಿಸಿರುವ 45 ಎನ್‍ಆರ್‍ಐಗಳ ಪಾಸ್ ಪೋರ್ಟ್‍ಗಳನ್ನು ದೇಶಾಂಗ ವ್ಯವಹಾರಗಳ ಸಚಿವಾಲಯ ರದ್ದುಗೊಳಿಸಿದೆ. ಮದುವೆಯಾಗಿ ನಾಪತ್ತೆಯಾಗಿರುವ ಇತರ ಎನ್‍ಆರ್‍ಐಗಳಿಗೆ ನೋಡಲ್ ಏಜೆನ್ಸಿ ಲುಕ್‍ಔಟ್ ನೋಟಿಸ್‌ಗಳನ್ನು ನೀಡಿದೆ ಎಂದು ಅವರು ಮಾತಿ ನೀಡಿದ್ದಾರೆ.

ಅನಿವಾಸಿ ಭಾರತೀಯರ ಮದ್ವೆ ನೋಂದಣಿಗೆ ಗಡುವು! ಅನಿವಾಸಿ ಭಾರತೀಯರ ಮದ್ವೆ ನೋಂದಣಿಗೆ ಗಡುವು!

ಹೀಗೆ ಎನ್‌ಆರ್‌ಐ ಪತಿಗಳಿಂದ ತ್ಯಜಿಸಲ್ಪಟ್ಟ, ಮೋಸಗೊಂಡ ಹೆಣ್ಣು ಮಕ್ಕಳಿಗೆ ನ್ಯಾಯ ದೊರಕಿಸಲೆಂದು ಸರ್ಕಾರವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮಸೂದೆಯೊಂದನ್ನು ಸದನದ ಅಂಗೀಕರಾಕ್ಕೆಂದು ಹಾಕಿದೆ, ಆದರೆ ಅದಕ್ಕೆ ಮೇಲ್ಮನೆಯಲ್ಲಿ ಒಪ್ಪಿಗೆ ಸಿಕ್ಕಿಲ್ಲ ಎಂದು ಮೇನಕಾ ಗಾಂಧಿ ಹೇಳಿದ್ದಾರೆ.

Central government cancel 45 NRIs passport who abandoned their wives

ಮದುವೆಯಾಗಿ, ಮದುವೆಯಾಗಿ ನಂಬಿಸಿ ಕೈಕೊಡುವ ಎನ್‌ಆರ್‌ಐಗಳ ವಿರುದ್ಧ ಕೇಂದ್ರ ಸರ್ಕಾರವು ಕಠಿಣ ನಿಲುವುಗಳನ್ನು ತಳೆಯಲಿದೆ ಎಂದ ಮೇನಕಾ ಅವರು, ಆ ರೀತಿಯ ಅಪರಾಧ ಮಾಡಿದ ಎನ್‌ಆರ್‌ಐಗಳ ಆಸ್ತಿ ಜಪ್ತಿ, ಪಾಸ್‌ಪೋರ್ಟ್‌ ರದ್ದು ಸೇರಿದಂತೆ ಕಾನೂನು ಕ್ರಮವನ್ನೂ ಕೈಗೊಳ್ಳುವ ಯೋಜನೆ ಇದೆ ಎಂದು ಹೇಳಿದ್ದಾರೆ.

English summary
Women and Child welfare central minister Menaka Gandhi says, government cancel 45 NRIs passport who abandoned their wives. Sent notice to them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X