ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟ

|
Google Oneindia Kannada News

ನವದೆಹಲಿ, ಜುಲೈ 13: ಸಿಬಿಎಸ್‌ಇ 12ನೇ ತರಗತಿಯ ಫಲಿತಾಂಶ ಇಂದು ಪ್ರಕಟವಾಗಿದೆ.

Recommended Video

Rashid Khan : ಅಫ್ಘಾನಿಸ್ತಾನ ವಿಶ್ವಕಪ್ ಗೆದ್ದ ನಂತರವೇ ಮದುವೆಯಾಗುತ್ತೇನೆ | Oneindia Kannada

cbseresults.nic.in, results.nic.in ಹಾಗೂ cbse.nic.in ನಲ್ಲಿ ಫಲಿತಾಂಶ ಲಭ್ಯವಿದೆ. ಸುಮಾರು 12 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು. ಕಲೆ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ಫಲಿತಾಂಶವನ್ನು ಒಟ್ಟಾಗಿಯೇ ಬಿಡುಗಡೆ ಮಾಡಲಾಗಿದೆ. ಫೆಬ್ರವರಿ 27ರಿಂದ ಪರೀಕ್ಷೆ ಆರಂಭವಾಗಿತ್ತು.

ಅಂತಿಮ ಸೆಮಿಸ್ಟರ್ ಸಹಿತ ಪದವಿ ಪರೀಕ್ಷೆ ರದ್ದುಗೊಳಿಸಿದ ದೆಹಲಿಅಂತಿಮ ಸೆಮಿಸ್ಟರ್ ಸಹಿತ ಪದವಿ ಪರೀಕ್ಷೆ ರದ್ದುಗೊಳಿಸಿದ ದೆಹಲಿ

ಪರೀಕ್ಷೆಗೆ 12,06,893ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಇವರಲ್ಲಿ 5,22,819 ಬಾಲಕಿಯರು, 6,84,068 ಬಾಲಕರು ಹಾಗೂ ಆರು ತೃತೀಯ ಲಿಂಗಿಗಳು ಪರೀಕ್ಷೆಗೆ ಹಾಜರಾಗಿದ್ದರು.

Central Board Of Secondary Education (CBSE) Class 12 Exam Results Announced

ಕೊರೊನಾ ಮಹಾಮಾರಿಯಿಂದಾಗಿ ಸಿಬಿಎಸ್‌ಇಯ ಕೆಲವು ವಿಷಯಗಳ ಪರೀಕ್ಷೆ ನಡೆದಿರಲಿಲ್ಲ. ಇಂತಹ ವಿಷಯಗಳಿಗೆ, ಹಿಂದಿನ ಎರಡು ಪೂರಕ ಪರೀಕ್ಷೆಯ ಅಂಕಗಳನ್ನು ಪರಿಗಣಿಸಲಾಗಿತ್ತು.

2019ರಲ್ಲಿ ಶೇ.83.40ರಷ್ಟು ಫಲಿತಾಂಶವಿತ್ತು ಅದು 2018ಕ್ಕಿಂತ 0.39ರಷ್ಟು ಹೆಚ್ಚಿತ್ತು.

ಒಂದೊಮ್ಮೆ ಆ ಅಂಕವು ವಿದ್ಯಾರ್ಥಿಗಳಿಗೆ ಕಡಿಮೆ ಎನಿಸಿದರೆ ಪ್ರತ್ಯೇಕ ಪರೀಕ್ಷೆಗೆ ಅನುವು ಮಾಡಿಕೊಡುವುದಾಗಿ ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದೆ.ಮೈಕ್ರೋಸಾಫ್ಟ್ ಎಸ್‌ಎಂಎಸ್ ಆರ್ಗನೈಸರ್ ಅಪ್ಲಿಕೇಷನ್, ಡಿಜಿ ಲಾಕರ್, ಉಮಂಗ್ ಅಪ್ಲಿಕೇಷನ್, ಡಿಜಿ ರಿಸಲ್ಟ್ ಅಪ್ಲಿಕೇಷನ್ ಮೂಲಕ ಫಲಿತಾಂಶ ನಿಮ್ಮ ಆಂಡ್ರಾಯ್ಡ್ ಮೊಬೈಲ್‌ನಲ್ಲಿ ವೀಕ್ಷಿಸಬಹುದು.

-ಸಿಬಿಎಸ್‌ಇ ವೆಬ್‌ಸೈಟ್‌ನಲ್ಲಿ ಲಾಗ್‌ಇನ್ ಆಗಿ ಅದರಲ್ಲಿ cbseresults.nic.in ಕ್ಲಿಕ್ ಮಾಡಿ ಫಲಿತಾಂಶ ವೀಕ್ಷಿಸಬಹುದು.
-ರಿಸಲ್ಟ್ 2020 ಲಿಂಕ್‌ ಮೇಲೆ ಕ್ಲಿಕ್ ಮಾಡಬೇಕು
-ಲಾಗ್‌ ಇನ್ ಆಗಲು ಕೆಲವು ಮಾಹಿತಿಯನ್ನು ತುಂಬಬೇಕು
-ಸಬ್ ಮಿಟ್ ಮಾಡಬೇಕು
-ಸ್ಕ್ರೀನ್‌ನಲ್ಲಿ ರಿಸಲ್ಟ್ ಕಾಣಿಸಲಿದೆ
-ಡೌನ್‌ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು

English summary
CBSE class 12 result has been announced by Central Board of Secondary Education on its official website today July 13, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X