• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಿಕೆ ಚಿತ್ರಕ್ಕೆ ಸೆನ್ಸಾರ್ ಅನುಮತಿ ನೀಡಿದ್ದ ಅಧ್ಯಕ್ಷೆ ರಾಜೀನಾಮೆ

|

ಭಾರತೀಯ ಸೆನ್ಸಾರ್ ಮಂಡಳಿಯ (Censor Board of Film Certification) ಇತಿಹಾಸದಲ್ಲಿ ಲೀಲಾ ಸಾಮ್ಸನ್ ಅವರ ಹೆಸರು ಚಾಲ್ತಿಯಲ್ಲಿದಷ್ಟು ಬೇರೆಯವರ ಹೆಸರು ಬಂದು ಹೋದ ಉದಾಹರಣೆಗಳು ಕಮ್ಮಿ. ಈಗ ಲೀಲಾ ಸಾಮ್ಸನ್ ಸೆನ್ಸಾರ್ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಗುರುವಾರ (ಜ 16) ಬಂದಿದ್ದಾರೆ.

ಲೀಲಾ ರಾಜೀನಾಮೆ ನಿರ್ಧಾರದ ಹಿಂದೆಯೇ ಮಂಡಳಿಯ ಹಿರಿಯ ಅಧಿಕಾರಿ ಇರಾ ಭಾಸ್ಕರ್ ಕೂಡಾ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವುದು ಇದೀಗ ತಾನೆ ಬಂದ ಸುದ್ದಿ.

ಮೇಲ್ನೋಟಕ್ಕೆ ಸಾಮ್ಸನ್ ರಾಜೀನಾಮೆ ನಿರ್ಧಾರ 'ಮೆಸೆಂಜರ್ ಆಫ್ ಗಾಡ್' ಎನ್ನುವ ಹಿಂದಿ ಸಹಿತ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರಕ್ಕೆ ಸಂಬಂಧ ಪಟ್ಟಿದ್ದು.

ಆದರೆ ಸಾಮ್ಸನ್ ತನ್ನ ರಾಜೀನಾಮೆ ನಿರ್ಧಾರಕ್ಕೆ ಬೊಟ್ಟು ಮಾಡುತ್ತಿರುವುದು ಮಾಹಿತಿ ಮತ್ತು ಪ್ರಸಾರಖಾತೆ ಇಲಾಖೆ ಮೇಲೆ. (ನೆಮ್ಮದಿ ಹಾಳುಗೆಡಹುವ ಚಲನಚಿತ್ರ ಯಾರಿಗೆ ಬೇಕು)

ಮೂಲತಃ ಭರತನಾಟ್ಯ ಕಲಾವಿದೆಯಾಗಿರುವ ಲೀಲಾ ಸಾಮ್ಸನ್, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮನೆಯಲ್ಲಿ ಮಗಳು ಪ್ರಿಯಾಂಕಾಗೆ ಡ್ಯಾನ್ಸ್ ಟೀಚರ್ ಆಗಿದ್ದವರು.

2010-14ರ ಅವಧಿಯಲ್ಲಿ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷೆಯಾಗಿದ್ದ ಲೀಲಾ, 2005-13ರ ಅವಧಿಯಲ್ಲಿ ಕಲಾಕ್ಷೇತ್ರದ ನಿರ್ದೇಶಕಿಯಾಗಿ ಜೊತೆಗೆ 2011ರಿಂದ ಸೆನ್ಸಾರ್ ಮಂಡಳಿಯ ಅಧ್ಯಕ್ಷೆಯಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ.

ಸಿಖ್ಖರ ದೀರಾ ಸಚ್ಚಾ ಸೌದಾ ಸಂಘಟನೆಯ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಪ್ರಮುಖ ಭೂಮಿಕೆಯಲ್ಲಿರುವ 'ಮೆಸೆಂಜರ್ ಆಫ್ ಗಾಡ್' ಎನ್ನುವ ಚಿತ್ರಕ್ಕೆ ಪ್ರಮಾಣ ಪತ್ರ ನೀಡುವ ಸಂಬಂಧ ಸೆನ್ಸಾರ್ ಮಂಡಳಿ ಮತ್ತು ಚಿತ್ರತಂಡದ ನಡುವೆ ಕಿತ್ತಾಟ ನಡೆಯುತ್ತಲೇ ಇತ್ತು.

ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡದೇ ಎಫ್ ಸಿಎಟಿ (Film Certification Appellate Tribunal) ಮಂಡಳಿಯನ್ನು ಸಂಪರ್ಕಿಸುವಂತೆ ಉಲ್ಲೇಖಿ ವಾಪಸ್ ಕಳುಹಿಸಿತ್ತು. ಎಫ್ ಸಿಎಟಿ ಈಗ ಚಿತ್ರ ಬಿಡುಗಡೆಗೆ ಅನುಮತಿ ನೀಡಿ ಪ್ರಮಾಣಪತ್ರ ನೀಡಿರುವುದು ಲೀಲಾ ಸಾಮ್ಸನ್ ರಾಜೀನಾಮೆಗೆ ನೀಡುತ್ತಿರುವ ಕಾರಣ.

ಮಾಹಿತಿ ಮತ್ತು ಪ್ರಸಾರಖಾತೆ ಬರೀ ಭ್ರಷ್ಟರಿಂದಲೇ ತುಂಬಿದೆ, ಲಂಚಾವತಾರ ಅಲ್ಲಿ ತಾಂಡವಾಡುತ್ತಿದೆ. ಮೆಸೆಂಜರ್ ಆಫ್ ಗಾಡ್ ಚಿತ್ರ ಬಿಡುಗಡೆಗೆ ಅನುಮತಿ ನೀಡಿ ಇಲಾಖೆ ಸೆನ್ಸಾರ್ ಮಂಡಳಿಯನ್ನು ಅವಮಾನಿಸಿದೆ ಎಂದು ಲೀಲಾ ಸಾಮ್ಸನ್ ಮೋದಿ ಸರಕಾರದ ವಿರುದ್ದ ಹರಿಹಾಯ್ದಿದಿದ್ದಾರೆ. ಮುಂದಿನ ಪುಟ ಕ್ಲಿಕ್ಕಿಸಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Read in English: Censor Board chief quits
English summary
Censor Board chief Leela Samson decides to quit. Her decision came after, reports that controversial film 'Messenger of God' featuring Dera Saccha Sauda chief Gurmeet Ram Rahim Singh in lead role has been cleared by the Film Certification Appellate Tribunal (FCAT).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more