ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ನೆಚ್ಚಿನ ಶಿಕ್ಷಕರಿಗೆ ಧನ್ಯವಾದ ಹೇಳುವ ಮೂಲಕ ಶಿಕ್ಷಕರ ದಿನ ಆಚರಿಸಿ

Google Oneindia Kannada News

ಭಾರತೀಯ ಸಂಸ್ಕೃತಿಯಲ್ಲಿ ಪುರಾತನ ಕಾಲದಿಂದಲೂ ಗುರುವಿಗೆ ಉನ್ನತ ಸ್ಥಾನ-ಮಾನವನ್ನು ಸಮಾಜವು ನೀಡಿದೆ.

Celebrate Teachers Day 2021 By thanking Your Rockstar Teacher By Video


ಶಿಕ್ಷಕರಾದವರು ಮಗುವಿನ ಮನಸ್ಸನ್ನು ಅರಿತು ಪರಿಣಾಮಕಾರಿಯಾದ ಬೋಧನೆಯನ್ನು ಮಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿದ್ದಾರೆ.

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಉಕ್ತಿಯಂತೆ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು, ಸಂಯಮ, ಏಕಾಗ್ರತೆಯನ್ನು ಅಳವಡಿಸಿಕೊಂಡು ಗುರು-ಹಿರಿಯರಿಗೆ ಗೌರವ ಕೊಡುವುದನ್ನು ಕಲಿತುಕೊಂಡಾಗ ಮಾತ್ರ ಸ್ವಸ್ತ ಸಮಾಜ ನಿರ್ಮಾಣ ಸಾಧ್ಯ.

ಶಿಕ್ಷಕರು ಎಂದಿಗೂ ವಿದ್ಯಾರ್ಥಿಗಳನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆತರುವ ಪ್ರಯತ್ನವನ್ನು ಮಾಡುತ್ತಾರೆ. ಇದು ನಿಸ್ವಾರ್ಥ ಮನಸ್ಸಿಗೆ ನಮ್ಮ ಕೃತಜ್ಞತೆಯನ್ನು ಸಲ್ಲಿಸುವ ದಿನವಾಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ಅನುಭವವನ್ನು ಒದಗಿಸಲು ಯಾವುದೇ ಮಟ್ಟಕ್ಕಾದರೂ ಹೋಗುತ್ತಾರೆ. ಇದರಿಂದ ಮಕ್ಕಳ ಅಧ್ಯಯನದಲ್ಲಿ ಮಾತ್ರವಲ್ಲ ಅವರ ಇಡೀ ಜೀವನವನ್ನೇ ಬದಲಾಯಿಸುವ ಶಕ್ತಿ ಅವರಿಗಿರುತ್ತದೆ.

ಒಬ್ಬ ಶಿಕ್ಷಕ ವಿದ್ಯಾರ್ಥಿಯಿಂದ ನಿರೀಕ್ಷಿಸುವುದು ಒಂದು ಸಣ್ಣ ಕೃತಜ್ಞತೆ ಅಥವಾ ಧನ್ಯವಾದ ಮಾತ್ರ, #SayThanksToYourTeachersToday,ಹಾಗಾದರೆ ತಡ ಯಾಕೆ ನಿಮ್ಮ ನೆಚ್ಚಿನ ಶಿಕ್ಷಕರಿಗೆ ಧನ್ಯವಾದ ತಿಳಿಸಿಬಿಡಿ.

Dailylearn

"Dailylearn" (https://www.dailylearn.in/) ಇದು ಆನ್‌ಲೈನ್ ಕಲಿಕಾ ವೇದಿಕೆಯಾಗಿದ್ದು, ಗಣಿತ, ವಿಜ್ಞಾನ ಇಂಗ್ಲಿಷ್, ಹಾಗೂ ವಾಣಿಜ್ಯವನ್ನು ಕಲಿಯಬಹುದಾಗಿದೆ.
ಪ್ರಸ್ತುತ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳು, ಜೆಇಇ ಹಾಗೂ ನೀಟ್ ವಿದ್ಯಾರ್ಥಿಗಳ ಮೇಲೆ ಕೇಂದ್ರೀಕರಿಸಲಾಗಿದೆ. ಉಪನ್ಯಾಸಕರು ರೆಕಾರ್ಡ್ ಮಾಡಿದ ವಿಡಿಯೋಗಳು, ಸಂಕ್ಷಿಪ್ತ ಅಧ್ಯಯನ ಸಾಮಗ್ರಿಗಳು, ಪರೀಕ್ಷೆಗೂ ಅನುಕೂಲವಾಗುವಂತೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡುತ್ತಿದ್ದಾರೆ.

ಎಲ್ಲಾ ವಿಷಯಗಳಿಗೆ ಪ್ರತಿ ತಿಂಗಳಿಗೆ 999 ರೂ. ಗಳಿಗೆ ಸಣ್ಣ ಪಟ್ಟಣಗಳಲ್ಲಿ ಆಫ್‌ಲೈನ್ ಟ್ಯೂಷನ್ ಬದಲಿಗೆ ಉತ್ತಮ ವ್ಯವಸ್ಥೆಯಾಗಿದೆ. ಪ್ರಸ್ತುತ ಕೊರೊನಾ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಪಾಕೆಟ್ ಕೋಚಿಂಗ್ ಅಥವಾ ಬೋಧನಾ ಕೇಂದ್ರವಾಗಿ ತಮ್ಮ ಕಲಿಕಾ ಅಗತ್ಯಗಳಿಗಾಗಿ ಬಳಕೆ ಮಾಡಬಹುದಾಗಿದೆ.

Celebrate Teachers Day 2021 By thanking Your Rockstar Teacher By Video

ಚಟುವಟಿಕೆ ಆಧಾರಿತ, ಕತೆ ಆಧಾರಿತ ಬೋಧನಾ ವಿಧಾನಗಳನ್ನು ಅಳವಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಆಸಕ್ತಿದಾಯಕ ಹಾಗೂ ಮತ್ತಷ್ಟು ತೊಡಗಿಸಿಕೊಳ್ಳುವಂತೆ ಮಾಡುತ್ತಿದೆ.

ಉತ್ತಮ ಕಲಿಕೆ ನೀಡಲು ಸರಾಸರಿ 15 ವರ್ಷಗಳ ಅನುಭವವಿರುವ ಶಿಕ್ಷಕರನ್ನು ನೇಮಿಸಲಾಗಿದೆ. ಡೈಲಿ ಲರ್ನ್‌ ಅನ್ನು ಭಾರತದಲ್ಲಿ 2.5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಬಳಕೆ ಮಾಡುತ್ತಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X