ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಥಿಕ ಸಲಹೆಗಾರ ಹುದ್ದೆಯಿಂದ ಹಿಂದೆ ಸರಿದ ಅರವಿಂದ್ ಸುಬ್ರಮಣಿಯನ್

By Sachhidananda Acharya
|
Google Oneindia Kannada News

ನವದೆಹಲಿ, ಜೂನ್ 20: ಹಣಕಾಸು ಇಲಾಖೆಯ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ ಸುಬ್ರಮಣಿಯನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಹೊರ ಬರಲಿದ್ದಾರೆ. 'ಕೌಟುಂಬಿಕ' ಕಾರಣವನ್ನು ನೀಡಿ ಅವರು ಅಮೆರಿಕಾಗೆ ವಾಪಸಾಗಲು ಬಯಸಿದ್ದಾರೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

2014ರ ಅಕ್ಟೋಬರ್ 16ರಂದು ಅರವಿಂದ್ ಸುಬ್ರಮಣಿಯನ್ ಅವರನ್ನು ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿತ್ತು. ನಂತರ 2017ರಲ್ಲಿ ಅವರ ಅವಧಿಯನ್ನು ಮತ್ತೆರಡು ವರ್ಷ ವಿಸ್ತರಣೆ ಮಾಡಲಾಗಿತ್ತು.

ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಬಗ್ಗೆ ಜೇಟ್ಲಿ ಹೇಳಿದ್ದೇನು?ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಬಗ್ಗೆ ಜೇಟ್ಲಿ ಹೇಳಿದ್ದೇನು?

"ಕೆಲವು ದಿನಗಳ ಹಿಂದೆ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ನನ್ನನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಭೇಟಿಯಾದರು. ಕೌಟುಂಬಿಕ ಬದ್ಧತೆಗಳ ಹಿನ್ನೆಲೆಯಲ್ಲಿ ನಾನು ಅಮೆರಿಕಾಗೆ ಮರಳಬೇಕು ಎಂದು ಅವವರು ನನಗೆ ಮಾಹಿತಿ ನೀಡಿದರು. ಅವರ ಕಾರಣಗಳು ವೈಯಕ್ತಿಕವಾಗಿದ್ದು, ಅವರ ದೃಷ್ಟಿಯಿಂದ ತುಂಬಾ ಮುಖ್ಯವಾದುದೇ ಆಗಿವೆ. ಅವರು ನನಗೆ ಇದಕ್ಕೆ ಒಪ್ಪಿಕೊಳ್ಳದೇ ಇರುವುದನ್ನು ಬಿಟ್ಟು ಬೇರೆ ಆಯ್ಕೆಯನ್ನೇ ನೀಡಲಿಲ್ಲ," ಎಂದು ತಮ್ಮ ಫೇಸ್ಬುಕ್ ಪೋಸ್ಟ್ ನಲ್ಲಿ ಜೇಟ್ಲಿ ಹೇಳಿದ್ದಾರೆ.

CEA Arvind Subramanian to leave finance ministry, return to US: Jaitley

"ಆ ಹಂತದಲ್ಲಿ ಅವರು ಕುಟುಂಬದ ಬದ್ಧತೆ ಮತ್ತು ಅವರ ಪ್ರಸ್ತುತ ಕೆಲಸದ ನಡುವೆ ಸಿಕ್ಕಿಹಾಕಿಕೊಂಡಿದ್ದಾರೆ," ಎಂದು ಜೇಟ್ಲಿ ತಿಳಿಸಿದ್ದಾರೆ.

"ವೈಯಕ್ತಿಕವಾಗಿ ನಾನು ಅವರ ಚೈತನ್ಯ, ಶಕ್ತಿ, ಬೌದ್ಧಿಕ ಸಾಮರ್ಥ್ಯ ಮತ್ತು ಕಲ್ಪನೆಗಳನ್ನು ಕಳೆದುಕೊಳ್ಳುತ್ತೇನೆ. ದಿನಕ್ಕೆ ಹಲವು ಬಾರಿ ಅವರು ನನ್ನ ಕೋಣೆಯೊಳಕ್ಕೆ ಬರುತ್ತಿದ್ದರೆ.ಹೀಗೆ ಬಂದಾಗ ಒಳ್ಳೆಯ ಸುದ್ದಿ ಅಥವಾ ಬೇರೇನಾದರೂ ಮಾಹಿತಿ ನೀಡುತ್ತಿದ್ದರು.ಈ ನಿರ್ಗಮನದಿಂದ ಅವರು ನನ್ನಿಂದ ತಪ್ಪಿಹೋದರು.ಆದರೆ ಅವರ ಹೃದಯ ಇಲ್ಲಿಯೇ ಇದೆ ಎಂಬುದು ನನಗೆ ತಿಳಿದಿದೆ. ಅವರು ಎಲ್ಲಿದ್ದರೂ ಅವರು ಸಲಹೆಗಳನ್ನು ಮತ್ತು ವಿಶ್ಲೇಷಣೆಯನ್ನು ಕಳುಹಿಸುತ್ತಿರುತ್ತಾರೆ ಎಂಬ ನಂಬಿಕೆ ತನಗಿದೆ," ಎಂಬುದಾಗಿ ಜೇಟ್ಲಿ ಸುಬ್ರಮಣಿಯನ್ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.

ಒಂದೆರಡು ತಿಂಗಳಲ್ಲಿ ಹೊರಕ್ಕೆ
ಹಣಕಾಸು ಇಲಾಖೆಯಿಂದ ಹೊರಹೋಗುವ ನಿಖರವಾದ ದಿನವನ್ನು ಇನ್ನೂ ನಿರ್ಧರಿಸಿಲ್ಲ. ಆದರೆ, ಒಂದೆರಡು ತಿಂಗಳಿನಲ್ಲಿ ಈ ನಿರ್ಧಾರ ಜಾರಿಯಾಗಲಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ತಿಳಿಸಿದ್ದಾರೆ.

ಸೆಪ್ಟೆಂಬರ್ ವೇಳೆಗೆ ತಮಗೆ ಮೊಮ್ಮಗು ಜನಿಸಲಿದೆ. ಈ ವೇಳೆಗೆ ಸಚಿವಾಲಯದಿಂದ ಹೊರಕ್ಕೆ ಹೋಗಿರುವುದಾಗಿ ಅವರು ಹೇಳಿದ್ದಾರೆ.

English summary
Union Minister Arun Jaitley said today that Chief Economic Advisor Arvind Subramanian will be leaving the finance ministry because of "pressing family commitments" and will return to the US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X