ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ "ಮಿಕ್ಸ್‌ ಅಂಡ್ ಮ್ಯಾಚ್" ಲಸಿಕೆ ಪ್ರಯೋಗಕ್ಕೆ ಅನುಮತಿ

|
Google Oneindia Kannada News

ನವದೆಹಲಿ, ಜುಲೈ 30: ಕೊರೊನಾ ಸೋಂಕಿನ ವಿರುದ್ಧ ಲಸಿಕೆಗಳ ದಕ್ಷತೆ ಪರಿಶೀಲಿಸಲು ಎರಡು ಭಿನ್ನ ಲಸಿಕೆಗಳ ಸಂಯೋಜನೆಯ ಪ್ರಯೋಗಕ್ಕೆ ಕೇಂದ್ರ ಔಷಧ ನಿಯಂತ್ರಕ ಮಂಡಳಿ ಶಿಫಾರಸು ಮಾಡಿದೆ.

ಭಾರತದಲ್ಲಿ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್‌ ಲಸಿಕೆಗಳ ಸಂಯೋಜನೆಯ ಪ್ರಯೋಗ ನಡೆಸಲು ಶಿಫಾರಸು ಮಾಡಿರುವುದಾಗಿ ವರದಿಗಳು ತಿಳಿಸಿವೆ.

ಒಂದೇ ವ್ಯಕ್ತಿಗೆ ಎರಡು ಭಿನ್ನ ಕೊರೊನಾ ಲಸಿಕೆ; ಅಪಾಯಕಾರಿ ಎಂದ WHOಒಂದೇ ವ್ಯಕ್ತಿಗೆ ಎರಡು ಭಿನ್ನ ಕೊರೊನಾ ಲಸಿಕೆ; ಅಪಾಯಕಾರಿ ಎಂದ WHO

ಕೇಂದ್ರ ಔಷಧ ನಿಯಂತ್ರಕ ಮಂಡಳಿಯ ವಿಷಯ ತಜ್ಞರು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿಗೆ ಈ ಲಸಿಕೆಗಳ ಸಂಯೋಜನೆ ಸಂಬಂಧ ಪ್ರಯೋಗ ನಡೆಸಲು ಅನುಮತಿ ನೀಡಿದ್ದಾರೆ. ಭಾರತದ ಸೆರಂ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಗಳ ನಾಲ್ಕನೇ ಹಂತದ ಪ್ರಯೋಗವನ್ನು ಸುಮಾರು 300 ಆರೋಗ್ಯವಂತ ಸ್ವಯಂ ಸೇವಕರ ಮೇಲೆ ನಡೆಸಲು ಅನುಮತಿ ನೀಡಲಾಗಿದೆ.

CDSCO Recommends Clinical Trial Of Mixing Covaxin and Covishield Vaccines

ಒಂದು ಡೋಸ್ ಕೋವಿಶೀಲ್ಡ್ ಹಾಗೂ ಒಂದು ಡೋಸ್ ಕೋವ್ಯಾಕ್ಸಿನ್ ಲಸಿಕೆ ನೀಡಿದರೆ ಯಾವ ರೀತಿ ಪ್ರಭಾವ ಬೀರಲಿದೆ, ಏನು ಬದಲಾವಣೆ ಗೋಚರಿಸಲಿದೆ ಎಂಬುದನ್ನು ಅರಿಯಲು ಅಧ್ಯಯನ ನಡೆಸಲಾಗುತ್ತಿದೆ.

ಇದೇ ಮೊದಲ ಬಾರಿಗೆ ಭಾರತದಲ್ಲಿ ಲಸಿಕೆಗಳ ಸಂಯೋಜನೆ ಸಂಬಂಧ ಪ್ರಯೋಗ ನಡೆಯುತ್ತಿದೆ. ಮನುಷ್ಯರಲ್ಲಿ ರೋಗನಿರೋಧಕ ಶಕ್ತಿಯ ಹೆಚ್ಚಳಕ್ಕೆ ಎರಡು ಭಿನ್ನ ಭಿನ್ನ ಲಸಿಕೆ ಡೋಸ್ ನೀಡುವ ಕುರಿತು ಪ್ರಯೋಗಗಳನ್ನು ನಡೆಸುವಂತೆ ಈ ಹಿಂದೆಯೂ ತಜ್ಞರು ಕೇಂದ್ರವನ್ನು ಕೇಳಿಕೊಂಡಿದ್ದರು. ಈ ಮುನ್ನ ಎಬೋಲಾ ಹಾಗೂ ಏಡ್ಸ್‌ ಸೋಂಕಿಗೂ ಲಸಿಕೆಗಳ ಸಂಯೋಜನೆಯ ಪ್ರಯೋಗವನ್ನು ನಡೆಸಲಾಗಿತ್ತು.

ತನ್ನ ಏಕ ಡೋಸ್ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಜಾನ್ಸನ್ ಅಂಡ್ ಜಾನ್ಸನ್ ಹಿಂದೆಗೆದುಕೊಂಡಿರುವುದಾಗಿ ತಿಳಿದುಬಂದಿದೆ.

ಕೊರೊನಾ ಸೋಂಕಿನ ವಿರುದ್ಧ ಪ್ರಬಲ ಹೋರಾಟಕ್ಕೆ ಎರಡು ಕೊರೊನಾ ಲಸಿಕೆಗಳ ಮಿಶ್ರ ಡೋಸ್ ನೀಡುವ ಕುರಿತು ಕಳೆದ ತಿಂಗಳಿನಿಂದ ಚರ್ಚೆಗಳು ಕೇಳಿಬರುತ್ತಿವೆ. ಎರಡು ಭಿನ್ನ ಕಂಪನಿಯ ಕೊರೊನಾ ಲಸಿಕೆಯ ಡೋಸ್‌ಗಳನ್ನು ನೀಡುವುದು ಸೋಂಕಿನ ವಿರುದ್ಧ ದೇಹದಲ್ಲಿ ಪ್ರತಿಕಾಯ ಸೃಷ್ಟಿಗೆ ನೆರವಾಗುತ್ತದೆ. ಹೀಗಾಗಿ ಮಿಶ್ರ ಡೋಸ್ ನೀಡಿದರೆ ಕೊರೊನಾ ಸೋಂಕನ್ನು ಹತೋಟಿಗೆ ತರಬಹುದು ಎಂದು ಕೆಲವು ತಜ್ಞರು ಸಲಹೆ ನೀಡಿದ್ದರು.

English summary
An expert panel of the Central Drugs Standard Control Organisation has recommended conducting a clinical trial on mixing of COVID-19 vaccines - Covaxin and Covishield,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X