ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮೇಲೆ ಸೈಬರ್ ದಾಳಿ ನಡೆಸುವ ಸಾಮರ್ಥ್ಯ ಚೀನಾಕ್ಕಿದೆ: ರಾವತ್

|
Google Oneindia Kannada News

ನವದೆಹಲಿ, ಏಪ್ರಿಲ್ 8: ಚೀನಾದ ಸೈಬರ್ ದಾಳಿಯ ಸಾಮರ್ಥ್ಯವು ಭಾರತಕ್ಕೆ ಬಹುದೊಡ್ಡ ಬೆದರಿಕೆಯಾಗಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಭಾರತವು ಸೈಬರ್ ರಕ್ಷಣೆಯ ಕ್ಷೇತ್ರದತ್ತ ಹೆಚ್ಚು ಗಮನ ಹರಿಸಿದೆ ಮತ್ತು ಅಂತಹ ಬೆದರಿಕೆಗಳನ್ನು ಎದುರಿಸಲು ಆಕ್ರಮಣಕಾರಿ ಸೈಬರ್ ಸಾಮರ್ಥ್ಯಗಳನ್ನು ರೂಪಿಸುವತ್ತ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

'ಆರಂಭದಲ್ಲಿ ನಾವು ಕೊಂಚ ನಿಧಾನಗತಿಯಲ್ಲಿದ್ದೆವು. ಹೀಗಾಗಿ ಕಳೆದ ಕೆಲವು ವರ್ಷಗಳಲ್ಲಿ ಈ ಸಾಮರ್ಥ್ಯ ಬೆಳೆದಿರಲಿಲ್ಲ. ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಲು ಚೀನಾ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದು, ಇಷ್ಟು ಅನುದಾನ ಪೂರೈಸಲು ಅದಕ್ಕೆ ಸಾಮರ್ಥ್ಯವಿದೆ. ಹೀಗಾಗಿ ಅವರು ಈ ವಿಚಾರದಲ್ಲಿ ಖಂಡಿತವಾಗಿಯೂ ನಮಗಿಂತ ಮುಂದಿದ್ದಾರೆ. ನಾವು ಕೂಡ ಅವರೊಂದಿಗೆ ಸರಿಸಮನಾಗಿ ನಿಲ್ಲಲು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ' ಎಂದು ಹೇಳಿದ್ದಾರೆ.

ಭಾರತದ ಮೇಲೆ ಚೀನಿ ಗ್ಯಾಂಗ್‌ನ ಸೈಬರ್ ಯುದ್ಭಾರತದ ಮೇಲೆ ಚೀನಿ ಗ್ಯಾಂಗ್‌ನ ಸೈಬರ್ ಯುದ್

'ಮುಖ್ಯವಾಗಿ ನಮ್ಮ ನಡುವಿನ ಬಹುದೊಡ್ಡ ಅಂತರ ಇರುವುದು ಸೈಬರ್ ಕ್ಷೇತ್ರದಲ್ಲಿ. ಚೀನಾವು ನಮ್ಮ ಮೇಲೆ ಸೈಬರ್ ದಾಳಿಗಳನ್ನು ನಡೆಸುವಷ್ಟು ಸಶಕ್ತವಾಗಿದೆ. ಅದು ನಮ್ಮ ವ್ಯವಸ್ಥೆಯ ಮೇಲೆ ಭಾರಿ ಪ್ರಮಾಣದಲ್ಲಿ ಹಾನಿಮಾಡಬಹುದು ಎಂದು ನಮಗೆ ತಿಳಿದಿದೆ' ಎಂದು ತಿಳಿಸಿದ್ದಾರೆ.

CDS Chief Bipin Rawat Says China Has Capability To Launch Cyber Attack On India

'ಸೈಬರ್ ರಕ್ಷಣೆಗಾಗಿ ವ್ಯವಸ್ಥೆಯೊಂದನ್ನು ಸೃಷ್ಟಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ನಮಗೆ ಅದು ಸಾಧ್ಯವಾಗಿದೆ ಕೂಡ. ಹೀಗಾಗಿ ಸೇನಾ ಪಡೆಗಳ ಒಳಗೆ ನಮ್ಮದೇ ಆದ ಸೈಬರ್ ಸಂಸ್ಥೆಯೊಂದನ್ನು ಸ್ಥಾಪಿಸಬೇಕಿದೆ. ಪ್ರತಿ ಸೇವೆಯೂ ತಮ್ಮದೇ ಸೈಬರ್ ಸಂಸ್ಥೆಯೊಂದನ್ನು ಹೊಂದಬೇಕು. ನಾವು ಸೈಬರ್ ದಾಳಿಗೆ ಒಳಗಾದರೂ ಅದನ್ನು ದೀರ್ಘಾವಧಿ ನಡೆಯದಂತೆ ಹತ್ತಿಕ್ಕುವ ಸಾಮರ್ಥ್ಯ ಬೆಳೆಯಬೇಕು. ಸೈಬರ್ ದಾಳಿಗಳನ್ನು ಎದುರಿಸುವ ಶಕ್ತಿ ಬರಬೇಕಿದೆ' ಎಂದಿದ್ದಾರೆ.

English summary
Chief of Defence Staff Bipin Rawat Said, China has capability to launch cyber attack on Indian systems.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X