ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

LACಯಲ್ಲಿ ಚೀನಾದಿಂದ ಗ್ರಾಮ ನಿರ್ಮಾಣ: ಬಿಪಿನ್ ರಾವತ್ ಹೇಳಿದ್ದೇನು?

|
Google Oneindia Kannada News

ನವದೆಹಲಿ, ನವೆಂಬರ್ 12: ಎಲ್‌ಎಸಿಯಲ್ಲಿ ಚೀನಾವು ಗ್ರಾಮ ನಿರ್ಮಾಣ ಮಾಡುತ್ತಿರುವ ಕುರಿತು ರಕ್ಷಣಾ ಪಡೆಗಳ ಮುಖ್ಯಸ್ಥರಾದ ಬಿಪಿನ್ ರಾವತ್ ಪ್ರತಿಕ್ರಿಯೆ ನೀಡಿದ್ದಾರೆ.

''ಭಾರತಕ್ಕೆ ಸೇರಿದ ಪ್ರದೇಶದ ಎಲ್ಎಸಿಯಲ್ಲಿ ಚೀನಾ ಗ್ರಾಮಗಳನ್ನು ನಿರ್ಮಾಣ ಮಾಡುತ್ತಿದೆ ಎಂಬುದು ಸತ್ಯವಲ್ಲ, ಆ ಗ್ರಾಮಗಳು ಚೀನಾಗೆ ಸೇರುವ ಎಲ್ಎಸಿಯಲ್ಲೇ ಇವೆ ಎಂದು ಹೇಳಿದ್ದಾರೆ. ಭಾರತದ ಎಲ್ಎಸಿಯೊಳಗೆ ಚೀನಾ ಅತಿಕ್ರಮಣ ಪ್ರವೇಶ ಮಾಡಿಲ್ಲ'' ಎಂದೂ ಬಿಪಿನ್ ರಾವತ್ ಹೇಳಿದ್ದಾರೆ.

ಅರುಣಾಚಲ ಗಡಿಯಲ್ಲಿ ನೂರಾರು ಕಟ್ಟಡಗಳನ್ನು ನಿರ್ಮಿಸಿದ್ದ ಚೀನಾಅರುಣಾಚಲ ಗಡಿಯಲ್ಲಿ ನೂರಾರು ಕಟ್ಟಡಗಳನ್ನು ನಿರ್ಮಿಸಿದ್ದ ಚೀನಾ

ಅಮೆರಿಕದ ವರದಿಗೆ ಸಂಬಂಧಿಸಿದಂತೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದ ಭಾರತದ ವಿದೇಶಾಂಗ ಸಚಿವಾಲಯ, ಚೀನಾದ ಅಕ್ರಮ ಪ್ರವೇಶವನ್ನು ಹಾಗೂ ಚೀನಾದ ಅಸಮರ್ಥನೀಯ ಪ್ರತಿಪಾದನೆಗಳನ್ನು ಭಾರತ ಒಪ್ಪುವುದಿಲ್ಲ ಎಂದು ಹೇಳಿದ್ದರು.

CDS Bipin Rawat Refutes Reports Of China Building Villages In Arunachal Pradesh

ಅಮೆರಿಕದ ರಕ್ಷಣಾ ಇಲಾಖೆ ತನ್ನ ಇತ್ತೀಚಿನ ವರದಿಯಲ್ಲಿ ಚೀನಾ ಟಿಬೆಟ್ ಅಟಾನಾಮಸ್ ಪ್ರದೇಶ ಹಾಗೂ ಭಾರತದ ಅರುಣಾಚಲ ಪ್ರದೇಶದ ಈಶಾನ್ಯ ಸೆಕ್ಟರ್ ಎಲ್ಎಸಿಯ ಮಧ್ಯಭಾಗದಲ್ಲಿರುವ ವಿವಾದಿತ ಪ್ರದೇಶದ ಒಳಭಾಗದಲ್ಲಿ ಗ್ರಾಮಗಳನ್ನು ನಿರ್ಮಾಣ ಮಾಡುತ್ತಿದೆ ಎಂದು ಹೇಳಿತ್ತು.

ಚೀನಾ ಭೂಗಡಿಯಲ್ಲಿ ಯಾವುದೇ ರೀತಿಯಲ್ಲಿ ಉಲ್ಲಂಘನೆ ಕಂಡುಬಂದರೆ ಹಾಗೂ ತನ್ನ ದೇಶದ ಅಖಂಡತೆಗೆ ಧಕ್ಕೆ ಒದಗಿಬಂಡರೆ ತನ್ನ ರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳಲು ಈ ಕಾನೂನು ಚೀನಾಗೆ ಅನುವು ಮಾಡಿಕೊಡಲಿದೆ.

ಈ ನೂತನ ಕಾನೂನಿನಲ್ಲಿ ಗಡಿ ಬಲವರ್ಧನೆ ಮಾತ್ರವಲ್ಲದೆ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಗಡಿ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ನಿರ್ಮಾಣ ಹಾಗೂ ಅಲ್ಲಿನ ಜನರ ಜೀವನ ಸದೃಢಗೊಳಿಸುವ ಕಾರ್ಯಕ್ರಮಗಳ ಕುರಿತಾಗಿ ಉಲ್ಲೇಖವಿದೆ.

ನ.11 ರಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಾಗ್ಚಿ, ಚೀನಾ ದಶಕಗಳಿಂದ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ಕಟ್ಟಡ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ, ತನ್ನ ಭಾಗದಲ್ಲಿನ ಅಕ್ರಮ ಅತಿಕ್ರಮಣವನ್ನು ಭಾರತ ಎಂದಿಗೂ ಒಪ್ಪಿಲ್ಲ, ಚೀನಾದ ಅಸಮರ್ಥನೀಯ ಹಕ್ಕು ಪ್ರತಿಪಾದನೆಗಳನ್ನೂ ಭಾರತ ಅಂಗೀಕರಿಸಿಲ್ಲ ಎಂದು ಹೇಳಿದ್ದರು.

ಚೀನಾ ದೇಶದ ಅಖಂಡತೆ ಹಾಗೂ ಸಾರ್ವಭೌಮತ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಚೀನಾ ತಾನು ನೂತನ ಭೂ ಗಡಿ ಕಾನೂನನ್ನು ಜಾರಿಗೆ ತರುತ್ತಿರುವುದಾಗಿ ಘೋಷಿಐದೆ. ಚೀನಾ ಸಂಸತ್ತಿನಲ್ಲಿ ಈ ಕಾನೂನಿಗೆ ಒಪ್ಪಿಗೆ ದೊರೆತಿದ್ದು ಮುಂದಿನ ವರ್ಷ ಜನವರಿ1 ರಿಂದ ಅನುಷ್ಠಾನಕ್ಕೆ ಬರಲಿದೆ.

ಭಾರತದೊಂದಿಗೆ ಗಡಿ ಬಿಕ್ಕಟ್ಟನ್ನು ಹೊಂದಿರುವ ಚೀನಾ ನೂತನ ಕಾನೂನನ್ನು ತಂದಿರುವುದು ಭಾರತಕ್ಕೆ ಪರೋಕ್ಷ ಎಚ್ಚರಿಕೆಯಾಗಿದೆ ಎಂದು ರಾಜಕೀಯ ಪರಿಣತರು ಅಭಿಪ್ರಾಯಪಡಲಾಗಿತ್ತು.

ಚೀನಾವು ಅತಿದೊಡ್ಡ ಮತ್ತು ಅತ್ಯಾಧುನಿಕ ಯುದ್ಧನೌಕೆಯನ್ನು ಪಾಕಿಸ್ತಾನಕ್ಕೆ ತಲುಪಿಸಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಗ್ಲೋಬಲ್ ಟೈಮ್ಸ್ ಪ್ರಕಾರ, ಚೀನಾ ಸ್ಟೇಟ್ ಶಿಪ್ ಬಿಲ್ಡಿಂಗ್ ಕಾಪೋರೇಷನ್ ಲಿಮಿಟೆಡ್ ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ಯುದ್ಧನೌಕೆಯನ್ನು ಪಾಕಿಸ್ತಾನ ನೌಕಾಪಡೆಗೆ ಶಾಂಘೈನ ಸಮಾರಂಭದಲ್ಲಿ ವಿತರಿಸಲಾಯಿತು.

ಗ್ಲೋಬಲ್ ಟೈಮ್ಸ್‍ಗೆ ಮಾಹಿತಿ ನೀಡಿದ ಪಾಕಿಸ್ತಾನ ನೌಕಾಪಡೆ ಟೈಪ್ 054ಎ/ಪಿ ಯುದ್ಧನೌಕೆಗೆ ಪಿಎನ್‍ಎಸ್ ತುಗ್ರಿಲ್ ಎಂದು ಹೆಸರಿಸಲಾಗಿದೆ. ಪಿಎನ್‍ಎಸ್ ತುಗ್ರಿಲ್ ಪಾಕಿಸ್ತಾನ ನೌಕಾಪಡೆಗಾಗಿ ನಿರ್ಮಿಸಲಾಗುತ್ತಿರುವ ನಾಲ್ಕು ವಿಧದ 054 ಯುದ್ಧನೌಕೆಗಳ ಮೊದಲ ಕವಚ ಎಂದು ಪಾಕಿಸ್ತಾನ ನೌಕಾಪಡೆ ತಿಳಿಸಿದೆ.

ಹಡಗು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು ಹೆಚ್ಚು ಸಾಮಥ್ರ್ಯವನ್ನು ಹೊಂದಿದೆ. ವ್ಯಾಪಕವಾದ ಕಣ್ಗಾವಲು ಸಾಮಥ್ರ್ಯಗಳ ಜೊತೆಗೆ ಅಗಾಧವಾದ ಗಾಳಿ ಮತ್ತು ನೀರೊಳಗಿನ ಫೈರ್‍ಪವರ್ ಕೂಡ ಇದೆ. ಇದು ಆಧುನಿಕ ಸ್ವರಕ್ಷಣೆ ಸಾಮಥ್ರ್ಯದ ಜೊತೆಗೆ ಅತ್ಯಾಧುನಿಕ ಮಾದರಿಯಲ್ಲಿ ಯುದ್ಧ ನಿರ್ವಹಣೆ ಮತ್ತು ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಯನ್ನು ಹೊಂದಿದೆ.

ಟೈಪ್ 054ಎ/ಪಿ ಯುದ್ಧನೌಕೆಯು ಏಕಕಾಲದಲ್ಲಿ ಹಲವಾರು ನೌಕಾ ಯುದ್ಧ ಕಾರ್ಯಾಚರಣೆಗಳನ್ನು ಅತ್ಯಂತ ತೀವ್ರವಾದ ಬಹುವೇಗವಾಗಿ ಕಾರ್ಯಗತಗೊಳಿಸಬಲ್ಲದು ಎಂದು ಪಾಕಿಸ್ತಾನ ಹೇಳಿದೆ.

English summary
Chief of Defence Staff (CDS) Bipin Rawat on Thursday refuted reports of a 100-home village constructed by the Chinese in Arunachal Pradesh. He said there has been no transgression against the Line of Actual Control as yet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X