ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10, 12ನೇ ತರಗತಿ ವಿದ್ಯಾರ್ಥಿಗಳಿಗಾಗಿ ಸಿಬಿಎಸ್ಇ ಹೊಸ ಯೋಜನೆ

|
Google Oneindia Kannada News

ನವದೆಹಲಿ, ಜುಲೈ 05: ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು 2021-22ನೇ ಸಾಲಿನ 10ನೇ ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗಾಗಿ ವಿಶೇಷ ಮೌಲ್ಯಮಾಪನ ವ್ಯವಸ್ಥೆಯ ಕುರಿತು ಅಧಿಸೂಚನೆ ಹೊರಡಿಸಿದೆ.

ಎರಡೂ ತರಗತಿಗಳನ್ನು ಶೇ.50ರಷ್ಟು ಪಠ್ಯಕ್ರಮದ ಮಾದರಿಯಲ್ಲಿ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ನವೆಂಬರ್ ತಿಂಗಳಿನಲ್ಲಿ ಮೊದಲ ಭಾಗದ ಪರೀಕ್ಷೆಗಳು ನಡೆಯಲಿವೆ ಎಂದು ಸಿಬಿಎಸ್ಇ ತಿಳಿಸಿದೆ. 2020-21ನೇ ಸಾಲಿನ ಸಿಬಿಎಸ್ಇ ಪರೀಕ್ಷೆಗಳನ್ನು ಈಗಾಗಲೇ ರದ್ದುಗೊಳಿಸಲಾಗಿದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ 2021-22ನೇ ಸಾಲಿನ ಪಠ್ಯಕ್ರಮದಲ್ಲೂ ಬದಲಾವಣೆ ಮಾಡಲಾಗಿದೆ.

ತಜ್ಞರ ಸಮಿತಿ ವರದಿ ಆಧರಿಸಿ PUC ಫಲಿತಾಂಶ ಪ್ರಕಟ: ಸುರೇಶ್ ಕುಮಾರ್ತಜ್ಞರ ಸಮಿತಿ ವರದಿ ಆಧರಿಸಿ PUC ಫಲಿತಾಂಶ ಪ್ರಕಟ: ಸುರೇಶ್ ಕುಮಾರ್

ಆಂತರಿಕ ಮೌಲ್ಯಮಾಪನಕ್ಕೆ ಹೆಚ್ಚಿನ ಒತ್ತು ಮತ್ತು ಆದ್ಯತೆಯನ್ನು ನೀಡಲಾಗಿದೆ. ಇದರ ಮಧ್ಯೆ ಮುಂದಿನ ಶೈಕ್ಷಣಿಕ ವರ್ಷದ ರೂಪುರೇಷೆಗಳನ್ನು ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಬಿಡುಗಡೆಗೊಳಿಸಿದ್ದು, ಈ ಕುರಿತು ಮಾಹಿತಿಯನ್ನು ಮುಂದೆ ಓದಿ.

CBSE Splits the Syllabus In 50-50 Style: New Scheme For 2021-22 Academic Year

ಸಿಬಿಎಸ್ಇ ಹೊರಡಿಸಿರುವ ಅಧಿಸೂಚನೆ ಪ್ರಮುಖ ಅಂಶಗಳು:

  • 2021-22ರ ಶೈಕ್ಷಣಿಕ ಸಾಲಿನ ಪಠ್ಯಕ್ರಮವನ್ನು ವಿಷಯ ತಜ್ಞರಿಂದ ವ್ಯವಸ್ಥಿತ ವಿಧಾನದ ಮೂಲಕ ವಿಭಜಿಸಲಾಗುವುದು. ಎರಡು ಭಾಗಗಳಾಗಿ ವಿಂಗಡಿಸಲಾದ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಅವಧಿಯ ಕೊನೆಯಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು.
  • 2022ರ ಶೈಕ್ಷಣಿಕ ಸಾಲಿನ ಪಠ್ಯಕ್ರಮದ ಬಗ್ಗೆ 2021ರ ಜುಲೈನಲ್ಲಿ ಅಧಿಸೂಚನೆ ಹೊರಡಿಸಲಾಗುವುದು. ಎನ್‌ಸಿಇಆರ್‌ಟಿ ಮೂಲಕ ಶಾಲೆಗಳಿಗೆ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಮತ್ತು ಪಠ್ಯಕ್ರಮದ ಬಗ್ಗೆ ತಿಳಿಸಲಾಗುತ್ತದೆ.
  • ಸಿಬಿಎಸ್‌ಇ ಘೋಷಿಸಲಿರುವ ಮಾರ್ಗಸೂಚಿಗಳು ಮತ್ತು ಮಾಡರೇಶನ್ ನೀತಿಯ ಪ್ರಕಾರ, ಆಂತರಿಕ ಮೌಲ್ಯಮಾಪನ ಅಥವಾ ಪ್ರಾಕ್ಟಿಕಲ್ ಅಥವಾ ಪ್ರಾಜೆಕ್ಟ್ ವರ್ಕ್ ಬಗ್ಗೆ ನ್ಯಾಯಯುತವಾಗಿ ಅಂಕಗಳ ನೀಡುವಿಕೆ ಬಗ್ಗೆ ಖಚಿತಪಡಿಸಿಕೊಳ್ಳಲಾಗುವುದು.

ಸಿಬಿಎಸ್‌ಇ ಪಠ್ಯಕ್ರಮದ ವ್ಯವಹಾರದ ವಿವರಗಳು:

  • ಶಾಲೆಗಳನ್ನು ತೆರೆಯುವುದಕ್ಕೆ ಪ್ರಾಧಿಕಾರ ಅನುಮತಿ ನೀಡುವವರೆಗೂ ದೂರ ಶಿಕ್ಷಣ ಕ್ರಮದಲ್ಲಿ ಬೋಧನೆ ಮುಂದುವರಿಸುವುದು
  • 9 ಮತ್ತು 10 ನೇ ತರಗತಿಗಳಿಗೆ, ಆಂತರಿಕ ಮೌಲ್ಯಮಾಪನವು (ಅವಧಿ I ಮತ್ತು II ರ ವರ್ಷವಿಡೀ) ಮೂರು ನಿಮಯಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಗಳ ಪುಷ್ಟೀಕರಣ, ಪ್ರಾಯೋಗಿಕ ಕೆಲಸ, ಮಾತಗಾರಿಕೆ, ಆಲಿಸುವ ಚಟುವಟಿಕೆ ಹಾಗೂ ಯೋಜನಾ ವೈಖರಿಯನ್ನು ಒಳಗೊಂಡಿರುತ್ತದೆ.
  • 11 ಮತ್ತು 12 ನೇ ತರಗತಿಗಳಿಗೆ, ಆಂತರಿಕ ಮೌಲ್ಯಮಾಪನವು (ಅವಧಿ I ಮತ್ತು II ರ ವರ್ಷವಿಡೀ) ವಿಷಯದ ಅಂತ್ಯ ಅಥವಾ ಘಟಕ ಪರೀಕ್ಷೆ, ಪರಿಶೋಧನಾ ಚಟುವಟಿಕೆ, ಪ್ರಾಯೋಗಿಕ, ಯೋಜನೆಗಳನ್ನು ಒಳಗೊಂಡಿರುತ್ತದೆ.
  • ಎಲ್ಲಾ ಮೌಲ್ಯಮಾಪನಗಳಿಗೆ ವಿದ್ಯಾರ್ಥಿಗಳ ವಿವರವನ್ನು ರಚಿಸುವುದಕ್ಕಾಗಿ ಡಿಜಿಟಲ್ ರೂಪದಲ್ಲಿ ಶಾಲೆಗಳು ಸಾಕ್ಷ್ಯಗಳನ್ನು ಉಳಿಸಿಕೊಳ್ಳುತ್ತವೆ.
  • ಸಿಬಿಎಸ್‌ಇ ಐಟಿ ವೇದಿಕೆಯಲ್ಲಿ ಆಂತರಿಕ ಮೌಲ್ಯಮಾಪನದ ಅಂಕಗಳನ್ನು ಅಪ್‌ಲೋಡ್ ಮಾಡಲು ಶಾಲೆಗಳಿಗೆ ಅನುಕೂಲವಾಗಲಿದೆ.
English summary
CBSE Splits the Syllabus In 50-50 Style: New Scheme For 2021-22 Academic Year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X