ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking News: ಸಿಬಿಎಸ್‌ಇ 10, 12 ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

|
Google Oneindia Kannada News

ನವದೆಹಲಿ, ಅಕ್ಟೋಬರ್‌ 18: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್‌ನ (ಸಿಬಿಎಸ್‌ಇ) ತನ್ನ 10, 12 ನೇ ತರಗತಿಯ ಟರ್ಮ್ -1 ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟ ಮಾಡಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್‌ನ 10, 12 ನೇ ತರಗತಿಯ ಟರ್ಮ್ -1 ಪರೀಕ್ಷೆಯು ನವೆಂಬರ್‌- ಡಿಸೆಂಬರ್‌ ತಿಂಗಳಿನಲ್ಲಿ ನಡೆಯಲಿದೆ.

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಬಹುನಿರೀಕ್ಷಿತ 10 ನೇ ತರಗತಿ ಮತ್ತು 12 ನೇ ತರಗತಿಯ ಡೇಟ್‌ಶೀಟ್ ಬಿಡುಗಡೆ ಆಗಲಿದ್ದ ಹಿನ್ನೆಲೆ ಹಲವಾರು ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದರು. ಇದೀಗ ಅಧಿಕೃತ ವೇಳಾಪಟ್ಟಿಯು ಬಿಡುಗಡೆ ಆಗಿದೆ.

CBSE releases the term 1 board exam date sheet for Class 10 and Class 12 students

ಇದೇ ಮೊದಲ ಬಾರಿಗೆ ಸಿಬಿಎಸ್‌ಇ 10 ನೇ ತರಗತಿ ಮತ್ತು 12 ನೇ ತರಗತಿಯ ಪರೀಕ್ಷೆಯು ವರ್ಷದಲ್ಲಿ ಎರಡು ಬಾರಿ ನಡೆಯಲಿದೆ. 10 ನೇ ತರಗತಿ ಮತ್ತು 12 ನೇ ತರಗತಿಯ ಟರ್ಮ್ -1 ಪರೀಕ್ಷೆಯಲ್ಲಿ, 50 ಶೇಕಡಾ ಪಠ್ಯಕ್ರಮದಿಂದ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ವಿದ್ಯಾರ್ಥಿಗಳು ಈ ಡೇಟ್‌ಶೀಟ್‌ ಅನ್ನು ವೆಬ್‌ಸೈಟ್‌ cbse.nic.in ಮೂಲಕ ಡೌನ್‌ಲೋಡ್‌ ಮಾಡಬಹುದಾಗಿದೆ.

ಇನ್ನು ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ವೇಳಾಪಟ್ಟಿ ಹರಿದಾಡುತ್ತಿದೆ. ಈ ಬಗ್ಗೆ ಈಗಾಗಲೇ ಸಿಬಿಎಸ್‌ಇ ಸ್ಪಷ್ಟನೆ ನೀಡಿದೆ. "ಮುಂಬರುವ ನವೆಂಬರ್‌ನಲ್ಲಿ ಹತ್ತು ಹಾಗೂ ಹನ್ನೆರಡನೇ ತರಗತಿ ವಿದ್ಯಾರ್ಥಿಗಳಿಗೆ ನಡೆಯಲಿರುವ ಟರ್ಮ್ ಒಂದರ ಪರೀಕ್ಷೆಯ ನಕಲಿ ಡೇಟ್‌ಶೀಟ್‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಬೋರ್ಡ್ ಯಾವುದೇ ಡೇಟ್‌ಶೀಟ್‌ ಅನ್ನು ಬಿಡುಗಡೆ ಮಾಡಿಲ್ಲ ಎಂದು ನಾವು ಈ ಮೂಲಕ ನಿಮಗೆ ಸ್ಪಷ್ಟನೆ ನೀಡಲು ಬಯಸುತ್ತೇವೆ," ಎಂದು ತಿಳಿಸಿದೆ.

ಸಿಬಿಎಸ್‌ಇ 10 ನೇ ತರಗತಿಯ ವೇಳಾಪಟ್ಟಿ ಈ ಕೆಳಗಿದೆ:

30 ನವೆಂಬರ್‌ - ಸಮಾಜ ವಿಜ್ಞಾನ (11:30-1:00)
2 ಡಿಸೆಂಬರ್‌ - ವಿಜ್ಞಾನ (11:30-1:00)
3 ಡಿಸೆಂಬರ್‌ - ಹೋಮ್‌ ಸೈನ್ಸ್ (11:30-1:00)
4 ಡಿಸೆಂಬರ್‌ - ಗಣಿತ (11:30-1:00)
8 ಡಿಸೆಂಬರ್‌ - ಕಂಪ್ಯೂಟರ್‌ ಅಪ್ಲಿಕೇಷನ್‌ (11:30-1:00)
9 ಡಿಸೆಂಬರ್‌ - ಹಿಂದಿ ಕೋರ್ಸ್‌ ಎ, ಕೋರ್ಸ್‌ ‌ಬಿ (11:30-1:00)
11 ಡಿಸೆಂಬರ್‌ - ಇಂಗ್ಲೀಷ್‌ ಭಾಷೆ, ಸಾಹಿತ್ಯ (11:30-1:00)

ಸಿಬಿಎಸ್‌ಇ 12 ನೇ ತರಗತಿಯ ಪರೀಕ್ಷಾ ವೇಳಾಪಟ್ಟಿ:

1 ಡಿಸೆಂಬರ್‌ - ಸಮಾಜಶಾಸ್ತ್ರ (11:30-1:00)
3 ಡಿಸೆಂಬರ್‌ - ಇಂಗ್ಲೀಷ್‌ (11:30-1:00)
6 ಡಿಸೆಂಬರ್‌ - ಗಣಿತ (11:30-1:00)
7 ಡಿಸೆಂಬರ್‌ - ದೈಹಿಕ ಶಿಕ್ಷಣ (11:30-1:00)
8 ಡಿಸೆಂಬರ್‌ - ಬಿಜಿನೆಸ್‌ ಸ್ಟಡೀಸ್‌ (11:30-1:00)
9 ಡಿಸೆಂಬರ್‌ - ಭೂಗೋಳಶಾಸ್ತ್ರ (11:30-1:00)
10 ಡಿಸೆಂಬರ್‌ - ಭೌತಶಾಸ್ತ್ರ (11:30-1:00)
11 ಡಿಸೆಂಬರ್‌ - ಮನೋವಿಜ್ಞಾನ (11:30-1:00)
13 ಡಿಸೆಂಬರ್‌ - ಅಕೌಂಟೆನ್ಸಿ (11:30-1:00)
14 ಡಿಸೆಂಬರ್‌ - ರಸಾಯನಶಾಸ್ತ್ರ (11:30-1:00)
15 ಡಿಸೆಂಬರ್ - ಅರ್ಥಶಾಸ್ತ್ರ (11:30-1:00)
16 ಡಿಸೆಂಬರ್ - ಹಿಂದಿ ಎಲೆಕ್ಟಿವ್‌, ಹಿಂದಿ ಕೋರ್‌ (11:30-1:00)
17 ಡಿಸೆಂಬರ್ - ರಾಜಕೀಯ ವಿಜ್ಞಾನ (11:30-1:00)
18 ಡಿಸೆಂಬರ್ - ಜೀವಶಾಸ್ತ್ರ (11:30-1:00)
21 ಡಿಸೆಂಬರ್ - ಇನ್ಫಾರ್ಮೆಟಿಕ್ಸ್ ಪ್ರಾಕ್ಟಿಕಲ್, ಕಂಪ್ಯೂಟರ್ ಸೈನ್ಸ್ (11:30-1:00)
22 ಡಿಸೆಂಬರ್ - ಹೋಮ್‌ ಸೈನ್ಸ್ (11:30-1:00)

(ಒನ್‌ಇಂಡಿಯಾ ಸುದ್ದಿ)

English summary
CBSE releases the term 1 board exam date sheet for Class 10 and Class 12 students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X