ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

CBSE 10ನೇ ತರಗತಿ ಪ್ರಶ್ನೆ ಪತ್ರಿಕೆಯಲ್ಲಿ ಲಿಂಗ ಅಸಮಾನತೆ: ತೀವ್ರ ವಿರೋಧ

|
Google Oneindia Kannada News

ಸಿಬಿಎಸ್‌ಇಯ ಹತ್ತನೇ ತರಗತಿ ಪ್ರಶ್ನೆ ಪತ್ರಿಕೆಯಲ್ಲಿ ಲಿಂಗ ಅಸಮಾನತೆ ಕುರಿತು ಸಾಕಷ್ಟು ವಿಚಾರಗಳು ಸೇರಿರುವ ಬಗ್ಗೆ ವಿರೋಧಗಳು ವ್ಯಕ್ತವಾಗಿವೆ.

ದೇಶಾದ್ಯಂತ ಪ್ರಶ್ನೆ ಪತ್ರಿಕೆ ಬಗ್ಗೆ ಆಕ್ಷೇಪಗಳು ಬಂದ ಬೆನ್ನಲ್ಲೇ ವಿಷಯತಜ್ಞರಿಂದ ಪ್ರಶ್ನೆ ಪತ್ರಿಕೆಯನ್ನು ಮರು ಪರಿಶೀಲನೆ ಮಾಡುವಂತೆ ಸಿಬಿಎಸ್‌ಇ ಆದೇಶಿಸಿದೆ. ಮಹಿಳೆಯರನ್ನು ಬಂಧಮುಕ್ತವಾಗಿರಿಸಿರುವುದು ಮಕ್ಕಳ ಮೇಲಿನ ಪಾಲಕರ ಹಿಡಿತವನ್ನು ಕಡಿಮೆ ಮಾಡಿದೆ.

ಶನಿವಾರ ನಡೆದ 10ನೇ ತರಗತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಪತ್ನಿ ಪತಿಯ ಮಾರ್ಗವನ್ನು ಅನುಸರಿಸಿದರೆ ಮಾತ್ರ ಮಕ್ಕಳಿಂದ ವಿಧೇಯತೆ ಗಳಿಸಲು ಸಾಧ್ಯ ಎಂದು ಹೇಳಲಾಗಿದೆ.

CBSE Exam Paper Under Fire For Gender Stereotyping, Experts To Intervene

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡ ಟ್ವಿಟ್ಟರ್‌ನಲ್ಲಿ ಪ್ರಶ್ನೆಪತ್ರಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಂಬಲಾಗುತ್ತಿಲ್ಲ, ನಾವು ನಿಜವಾಗಿಯೂ ಮಕ್ಕಳಿಗೆ ಇಂಥದ್ದನ್ನು ಕಲಿಸುತ್ತಿದ್ದೇವೆಯೇ?, ಬಿಜೆಪಿಯು ಮಹಿಳೆಯರ ಬಗ್ಗೆ ಹೊಂದಿರುವ ದೃಷ್ಟಿಕೋನ ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಇಲ್ಲವಾದರೆ ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಇಂತಹ ವಿಷಯಗಳನ್ನೇಕೆ ಸೇರಿಸುತ್ತಾರೆ ಎಂದು ದೂರಿದ್ದಾರೆ.

ತಮಿಳುನಾಡು ಕಾಂಗ್ರೆಸ್ ಸಮಿತಿಯ ವಕ್ತಾರರಾದ ಲಕ್ಷ್ಮೀ ರಾಮಚಂದ್ರನ್ ಮಾತನಾಡಿ, ಇಂದು 10ನೇ ತರಗತಿ ಪ್ರಶ್ನೆ ಪತ್ರಿಕೆಯಲ್ಲಿ ಈ ಅತಿರೇಕದ ಸಂಗತಿಗಳು ಕಾಣಿಸಿಕೊಂಡಿದೆ. ನಾವು ನಮ್ಮ ಮಕ್ಕಳಿಗೆ ಏನು ಕಲಿಸುತ್ತಿದ್ದೇವೆ. ಸಿಬಿಎಸ್‌ಇಯು ಈ ಕುರಿತು ವಿವರಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ನಡೆದ ಸಿಬಿಎಸ್‌ಇ 12ನೇ ತರಗತಿ ಸಮಾಜಶಾಸ್ತ್ರ ಪತ್ರಿಕೆಯಲ್ಲಿ 2002ರಲ್ಲಿ ಗುಜರಾತ್‌ನಲ್ಲಿ ಯಾವ ಪಕ್ಷವಿರುವಾಗ ಮುಸ್ಲಿಂ ವಿರೋಧಿ ಹಿಂಸಾಚಾರ ನಡೆಯಿತು ಎಂದು ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆಯು ಸೂಕ್ತವಾದುದ್ದಲ್ಲ ಎಂದು ಹೇಳಲಾಗಿದೆ.

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ 2021-22 ನೇ ತರಗತಿಗೆ 9 ಮತ್ತು 10ನೇ ತರಗತಿಗಳಿಗೆ ವಿದ್ಯಾರ್ಥಿಗಳ ನೋಂದಣಿ ಡಿಸೆಂಬರ್ 15 ರಿಂದ ಪ್ರಾರಂಭವಾಗುತ್ತದೆ ಎಂದು ಅಧಿಕೃತ ಮಾಹಿತಿ ನೀಡಿದೆ.

ಸಿಬಿಎಸ್‌ಇ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಲಿಂಕ್ ಲಭ್ಯವಾಗಲಿದೆ ಮಾತ್ರವಲ್ಲ ಅಂಗಸಂಸ್ಥೆ ( ಶಾಲೆಗಳು ತಮ್ಮ ವಿದ್ಯಾರ್ಥಿಗಳನ್ನು ಒಂಬತ್ತನೇ ಮತ್ತು ಹತ್ತನೇ ತರಗತಿಗಳಿಗೆ ಆನ್‌ಲೈನ್‌ನಲ್ಲಿ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವ ಮುನ್ನ ತಾವು ನೋಂದಣಿ ಮಾಡಿಕೊಳ್ಳಬೇಕು ಎಂದು ಮಂಡಳಿ ತಿಳಿಸಿದೆ.

ಆನ್​ಲೈನ್​ ನೋಂದಣಿ ಪ್ರಕ್ರಿಯೆ ಮೂಲಕ ಹೆಸರು ಸಲ್ಲಿಸಿದ 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ 2022-23 ನೇ ಸಾಲಿನ ಬೋರ್ಡ್​ ಪರೀಕ್ಷೆಯಲ್ಲಿ ಹಾಜರಾಗಲು ಅನುಮತಿಸಲಾಗುವುದು ಎಂದು CBSE ಸ್ಪಷ್ಟಪಡಿಸಿದೆ.

ಆನ್‌ಲೈನ್ ಸಲ್ಲಿಕೆಗೆ ಮುಂದುವರಿಯುವ ಮೊದಲು ಸಂಯೋಜಿತ ಶಾಲೆಗಳು ತಮ್ಮನ್ನು ನೋಂದಾಯಿಸಿಕೊಳ್ಳಬೇಕು ಎಂದು CBSE ಹೇಳಿದೆ. ಶಾಲೆಗಳು ಸಂಬಂಧಿತ ಸಂಖ್ಯೆಯನ್ನು ಬಳಕೆದಾರರ ಐಡಿ ಎಂದು ಬಳಕೆ ಮಾಡಬೇಕು ಎಂದು ಮಂಡಳಿ ಇದೇ ವೇಳೆ ತಿಳಿಸಿದೆ. ಹೊಸದಾಗಿ ಸಂಯೋಜಿತವಾಗಿರುವ ಶಾಲೆಗಳು ಪಾಸ್‌ವರ್ಡ್ ಸ್ವೀಕರಿಸದಿದ್ದಲ್ಲಿ ಶಾಲೆಯ ಕೋಡ್ ಮತ್ತು ಪಾಸ್‌ವರ್ಡ್ ಪಡೆಯಲು ಸಂಬಂಧಿಸಿದ ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

'ಹೊಸ ಶಾಲೆಗಳು ಮೊದಲು ಒಎಐಎಸ್​ಐಎಸ್​ (OASIS) ಪೋರ್ಟಲ್​ನಲ್ಲಿ ತಮ್ಮ ಮಾಹಿತಿಯನ್ನು ಮೊದಲು ನಮೂದಿಸಬೇಕು. ಒಎಐಎಸ್​ಐಎಸ್​ ಮಾಹಿತಿಯನ್ನು ಅತ್ಯಂತ ಜಾಗರೂಕತೆಯಿಂದ ತುಂಬಬೇಕು. ಒಮ್ಮೆ ಅಧಿಕೃತಗೊಂಡ ಮಾಹಿತಿಯನ್ನು ಮತ್ತೆ ಬದಲಾಯಿಸಲು ಸಾಧ್ಯವೇ ಇಲ್ಲ ಎಂದು ಸಿಬಿಎಸ್​ಇ ಸ್ಪಷ್ಟವಾಗಿ ಹೇಳಿದೆ.

ಈ ವರ್ಷದಿಂದ ತಿದ್ದುಪಡಿಗೆ ಯಾವುದೇ ವಿಂಡೋ ಲಭ್ಯವಾಗದ ಕಾರಣ ಸರಿಯಾದ ಡೇಟಾವನ್ನು ಅಪ್‌ಲೋಡ್ ಮಾಡಲು ಮಂಡಳಿಯು ಶಾಲೆಗಳಿಗೆ ಸಲಹೆ ನೀಡಿದೆ. ಅಪ್ಲಿಕೇಶನ್ ಪ್ರಕ್ರಿಯೆಯ ವಿವರವಾದ ಮಾರ್ಗಸೂಚಿಗಳು CBSE ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಡಿ. 2 ರಿಂದ ಸಿಬಿಎಸ್‌ಸಿ ಎಕ್ಸಾಮಿನೇಷನ್ 2022ಗೆ ನೋಂದಣಿ ಆರಂಭ: ಸಿಬಿಎಸ್‌ಸಿ ಎಕ್ಸಾಮಿನೇಷನ್ 2022ಗಾಗಿ () ಪ್ರಮುಖ ಮಾಹಿತಿಯನ್ನು ಬಿಡುಗಡೆ ಮಾಡಿದೆ ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಗೆ ಹಾಜರಾಗುವ ಖಾಸಗಿ ಅಭ್ಯರ್ಥಿಗಳು ಗುರುವಾರದಿಂದ ಅಂದರೆ ಡಿಸೆಂಬರ್ 2 ರಿಂದ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಸೂಚಿಸಿದೆ. ಈ ವಿದ್ಯಾರ್ಥಿಗಳಿಗೆ ಸಿಬಿಎಸ್‌ಇ ಪರೀಕ್ಷೆ ನಡೆಸಲಿದೆ.

CBSE ಯ ಸೂಚನೆಗಳ ಪ್ರಕಾರ, 2021 ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮತ್ತು ಉತ್ತೀರ್ಣರಾದ ವಿದ್ಯಾರ್ಥಿಗಳು ಸಹ ಪರೀಕ್ಷೆಗೆ ಹಾಜರಾಗಬಹುದು. ಒಂದು ಅಥವಾ ಅದಕ್ಕಿಂತ ಹೆಚ್ಚಿನ ವಿಷಯಗಳಲ್ಲಿ ತಮ್ಮ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳು ಕೂಡ ಇದರಲ್ಲಿ ನೋಂದಾವಣೆ ಮಾಡಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಟರ್ಮ್ 2 ಪಠ್ಯಕ್ರಮದ ಆಧಾರದ ಮೇಲೆ ಮಾತ್ರ ನಡೆಸಲಾಗುವುದು ಎಂದು CBSE ಸ್ಪಷ್ಟಪಡಿಸಿದೆ.

Recommended Video

Virat Kohli ಜೊತೆ BCCI ನಡೆದುಕೊಂಡ ರೀತಿಗೆ ಮರುಗಿದ ಪಾಕಿಸ್ತಾನ ಆಟಗಾರರು | Oneindia Kannada

English summary
A comprehension passage in the CBSE class 10 English question paper has sparked a controversy for allegedly promoting "gender stereotyping" and supporting "regressive notions" prompting the board to refer the matter to subject experts on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X