ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಟ್ ಪರೀಕ್ಷೆ ಫಲಿತಾಂಶ ಪ್ರಕಟಿಸಿದ ಸಿಬಿಎಸ್ಇ

By Mahesh
|
Google Oneindia Kannada News

ಬೆಂಗಳೂರು, ಜೂನ್ 04: ಖಾಸಗಿ ಹಾಗೂ ಸರ್ಕಾರಿ ಮೆಡಿಕಲ್ ಕಾಲೇಜುಗಳಿಗೆ ಪ್ರವೇಶ ಬಯಸಿ, ನ್ಯಾಷನಲ್ ಎಲಿಜಿಬಿಲಿಟಿ -ಕಮ್ ಎಂಟ್ರನ್ಸ್ ಟೆಸ್ಟ್(NEET) ತೆಗೆದುಕೊಂಡಿದ್ದ ವಿದ್ಯಾರ್ಥಿಗಳ ಕಾತುರ ಕೊನೆಗೊಂಡಿದೆ. ಸೋಮವಾರ(ಜೂನ್ 03)ದಂದು ನೀಟ್ ಪರೀಕ್ಷೆ ಫಲಿತಾಂಶವನ್ನು ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜುಕೇಷನ್ (ಸಿಬಿಎಸ್ ಇ) ಪ್ರಕಟಿಸಿದೆ.

ಅಖಿಲ ಭಾರತಕ್ಕೆ ಕಲ್ಪನಾ ಕುಮಾರಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. 720ಕ್ಕೆ 691 ಅಂಕ ಗಳಿಸಿದ್ದಾರೆ. ಭೌತಶಾಸ್ತ್ರದಲ್ಲಿ 180ಕ್ಕೆ 171, ರಸಾಯನಶಾಸ್ತ್ರದಲ್ಲಿ 180ಕ್ಕೆ 160, ಜೀವಶಾಸ್ತ್ರ(ಸಸ್ಯಶಾಸ್ತ್ರ + ಪ್ರಾಣಿಶಾಸ್ತ್ರ)ದಲ್ಲಿ 360ಕ್ಕೆ 360 ಅಂಕ ಗಳಿಸಿದ್ದಾರೆ.

CBSE declares NEET 2018 results, check online for rank list

ಸಾಮಾನ್ಯವರ್ಗಕ್ಕೆ 50, ಒಬಿಸಿ, ಎಸ್ ಸಿ ಹಾಗೂ ಎಸ್ಟಿ ಅಭ್ಯರ್ಥಿಗಳಿಗೆ 40 ಕಟ್ ಅಫ್ ಪರ್ಸಂಟೈಲ್ ಇಡಲಾಗಿದೆ. ಇದೇ ಅಂಕಗಳ ಎಣಿಕೆಯಂತೆ ಕಟ್ ಆಫ್ ಸ್ಕೋರ್ ಗಳು ಸಾಮಾನ್ಯ ವರ್ಗಕ್ಕೆ 691-119, ಒಬಿಸಿಗೆ 118-96 ಇಡಲಾಗಿದೆ.

ಒಟ್ಟಾರೆ, 6,34,897 ಸಾಮಾನ್ಯವರ್ಗದ ಅಭ್ಯರ್ಥಿಗಳು ಕಟ್ ಆಫ್ ಮಾರ್ಕ್ ಗಿಂತ ಮೇಲಿದ್ದಾರೆ. ಒಬಿಸಿ 54 653, ಎಸ್ ಸಿ 17209 ಹಾಗೂ ಎಸ್ಟಿ 7446 ಅಭ್ಯರ್ಥಿಗಳು ಕ್ರಮವಾಗಿ ಅರ್ಹತೆ ಪಡೆದುಕೊಂಡಿದ್ದಾರೆ.

ಕಳೆದ ಮೇ 6ರಂದು ರಾಷ್ಟ್ರೀಯ ಮಟ್ಟದಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪರೀಕ್ಷೆಯನ್ನು ಕೇಂದ್ರ ಪ್ರೌಢಶಿಕ್ಷಣ ಮಂಡಳಿ ನಡೆಸಿತ್ತು.

ಮೇ 25ರಂದು ಪರೀಕ್ಷೆಯ ಕೀ ಅನ್ಸರ್​ನ್ನು ಮಂಡಳಿ ಬಿಡುಗಡೆ ಮಾಡಿತ್ತು. ರಸಾಯನ ಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರ ಕುರಿತು ಪರೀಕ್ಷೆ ನಡೆದಿತ್ತು. ಒಟ್ಟಾರೆ 13 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.
ಪರೀಕ್ಷೆ ಫಲಿತಾಂಶವನ್ನು
cbseresults.nic.in and cbseneet.nic.in
www.mcc.nic.in and www.mohfw.nic.in. ಗಳಲ್ಲಿ ನೋಡಬಹುದು

ಆಯ್ಕೆ ಪ್ರಕ್ರಿಯೆ: ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದಿಂದ ಶೇ. 15ರಷ್ಟು ಸೀಟುಗಳಿಗೆ ಕೌನ್ಸಲಿಂಗ್ ಪ್ರಕ್ರಿಯೆ ನಡೆಯಲಿದೆ. ಇನ್ನುಳಿದ 85 ಶೇಕಡಾ ಸೀಟುಗಳಿಗೆ ಆಯಾ ರಾಜ್ಯದ ಸಂಸ್ಥೆಗಳು ಪ್ರತ್ಯೇಕವಾಗಿ ಕೌನ್ಸಲಿಂಗ್ ನಡೆಲಿವೆ.

English summary
The results of the National Eligibility-cum-Entrance Test (NEET) for admission to medical programmes such as MBBS, BDS in private and government medical colleges, except the AIIMS and JIPMER, Puducherry, were declared by the Central Board of Secondary Education (CBSE) on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X