ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಎಸ್ಇ ಪರೀಕ್ಷೆ ಫಲಿತಾಂಶ ಪ್ರಕಟ, ಹುಡುಗಿಯರೇ ಮೇಲುಗೈ

|
Google Oneindia Kannada News

ನವದೆಹಲಿ, ಮೇ 02: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್ ಇ) ಗುರುವಾರದಂದು ತನ್ನ ಅಧಿಕೃತ ವೆಬ್ ತಾಣದಲ್ಲಿ ಸಿಬಿಎಸ್ಇ ಕ್ಲಾಸ್ 12 ಫಲಿತಾಂಶವನ್ನು ಪ್ರಕಟಿಸಿದೆ.

ಲೋಕಸಭಾ ಚುನಾವಣೆ ವಿಶೇಷ ಪುಟ

2018-19 ಶೈಕ್ಷಣಿಕ ವರ್ಷಕ್ಕೆ 2019ರ ಫೆಬ್ರವರಿ -ಮಾರ್ಚ್ ತಿಂಗಳಿನಲ್ಲಿ ಸಿಬಿಎಸ್ಇ ಕ್ಲಾಸ್ 10 ಹಾಗೂ ಕ್ಲಾಸ್ 12 ಪರೀಕ್ಷೆ ನಡೆಸಲಾಗಿತ್ತು. ಸರಿ ಸುಮಾರು 12.87 ಲಕ್ಷ ವಿದ್ಯಾರ್ಥಿಗಳು ಕ್ಲಾಸ್ 10 ಹಾಗೂ ಕ್ಲಾಸ್ 12 ಪರೀಕ್ಷೆ ಬರೆದಿದ್ದರು. ಈ ಪೈಕಿ 28 ಲೈಂಗಿಕ ಅಲ್ಪಸಂಖ್ಯಾತರಿದ್ದರು. 4,974 ಪರೀಕ್ಷಾ ಕೇಂದ್ರಗಳಲ್ಲಿ ಹಾಗೂ 78 ವಿದೇಶಿ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದಾರೆ.

ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಕ್ವಶ್ಚನ್ ಬ್ಯಾಂಕ್ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಕ್ವಶ್ಚನ್ ಬ್ಯಾಂಕ್

ಸಿಬಿಎಸ್ಇ ಕ್ಲಾಸ್ ಕಲೆ, ವಿಜ್ಞಾನ ಹಾಗೂ ಕಾಮರ್ಸ್ ವಿಷಯದ ಫಲಿತಾಂಶವನ್ನು ಸಿಬಿಎಸ್ಇ ವೆಬ್ ತಾಣ(cbse.nic.in) ದಲ್ಲಿ ನೋಡಬಹುದು.

CBSE Class XII results 2019 announced

ಆನ್ ಲೈನ್ ನಲ್ಲಿ ಫಲಿತಾಂಶ ನೊಡುವುದು ಹೇಗೆ?
* ಸಿಬಿಎಸ್ಇ ಫಲಿತಾಂಶ -ವೆಬ್ ಸೈಟ್ cbseresults.nic.in
* Senior School Certificate Examination ( Class XII ) 2019 - Announced on 2nd May 2019 ಎಂಬುದರ ಮೇಲೆ ಕ್ಲಿಕ್ ಮಾಡಿ
* ಫಲಿತಾಂಶದ ಪುಟದಲ್ಲಿ ನಿಮ್ಮ ನೋಂದಣಿ ಸಂಖ್ಯೆ ಹಾಕಿ, ಕ್ಲಿಕ್ ಮಾಡಿ ನಂತರ ಫಲಿತಾಂಶವನ್ನು ಮುದ್ರಿಸಿಕೊಳ್ಳಿ

ಒಟ್ಟಾರೆ, 13 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಶೇ 83.4ರಷ್ಟು ಮಂದಿ ಪಾಸಾಗಿದ್ದಾರೆ.2018ರಲ್ಲಿ ಒಟ್ಟಾರೆ, ಕ್ಲಾಸ್ 12ರಲ್ಲಿ ಪಾಸಾದವರು 83%ರಷ್ಟಿತ್ತು. ಹುಡುಗರು ಶೇ 79.4ರಷ್ಟು ಫಲಿತಾಂಶ ತಂದಿದ್ದರೆ, ಹುಡುಗಿಯರು 89.70ರಷ್ಟು ಫಲಿತಾಂಶ ನೀಡಿದ್ದಾರೆ. ತೃತೀಯ ಲಿಂಗಿಗಳು 83.3% ಫಲಿತಾಂಶ ಕೊಟ್ಟಿದ್ದಾರೆ.

ತಿರುವನಂತಪುರಂ ಕ್ಷೇತ್ರ 98.2% ನೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಚೆನ್ನೈ 92.23%, ದೆಹಲಿಯಲ್ಲಿ ಪಾಸಾದವರು 91.87%.

English summary
The Central Board for Secondary Education (CBSE) on Thursday released the CBSE Board Class 12 results on the board's official website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X