ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಎಸ್ಇ ಫಲಿತಾಂಶ ಪ್ರಕಟ: ನೋಯ್ಡಾ ವಿದ್ಯಾರ್ಥಿನಿ ದೇಶಕ್ಕೆ ಪ್ರಥಮ

By Sachhidananda Acharya
|
Google Oneindia Kannada News

ನವದೆಹಲಿ, ಮೇ 28: ಸಿಬಿಎಸ್ಇ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಸರಾಸರಿ ಶೇಕಡಾ 82 ಫಲಿತಾಂಶ ದಾಖಲಾಗಿದೆ. ಕಳೆದ ವರ್ಷ ಶೇ. 83 ಫಲಿತಾಂಶ ದಾಖಲಾಗಿತ್ತು. ಇದಕ್ಕೆ ಹೋಲಿಸಿದಲ್ಲಿ ಈ ಬಾರಿ ಫಲಿತಾಂಶದಲ್ಲಿ ಅಲ್ಪ ಕುಸಿತವಾಗಿದೆ.

ನೋಯ್ಡಾದ ಮೂಲದ ಅಮಿಟಿ ಇಂಟರ್ನ್ಯಾಷನಲ್ ಸ್ಕೂಲ್ ನ ವಿದ್ಯಾರ್ಥಿನಿ ರಕ್ಷಾ ಗೋಪಾಲ್ ಶೇಕಡಾ 99.6 ಅಂಕಗಳನ್ನು ಪಡೆದು ದೇಶಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಶೇ. 99.4 ಅಂಕಗಳೊಂದಿದೆ ಭೂಮಿ ಸಾವಂತ್ ಎರಡನೇ ಸ್ಥಾನ ಹಾಗೂ ಶೇಕಡಾ 99.2 ಅಂಕಗಳೊಂದಿದೆ ಆದಿತ್ಯ ಜೈನ್ ಮತ್ತು ಮನ್ನತ್ ಲೂತ್ರ ಮೂರನೇ ರ್ಯಾಂಕ್ ಪಡೆದಿದ್ದಾರೆ. ಮೂರೂ ಜನ ಚಂಡೀಗಢದವರಾಗಿದ್ದಾರೆ.[ಇಂದು CBSE ಕ್ಲಾಸ್ 12 ರಿಸಲ್ಟ್, ಫಲಿತಾಂಶ ಪಡೆಯಲು ಹೀಗೆ ಮಾಡಿ]

 CBSE Class 12 results declared, All India pass percentage dipped to 82 %

ಪ್ರಥಮ ಮೂರು ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಕರೆ ಮಾಡಿ ಧನ್ಯವಾದ ಹೇಳಿದ್ದಾರೆ.

ಇನ್ನು ಈ ಬಾರಿ ಶೇಕಡಾ 95-100 ಫಲಿತಾಂಶ ಪಡೆದ ವಿದ್ಯಾರ್ಥಿಗಳ ಸಂಖ್ಯೆ , 10,091ಕ್ಕೆ ಏರಿಕೆಯಾಗಿದೆ. ಕಳೆದ ಬಾರಿ 9,351 ವಿದ್ಯಾರ್ಥಿಗಳು ಇಷ್ಟು ಪ್ರಮಾಣದ ಫಲಿತಾಂಶ ಪಡೆದಿದ್ದರು.

ದೇಶದಾದ್ಯಂತ ಈ ಬಾರಿ ಒಟ್ಟು 10,98,891 ವಿದ್ಯಾರ್ಥಿಗಳು ಸಿಬಿಎಸ್ಇ ಕ್ಲಾಸ್ 12 ಪರೀಕ್ಷೆ ಎದುರಿಸಿದ್ದರು. ಇದರಲ್ಲಿ 6,38,865 ಬಾಲಕರಾದರೆ, 4,60,026 ಬಾಲಕಿಯರಾಗಿದ್ದಾರೆ.

English summary
CBSE Class 12 results declared. All India pass percentage dipped to 82 percent as compared to 83 percent of last year. Raksha Gopal of Amity International School Noida tops with 99.6% marks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X