ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಹಾಳನ್ನು ಸೀರೆಯಲ್ಲಿ ನೋಡ್ಬೇಕು, ಫೇರ್‌ವೆಲ್‌ಗೆ ಅವಕಾಶ ಕೊಡಿ, ಪ್ರಧಾನಿಗೆ ಹೀಗೊಂದು ಮನವಿ

|
Google Oneindia Kannada News

ನವದೆಹಲಿ, ಜೂನ್ 02: ದೇಶದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ಹೆಚ್ಚಿರುವ ಕಾರಣ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿದೆ.

Recommended Video

ನಾನು ನೆಹಾಳನ್ನ ಸೀರೆಯಲ್ಲಿ ನೋಡ್ಬೇಕು ಪ್ಲೀಸ್ ಪರ್ಮಿಷನ್ ಕೊಡಿ Modi ji | Oneindia Kannada

ಆದರೆ ವಿಶೇಷವೇನೆಂದರೆ ವಿದ್ಯಾರ್ಥಿಯೊಬ್ಬ ಪ್ರಧಾನಿ ಮೋದಿ ಬಳಿ ವಿಶೇಷ ಮನವಿ ಮಾಡಿದ್ದಾನೆ, 'ಸರ್ ದಯಮಾಡಿ ಫೇರ್ ವೆಲ್ ಕಾರ್ಯಕ್ರಮಕ್ಕೆ ಅನುಮತಿ ಕೊಡಿ ಏಕೆಂದರೆ ನಾನು 12ನೇ ತರಗತಿಯ ನೇಹಾಳನ್ನು ಸೀರೆಯಲ್ಲಿ ನೋಡಲು ಬಯಸುತ್ತೇನೆ' ಎಂದು ವಿದ್ಯಾರ್ಥಿಯೊಬ್ಬ ಮಾಡಿರುವ ಕಮೆಂಟ್ ಇದೀಗ ವೈರಲ್ ಆಗಿದೆ.

ಮೋದಿಗೆ ವಿದ್ಯಾರ್ಥಿಗಳ ಆರೋಗ್ಯ ಮುಖ್ಯ: ಸಿಬಿಎಸ್‌ಇ ಪಿಯುಸಿ ಪರೀಕ್ಷೆ ರದ್ದುಮೋದಿಗೆ ವಿದ್ಯಾರ್ಥಿಗಳ ಆರೋಗ್ಯ ಮುಖ್ಯ: ಸಿಬಿಎಸ್‌ಇ ಪಿಯುಸಿ ಪರೀಕ್ಷೆ ರದ್ದು

ಈ ನಡುವೆ ನೇಹಾ ಮತ್ತು ಟ್ವಿಟರ್ ಬಳಕೆದಾರನ ನಡುವಿನ ವಾಟ್ಸಾಪ್ ಸಂಭಾಷಣೆಯಂತೆ ಕಾಣುವ ಸ್ಕ್ರೀನ್‌ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಸಂಭಾಷಣೆ ಹೇಳಿದಂತೆ 'ನೀನು ನನ್ನನ್ನು ಸೀರೆಯಲ್ಲಿ ನೋಡಲು ಬಯಸಿದರೆ ನೀನು ನನಗೆ ಹೇಳಬೇಕಿತ್ತು. ಈಗ ಎಲ್ಲರೂ ನನಗೆ ಸಂದೇಶ ಕಳುಹಿಸುತ್ತಿದ್ದಾರೆ' ಎಂದು ನೇಹಾ ಹೇಳಿದ್ದಾಳೆ. ಅದಕ್ಕೆ ಕುಕಿ ಇದು ವೈರಲ್ ಆಗುತ್ತದೆ ಎಂದು ನನಗೆ ಹೇಗೆ ಗೊತ್ತಿತ್ತು? ಎಂದಿದ್ದಾನೆ.

CBSE Class 12 Exams Cancelled, Student Tweets Farewell-Day Request To PM Modi. Viral story

ಕುಕಿ ಅಗರ್ವಾಲ್ ಎಂಬ ವಿದ್ಯಾರ್ಥಿ ಈ ಕಮೆಂಟ್ ಮಾಡಿದ್ದು ಇದು 338 ರಿಟ್ವೀಟ್‌ಗಳು ಮತ್ತು 1,400 ಲೈಕ್‌ಗಳನ್ನು ಗಳಿಸಿದೆ. ನೆಟ್ಟಿಗರು ಹಾಸ್ಯದೊಂದಿಗೆ ಪ್ರತಿಕ್ರಿಯಿಸಿದ್ದಾರೆ.

ಕೋವಿಡ್ -19 ರ ಎರಡನೇ ಅಲೆಯಿಂದ ದೇಶವು ತೀವ್ರವಾಗಿ ತತ್ತರಿಸಿದೆ ಮತ್ತು ಸಾಂಕ್ರಾಮಿಕ ರೋಗದಿಂದ ಉಂಟಾಗುವ ಅನಿಶ್ಚಿತತೆಯನ್ನು ಗಮನದಲ್ಲಿಟ್ಟುಕೊಂಡು ಬೋರ್ಡ್ ಪರೀಕ್ಷೆಗಳನ್ನು ನಡೆಸದಿರಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ, ಪ್ರಧಾನಿ ನಿರ್ಧಾರವನ್ನು ಶ್ಲಾಘಿಸಿದ್ದಾರೆ.

ನಮ್ಮ ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ ಮತ್ತು ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂಬ ಕಾರಣ ನೀಡಿ ಪ್ರಧಾನಿ ಮೋದಿ 12 ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸುವ ನಿರ್ಧಾರದ ಬಗ್ಗೆ ಪ್ರಕಟಿಸಿದ್ದಾರೆ.

English summary
The Central Board of Secondary Education (CBSE) cancelled board examination for Class 12 on Tuesday (June 1). The decision was taken in a meeting chaired by Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X