ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

CBSE Class 10 result 2022 : ಕುಳಿತಲ್ಲೇ ನಿಮ್ಮ 10ನೇ ತರಗತಿ ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ?

|
Google Oneindia Kannada News

ನವದೆಹಲಿ, ಜುಲೈ 04: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) 2022ನೇ ಸಾಲಿನ 10ನೇ ತರಗತಿಯ ಫಲಿತಾಂಶವು ಜುಲೈ 4ರ ಸೋಮವಾರವೇ ಬಿಡುಗಡೆಯಾಗುವ ಸಾಧ್ಯತೆಯಿದೆ.

ಈ ಸಾಲಿನಲ್ಲಿ 10ನೇ ಪರೀಕ್ಷೆಗಳಿಗೆ ಹಾಜರಾಗಿದ್ದ 18 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ CBSE ತರಗತಿಯ ಫಲಿತಾಂಶವನ್ನು cbseresults.nic.in ವೆಬ್ ಸೈಟ್‌ನಲ್ಲಿ ಪರಿಶೀಲಿಸಬಹುದು. ಇದಲ್ಲದೆ, ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು digilocker.gov.in ಮತ್ತು DigiLocker ಮೊಬೈಲ್ ಅಪ್ಲಿಕೇಶನ್‌ನಲ್ಲಿ ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಬಹುದು.

CBSE Result: 10 ಮತ್ತು 12ನೇ ತರಗತಿ ಫಲಿತಾಂಶ ಪರಿಶೀಲಿಸುವುದು ಹೇಗೆ?CBSE Result: 10 ಮತ್ತು 12ನೇ ತರಗತಿ ಫಲಿತಾಂಶ ಪರಿಶೀಲಿಸುವುದು ಹೇಗೆ?

10ನೇ ತರಗತಿ ಫಲಿತಾಂಶದ ಬಗ್ಗೆ ಸಿಬಿಎಸ್ಇ ಯಾವುದೇ ಅಧಿಕೃತ ಸೂಚನೆಯನ್ನು ನೀಡಿಲ್ಲ. ಇದರ ಜೊತೆಗೆ ಫಲಿತಾಂಶಗಳ ಬಿಡುಗಡೆಗೆ ಯಾವುದೇ ನಿರ್ದಿಷ್ಟ ಸಮಯವನ್ನು ನೀಡಿಲ್ಲ. ಆದರೆ ಒಮ್ಮೆ ಫಲಿತಾಂಶ ಬಿಡುಗಡೆ ನಂತರ ವಿದ್ಯಾರ್ಥಿಗಳಿಗೆ cbse.gov.in ಮತ್ತು cbseresults.nic.in ನಲ್ಲಿ ಆನ್‌ಲೈನ್‌ನಲ್ಲಿ ಫಲಿತಾಂಶವು ಲಭ್ಯವಾಗಲಿದೆ.

5 ವಿಷಯದಲ್ಲಿ 33 ಅಂಕಗಳನ್ನು ಗಳಿಸಿದವರು ಉತ್ತೀರ್ಣ

5 ವಿಷಯದಲ್ಲಿ 33 ಅಂಕಗಳನ್ನು ಗಳಿಸಿದವರು ಉತ್ತೀರ್ಣ

ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. CBSE ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮಾನದಂಡ ಶೇ.33ರಷ್ಟು ಆಗಿದೆ. 10 ನೇ ತರಗತಿಗೆ ಶೇ.33ರಷ್ಟು ಒಟ್ಟಾರೆ ಅಂಕಗಳನ್ನು ಒಳಗೊಂಡಿರುತ್ತದೆ. ವಿದ್ಯಾರ್ಥಿಗಳು 5 ವಿಷಯಗಳಲ್ಲಿ ಕನಿಷ್ಠ 33% ಒಟ್ಟು ಅಂಕಗಳನ್ನು ಗಳಿಸಬೇಕು. ಉದಾಹರಣೆಗೆ, ಒಬ್ಬ ವಿದ್ಯಾರ್ಥಿಯು 6 ವಿಷಯಗಳಿಗೆ ಪರೀಕ್ಷೆ ಬರೆದಿದ್ದಾನೆ ಎಂದುಕೊಳ್ಳಿ. 6ರ ಈ ಪೈಕಿ ಒಂದು ವಿಷಯದಲ್ಲಿ ಕನಿಷ್ಠ ಅಂಕಗಳನ್ನು ಪಡೆದುಕೊಂಡಿದ್ದು, ಉಳಿದ 5 ವಿಷಯಗಳಲ್ಲಿ ಕನಿಷ್ಠ 33ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದರೆ, ಆ ವಿದ್ಯಾರ್ಥಿಯು ಉತ್ತೀರ್ಣ ಎಂದು ಪರಿಣಗಿಸಲಾಗುತ್ತದೆ.

2021ನೇ ಸಾಲಿನಲ್ಲಿ ಶೇ.100ರಷ್ಟು ವಿದ್ಯಾರ್ಥಿಗಳು ಪಾಸ್

2021ನೇ ಸಾಲಿನಲ್ಲಿ ಶೇ.100ರಷ್ಟು ವಿದ್ಯಾರ್ಥಿಗಳು ಪಾಸ್

ಕಳೆದ 2021ರಲ್ಲಿ ಕೇಂದ್ರ ಮಂಡಳಿ ಪರೀಕ್ಷೆಗಳನ್ನು ರದ್ದುಗೊಳಿಸುವುದರೊಂದಿಗೆ ಸುಮಾರು ಶೇ.100(99.98%)ರಷ್ಟು ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿತ್ತು. ಆದಾಗ್ಯೂ, 2020 ಮತ್ತು 2019ರಲ್ಲಿ ಸಿಬಿಎಸ್ಇಯಲ್ಲಿ 10ನೇ ತರಗತಿಯ ಫಲಿತಾಂಶಗಳಲ್ಲಿ ಉತ್ತೀರ್ಣತೆಯ ಪ್ರಮಾಣ ಶೇಕಡಾ 91ರಷ್ಟಿತ್ತು. ಈ ವರ್ಷ ಫಲಿತಾಂಶದ ಜೊತೆಗೆ ಎಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂಬುದನ್ನು ಪ್ರಕಟಿಸಲಾಗುತ್ತದೆ.

10ನೇ ತರಗತಿ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿ

10ನೇ ತರಗತಿ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಿ

ಸಿಬಿಎಸ್ಇ 10ನೇ ತರಗತಿ ಫಲಿತಾಂಶ 2022 ಬಿಡುಗಡೆಯಾದ ನಂತರ, ವಿದ್ಯಾರ್ಥಿಗಳು cbse.gov.in, cbseresults.nic.in ನಲ್ಲಿ ತಮ್ಮ ಫಲಿತಾಂಶಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಲು ಸಾಧ್ಯವಾಗುತ್ತದೆ. ಫಲಿತಾಂಶಗಳನ್ನು ಡಿಜಿಲಾಕರ್ - digilocker.gov.in ನಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ. digilocker.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. ಲಾಗಿನ್ ಪುಟದಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

ಆನ್‌ಲೈನ್‌ನಲ್ಲಿ ಫಲಿತಾಂಶ ಪರಿಶೀಲಿಸುವ ವಿಧಾನ

* cbseresults.nic.in ಲಿಂಕ್ ಓಪನ್ ಮಾಡಿರಿ

* ಮುಖಪುಟದಲ್ಲಿ ತೋರುವ 10ನೇ ತರಗತಿ ಅಥವಾ 12 ನೇ ತರಗತಿಯ ಫಲಿತಾಂಶ 2022 ಲಿಂಕ್ ಅನ್ನು ಕ್ಲಿಕ್ ಮಾಡಿ.

* ರೋಲ್ ಸಂಖ್ಯೆ, ಶಾಲೆಯ ಕೋಡ್, ಜನ್ಮ ದಿನಾಂಕದೊಂದಿಗೆ ಲಾಗಿನ್ ಆಗಿರಿ.

* ನಿಮ್ಮ ಮಾರ್ಕ್ಸ್ ಕಾರ್ಡ್ ತೆರೆದುಕೊಳ್ಳುತ್ತದೆ, ಅದರ ಒಂದು ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿರಿ.

ಎಸ್‌ಎಂಎಸ್ ಮೂಲಕ ಸಿಬಿಎಸ್‌ಇ ಫಲಿತಾಂಶ ಪಡೆಯಿರಿ

ಎಸ್‌ಎಂಎಸ್ ಮೂಲಕ ಸಿಬಿಎಸ್‌ಇ ಫಲಿತಾಂಶ ಪಡೆಯಿರಿ

ಸಿಬಿಎಸ್ಇ 10ನೇ ತರಗತಿಯ ಫಲಿತಾಂಶ 2022 ಬಿಡುಗಡೆ ನಂತರ, ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು cbse.gov.in ನಲ್ಲಿ ಆನ್‌ಲೈನ್‌ನಲ್ಲಿ ಪರಿಶೀಲಿಸಲು ಸಾಧ್ಯವಾಗುತ್ತದೆ. ಇದರ ಜೊತೆಗೆ ವಿದ್ಯಾರ್ಥಿಗಳು SMS ಮೂಲಕ ಫಲಿತಾಂಶವನ್ನು ಪರಿಶೀಲಿಸಲು ಸಾಧ್ಯವಿದೆ. ಎಸ್‌ಎಂಎಸ್ ಮೂಲಕ ಸಿಬಿಎಸ್‌ಇ ಫಲಿತಾಂಶಗಳನ್ನು ಹೇಗೆ ಪರಿಶೀಲಿಸುವ ವಿಧಾನವನ್ನು ಇಲ್ಲಿ ತಿಳಿಯಿರಿ.

* ನಿಮ್ಮ ಫೋನ್‌ನಲ್ಲಿ SMS ಅಪ್ಲಿಕೇಶನ್ ತೆರೆಯಿರಿ.

* cbse10 < ಸ್ಪೇಸ್ > ರೋಲ್ ಸಂಖ್ಯೆ ಅನ್ನು ಟೈಪ್ ಮಾಡಿರಿ.

* 7738299899 ಸಂಖ್ಯೆಗೆ ಈ ಸಂದೇಶವನ್ನು ಕಳುಹಿಸಿ.

* ನಿಮ್ಮ ಮೊಬೈಲ್ ಸಂಖ್ಯೆಗೆ ಸಿಬಿಎಸ್ಇ 10ನೇ ಫಲಿತಾಂಶ 2022 ಅನ್ನು SMS ಮೂಲಕ ಕಳುಹಿಸಲಾಗುತ್ತದೆ.

Recommended Video

ಬಸವರಾಜ್ ಬೊಮ್ಮಾಯಿ ಅವರು ಪಿಎಸ್‌ಐ ನೇಮಕಾತಿ ಬಗ್ಗೆ ಮಾತನಾಡಿದ್ದಾರೆ | Oneindia

English summary
Central Board of Secondary Education (CBSE) Class 10 Result 2022: Read here How to check marks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X