ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಸಿಬಿಎಸ್ಇ 10ನೇ ಮತ್ತು 12ನೇ ತರಗತಿ ಪರೀಕ್ಷೆ ರದ್ದು

|
Google Oneindia Kannada News

ದೆಹಲಿ, ಜೂನ್ 25: ಕೊರೊನಾ ವೈರಸ್ ಭೀತಿ ಹಿನ್ನೆಲೆ ಸಿಬಿಎಸ್ಇ ಪರೀಕ್ಷೆ ನಡೆಸದಿರಲು ಆಡಳಿತ ಮಂಡಳಿ ನಿರ್ಧರಿಸಿದೆ. ಈ ಕುರಿತು ಗುರುವಾರ ಸುಪ್ರೀಂಕೋರ್ಟ್‌ಗೆ ಕೇಂದ್ರೀಯ ಪ್ರೌಡ ಶಿಕ್ಷಣ ಮಂಡಳಿಯ (CBSE) ಮಾಹಿತಿ ನೀಡಿದೆ.

Recommended Video

SSLC Exam : ತಮಿಳುನಾಡು, ಆಂಧ್ರದಲ್ಲಿಲ್ಲ, ಕರ್ನಾಟಕದಲ್ಲೇಕೆ SSLC ಪರೀಕ್ಷೆ?| Oneindia Kannada

10ನೇ ತರಗತಿ ಪರೀಕ್ಷೆಯನ್ನು ಪೂರ್ಣ ಪ್ರಮಾಣದಲ್ಲಿ ರದ್ದುಗೊಳಿಸಲಾಗಿದೆ. 12ನೇ ತರಗತಿ ಪರೀಕ್ಷೆಯನ್ನು ತಾತ್ಕಲಿಕವಾಗಿ ರದ್ದು ಮಾಡಲಾಗಿದ್ದು, ಸಿಬಿಎಸ್ಇ ಆಡಳಿತ ಮಂಡಳಿ ಮುಂದೆ ಸುಪ್ರೀಂಕೋರ್ಟ್ ಎರಡು ಆಯ್ಕೆ ನೀಡಿದೆ. ಕೊರೊನಾ ಭೀತಿ ಎಲ್ಲವೂ ಕಡಿಮೆ ಆದ್ಮೇಲೆ ಪರೀಕ್ಷೆ ನಡೆಸುವುದಾದರೆ ಆಯೋಜಿಸಬಹುದು ಅಥವಾ ಈ ಹಿಂದಿನ ಪರೀಕ್ಷೆಗಳ ಆಧಾರದ ಮೇಲೆ ಗ್ರೇಡ್ ನೀಡಿ ತೇರ್ಗಡೆ ಮಾಡುವುದಾರೇ ಮಾಡಬಹುದು ಎಂದು ತಿಳಸಿದೆ.

ಜುಲೈ 1 ರಿಂದ ದೇಶಾದ್ಯಂತ ಸಿಬಿಎಸ್ಇ ಪರೀಕ್ಷೆ ಆರಂಭಜುಲೈ 1 ರಿಂದ ದೇಶಾದ್ಯಂತ ಸಿಬಿಎಸ್ಇ ಪರೀಕ್ಷೆ ಆರಂಭ

ಈ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಿ ಎಂದು ಸಿಬಿಎಸ್ಇ ಆಡಳಿತ ಮಂಡಳಿಗೆ ಕೋರ್ಟ್ ಸೂಚಿಸಿದೆ. ಇನ್ನು ಫಲಿತಾಂಶ ಯಾವಾಗ ಘೋಷಿಸಬೇಕು ಎಂಬುದರ ಕುರಿತು ನ್ಯಾಯಾಲಯ ನಿರ್ದೇಶಿಸಲು ಸಾಧ್ಯವಿಲ್ಲ. ಅದನ್ನು ಸಿಬಿಎಸ್ಇ ಪರಿಗಣಿಸಬೇಕು ಎಂದು ಸೂಚಿಸಿದೆ,

CBSE Class 10 Exams Cancelled, 12th Optional for Students, to Be Conducted When Conducive

ಅಂದ್ಹಾಗೆ, ಜುಲೈ 1 ರಿಂದ ಜುಲೈ 15ನೇ ತಾರೀಖಿನವರೆಗೂ ಸಿಬಿಎಸ್ಇ 10ನೇ ಮತ್ತು 12ನೇ ತರಗತಿ ಪರೀಕ್ಷೆ ನಡೆಸಲು ತೀರ್ಮಾನಿಸಿ ವೇಳಾಪಟ್ಟಿ ನಿಗಧಿ ಮಾಡಿತ್ತು. ಆರಂಭದಲ್ಲಿ ಮಾರ್ಚ್ 19 ರಿಂದ ಮಾರ್ಚ್ 31 ರವರೆಗಿನ ಪರೀಕ್ಷೆ ದಿನಾಂಕ ನಿಗದಿಯಾಗಿತ್ತು. ನಂತರ ಅದು ಏಪ್ರಿಲ್‌ಗೆ ಮುಂದೂಡಿಕೆಯಾಗಿತ್ತು. ಅದಾದ ಬಳಿಕ ಜುಲೈ 1ಕ್ಕೆ ಖಚಿತವಾಗಿತ್ತು.

ಇದಕ್ಕೂ ಮೊದಲು ದೆಹಲಿ, ಮಹಾರಾಷ್ಟ್ರ ಮತ್ತು ತಮಿಳುನಾಡು ಸಿಬಿಎಸ್ಇ ಪರೀಕ್ಷೆಗಳನ್ನು ನಡೆಸಲು ತಮ್ಮ ಅಸಾಮರ್ಥ್ಯವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿತ್ತು.

English summary
Exams for class X and XII scheduled for July 1-15 have been cancelled, CBSE tells supreme court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X