ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಎಸ್‌ಸಿ 10 ಮತ್ತು 12ನೇ ತರಗತಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

|
Google Oneindia Kannada News

ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು 2021ರ ಸಿಬಿಎಸ್‌ಸಿ 10 ಮತ್ತು 12ನೇ ತರಗತಿಗಳ ಪರೀಕ್ಷೆ ವೇಳಾಪಟ್ಟಿಯನ್ನು ಮಂಗಳವಾರ(ಫೆ.2)ದಂದು ಪ್ರಕಟಿಸಿದ್ದಾರೆ.

ಈಗಾಗಲೇ ಈ ಎರಡು ತರಗತಿಗಳ ಬೋರ್ಡ್ ಪರೀಕ್ಷೆ ವೇಳಾಪಟ್ಟಿ ಪ್ರಕಟವಾಗಿದೆ. ಸಿಬಿಎಸ್‌ಇ 10 ಮತ್ತು 12ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶವನ್ನು ಜುಲೈ 15ರ ಒಳಗೆ ಪ್ರಕಟಿಸಲಾಗುತ್ತದೆ. ಪ್ರಾಕ್ಟಿಕಲ್ ಪರೀಕ್ಷೆಗಳು ಮಾರ್ಚ್ 1ರಿಂದ ಆರಂಭವಾಗಲಿವೆ.

CBSE Class 10, 12 Exam 2021 Datesheet, Time Table Announced

ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳ ದಿನಾಂಕ ಪ್ರಕಟ: ಇಲ್ಲಿದೆ ವಿವರ ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳ ದಿನಾಂಕ ಪ್ರಕಟ: ಇಲ್ಲಿದೆ ವಿವರ

ದೇಶದಲ್ಲಿ ಕೊರೊನಾ ವೈರಸ್ ಪಿಡುಗಿನ ಕಾರಣ ಈ ಹಿಂದೆ ಸಿಬಿಎಸ್‌ಇ 10 ಮತ್ತು 12ನೇ ತರಗತಿಗಳ ಬೋರ್ಡ್ ಪರೀಕ್ಷೆಗಳನ್ನು ಶಿಕ್ಷಣ ಸಚಿವಾಲಯ ಮುಂದೂಡಿತ್ತು. ಸಾಮಾನ್ಯವಾಗಿ ಪ್ರತಿವರ್ಷ ಸಿಬಿಎಸ್‌ಇ ಪ್ರಾಕ್ಟಿಕಲ್ ಪರೀಕ್ಷೆಗಳು ಜನವರಿಯಲ್ಲಿ ನಡೆದರೆ, ಥಿಯರಿ ಪರೀಕ್ಷೆಗಳು ಫೆಬ್ರವರಿಯಲ್ಲಿ ಆರಂಭವಾಗಿ ಮಾರ್ಚ್‌ನಲ್ಲಿ ಮುಗಿಯುತ್ತಿದ್ದವು.

ಸಿಬಿಎಸ್‌ಇ 10 ಮತ್ತು 12ನೇ ತರಗತಿಗಳ ಬೋರ್ಡ್ ಪರೀಕ್ಷೆಗಳು ಆಫ್‌ಲೈನ್‌ನಲ್ಲಿ ನಡೆಯಲಿವೆ. ಅಂದರೆ ವಿದ್ಯಾರ್ಥಿಗಳು ಖುದ್ದು ಹಾಜರಾಗಿ ಪರೀಕ್ಷೆ ಬರೆಯಬೇಕಿದೆ. ಕೊರೊನಾ ವೈರಸ್ ಸೋಂಕಿನ ಹರಡುವಿಕೆ ಕಾರಣದಿಂದ ಪಠ್ಯಕ್ರಮದಲ್ಲಿ ಕಡಿತ ಮಾಡಲಾಗಿತ್ತು. ವೈರಸ್ ನಿಯಂತ್ರಣಕ್ಕಾಗಿ ಮಾರ್ಚ್‌ನಿಂದಲೂ ಭಾರತದಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ.

ಸಿಬಿಎಸ್‌ಇ 10 ಮತ್ತು 12ನೇ ತರಗತಿಗಳ ಪರೀಕ್ಷೆ ಮೇ 4 ರಿಂದ ಜೂನ್ 10ರ ತನಕ ನಡೆಯಲಿದ್ದು, ಸುಮಾರು 30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡಲು ಲಭ್ಯವಾಗುವ ಸಾಧ್ಯತೆಯಿದೆ. ಇನ್ನು ಡೇಟ್ ಶೀಟ್ ಡೌನ್ ಲೋಡ್ ಮಾಡಲು ಸಿಬಿಎಸ್ ಇ ಅಧಿಕೃತ ವೆಬ್ ತಾಣಕ್ಕೆ ಭೇಟಿ ನೀಡಿ ಲಾಗಿನ್ ಆದ ಬಳಿಕ classes 10, 12 datesheets ಕ್ಲಿಕ್ ಮಾಡಿ ಡೇಟ್ ಶೀಟ್ ಡೌನ್ ಲೋಡ್ ಮಾಡಿಕೊಳ್ಳಿ

English summary
CBSE Class 10, 12 Exam 2021 Datesheet, Time Table Announced by Education minister Ramesh Pokhriyal Nishank
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X