ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಎಸ್ಇ 10 ಹಾಗೂ 12 ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

|
Google Oneindia Kannada News

ನವದೆಹಲಿ, ಮೇ 18: ಸಿಬಿಎಸ್ಇ 10 ಹಾಗೂ 12 ತರಗತಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾಗಿದೆ.

ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಬಿಡುಗಡೆ ಮಾಡಿದ್ದಾರೆ. 10ನೇ ತರಗತಿ ಪರೀಕ್ಷೆ ಜುಲೈ 1ರಿಂದ ಜುಲೈ 15ರವರೆಗೆ ನಡೆಯಲಿದೆ. ಹಾಗೆಯೇ 12ನೇ ತರಗತಿ ಪರೀಕ್ಷೆಗಳು ಕೂಡ ಜುಲೈ 1 ರಿಂದ 15ರವರೆಗೆ ನಡೆಯಲಿದೆ.

ಜುಲೈ 1 ರಿಂದ ದೇಶಾದ್ಯಂತ ಸಿಬಿಎಸ್ಇ ಪರೀಕ್ಷೆ ಆರಂಭಜುಲೈ 1 ರಿಂದ ದೇಶಾದ್ಯಂತ ಸಿಬಿಎಸ್ಇ ಪರೀಕ್ಷೆ ಆರಂಭ

ದೇಶದಲ್ಲಿ ಕೊರೊನಾ ವೈರಸ್ ಲಗ್ಗೆ ಇಟ್ಟ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಗಲಾಟೆಯಿಂದಾಗಿ 12ನೇ ತರಗತಿ ಪರೀಕ್ಷೆ ಮುಂದೂಡಲಾಗಿತ್ತು.

ಸಿಬಿಎಸ್‌ಇ ಪರೀಕ್ಷೆ ಫಲಿತಾಂಶವು ಆಗಸ್ಟ್‌ನಲ್ಲಿ ಬರಲಿದೆ. ಕಳೆದ ವರ್ಷ ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಮೇ 2 ರಂದು ಪ್ರಕಟವಾಗಿತ್ತು. 10ನೇ ತರಗತಿ ಫಲಿತಾಂಶ ಮೇ 6 ರಂದು ಬಂದಿತ್ತು. ಸಿಬಿಎಸ್‌ಇ 12ನೇ ತರಗತಿಯಲ್ಲಿ ಶೇ. 83.4 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.

CBSE Class 10, 12 Datesheet For Remaining Papers Released

ಈ ಹಿಂದೆ ನಿಗದಿಯಾದಂತೆ ಮಾರ್ಚ್ 19 ರಿಂದ ಮಾರ್ಚ್ 31ರವರೆಗೂ ಸಿಬಿಎಸ್ಇ ಪರೀಕ್ಷೆಗಳು ನಡೆಯಬೇಕಿತ್ತು. ಈ ಮಧ್ಯೆ ಕೊರೊನಾ ವೈರಸ್‌ ಹರಡುವಿಕೆ ಹೆಚ್ಚಾದ ಕಾರಣ ಪರೀಕ್ಷೆಗಳನ್ನು ಮುಂದೂಡಿಕೆಯಾಗಿತ್ತು.

ಇನ್ನು ಈಶಾನ್ಯ ದೆಹಲಿಯ ಗಲಭೆ ಹಿನ್ನೆಲೆ ಅಲ್ಲಿನ ಆಯ್ದ ಪ್ರದೇಶಗಳಲ್ಲಿ ಬಾಕಿ ಉಳಿದಿದ್ದ ಪರೀಕ್ಷೆಯನ್ನು ಹೊರತುಪಡಿಸಿ, ದೇಶಾದ್ಯಂತ ಸಿಬಿಎಸ್ಇ 10ನೇ ಹಾಗೂ 12 ನೇ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಹೇಳಿದೆ.

ಇನ್ನುಳಿದಂತೆ ಜೆಇಇ (ಮೇನ್ಸ್) ಪರೀಕ್ಷೆಯನ್ನು ಜುಲೈ 18 ರಿಂದ ಜುಲೈ 23ರವರೆಗೂ ನಡೆಸುವುದಾಗಿ ಈಗಾಗಲೇ ಮಾನವ ಸಂಪನ್ಮೂಲ ಮತ್ತು ಅಭಿವೃದ್ದಿ ಇಲಾಖೆ ಘೋಷಿಸಿದೆ. ನೀಟ್‌ ಪರೀಕ್ಷೆಗಳನ್ನು ಜುಲೈ 26 ರಂದು ನಡೆಸಲು ತೀರ್ಮಾನಿಸಿದೆ.

10ನೇ ತರಗತಿಯಲ್ಲಿ ಶೇ.91.1ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಜುಲೈ 1 ರಿಂದ 15ರ ಒಳಗೆ ಪ್ರಮುಖ 29 ವಿಷಯಗಳಿಗೆ ಪರೀಕ್ಷೆ ನಡೆಯುತ್ತದೆ ಎಂದು ತಿಳಿಸಿತ್ತು ಈ ಬಾರಿ ಎರಡು ಬಾರಿ ಪರೀಕ್ಷೆನ್ನು ಮುಂದೂಡಲಾಗಿತ್ತು.

English summary
CBSE Class 10, 12 Datesheet For Remaining Papers Released,CBSE class 10 datesheet for the remaining board exam papers in schools in the northeast Delhi has been released by the Education Minister Ramesh Pokhriyal Nishank. The exams will be held from July 1 to July 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X