ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳ ದಿನಾಂಕ ಪ್ರಕಟ: ಇಲ್ಲಿದೆ ವಿವರ

|
Google Oneindia Kannada News

ನವದೆಹಲಿ, ಡಿಸೆಂಬರ್ 31: ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು 2021ರ ಸಿಬಿಎಸ್‌ಸಿ ತರಗತಿ 10 ಮತ್ತು 12ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ದಿನಾಂಕವನ್ನು ಪ್ರಕಟಿಸಿದ್ದಾರೆ. ಸಿಬಿಎಸ್‌ಸಿ 10 ಮತ್ತು 12ನೇ ತರಗತಿಗಳ ಬೋರ್ಡ್ ಪರೀಕ್ಷೆಗಳು ಮೇ 4ರಿಂದ ಆರಂಭವಾಗಲಿದೆ. ಪರೀಕ್ಷೆಗಳು ಜೂನ್ 10ರಂದು ಮುಕ್ತಾಯವಾಗಲಿವೆ ಎಂದು ಅವರು ಗುರುವಾರ ಮಾಹಿತಿ ನೀಡಿದ್ದಾರೆ.

ಸಿಬಿಎಸ್‌ಇ 10 ಮತ್ತು 12ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶವನ್ನು ಜುಲೈ 15ರ ಒಳಗೆ ಪ್ರಕಟಿಸಲಾಗುತ್ತದೆ. ಪ್ರಾಕ್ಟಿಕಲ್ ಪರೀಕ್ಷೆಗಳು ಮಾರ್ಚ್ 1ರಿಂದ ಆರಂಭವಾಗಲಿವೆ.

2021ರ ಮಾರ್ಚ್‌ ತಿಂಗಳಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ವಾರ್ಷಿಕ ಪರೀಕ್ಷೆ? 2021ರ ಮಾರ್ಚ್‌ ತಿಂಗಳಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ವಾರ್ಷಿಕ ಪರೀಕ್ಷೆ?

ದೇಶದಲ್ಲಿ ಕೊರೊನಾ ವೈರಸ್ ಪಿಡುಗಿನ ಕಾರಣ ಈ ಹಿಂದೆ ಸಿಬಿಎಸ್‌ಇ 10 ಮತ್ತು 12ನೇ ತರಗತಿಗಳ ಬೋರ್ಡ್ ಪರೀಕ್ಷೆಗಳನ್ನು ಶಿಕ್ಷಣ ಸಚಿವಾಲಯ ಮುಂದೂಡಿತ್ತು. ಸಾಮಾನ್ಯವಾಗಿ ಪ್ರತಿವರ್ಷ ಸಿಬಿಎಸ್‌ಇ ಪ್ರಾಕ್ಟಿಕಲ್ ಪರೀಕ್ಷೆಗಳು ಜನವರಿಯಲ್ಲಿ ನಡೆದರೆ, ಥಿಯರಿ ಪರೀಕ್ಷೆಗಳು ಫೆಬ್ರವರಿಯಲ್ಲಿ ಆರಂಭವಾಗಿ ಮಾರ್ಚ್‌ನಲ್ಲಿ ಮುಗಿಯುತ್ತಿದ್ದವು. ಈ ಬಾರಿ ಮೂರು ತಿಂಗಳು ತಡವಾಗಿ ಪರೀಕ್ಷೆಗಳು ನಡೆಯುತ್ತಿವೆ. ಮುಂದೆ ಓದಿ.

ಜನವರಿ, ಫೆಬ್ರವರಿಯಲ್ಲಿ ಯಾವುದೇ ಬೋರ್ಡ್ ಪರೀಕ್ಷೆಗಳಿಲ್ಲ: ರಮೇಶ್ ಪೋಖ್ರಿಯಾಲ್ ಜನವರಿ, ಫೆಬ್ರವರಿಯಲ್ಲಿ ಯಾವುದೇ ಬೋರ್ಡ್ ಪರೀಕ್ಷೆಗಳಿಲ್ಲ: ರಮೇಶ್ ಪೋಖ್ರಿಯಾಲ್

ಆಫ್‌ಲೈನ್‌ನಲ್ಲಿ ಲಿಖಿತ ಪರೀಕ್ಷೆ

ಆಫ್‌ಲೈನ್‌ನಲ್ಲಿ ಲಿಖಿತ ಪರೀಕ್ಷೆ

ಸಿಬಿಎಸ್‌ಇ 10 ಮತ್ತು 12ನೇ ತರಗತಿಗಳ ಬೋರ್ಡ್ ಪರೀಕ್ಷೆಗಳು ಆಫ್‌ಲೈನ್‌ನಲ್ಲಿ ನಡೆಯಲಿವೆ. ಅಂದರೆ ವಿದ್ಯಾರ್ಥಿಗಳು ಖುದ್ದು ಹಾಜರಾಗಿ ಪರೀಕ್ಷೆ ಬರೆಯಬೇಕಿದೆ. ಕೊರೊನಾ ವೈರಸ್ ಸೋಂಕಿನ ಹರಡುವಿಕೆ ಕಾರಣದಿಂದ ಪಠ್ಯಕ್ರಮದಲ್ಲಿ ಕಡಿತ ಮಾಡಲಾಗಿತ್ತು. ವೈರಸ್ ನಿಯಂತ್ರಣಕ್ಕಾಗಿ ಮಾರ್ಚ್‌ನಿಂದಲೂ ಭಾರತದಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ.

ಶಿಕ್ಷಕರ ಶ್ಲಾಘನೆ

ಶಿಕ್ಷಕರ ಶ್ಲಾಘನೆ

ಪರೀಕ್ಷೆಯು ಶೇ 33ರಷ್ಟು ಆಂತರಿಕ ಆಯ್ಕೆಯನ್ನು ಒಳಗೊಂಡಿರಲಿದೆ. ಶೇ 30ರಷ್ಟು ಸಿಲಬಸ್ ಕಡಿತ ಮಾಡಲಾಗಿದೆ. ಸಾಂಕ್ರಾಮಿಕದ ಕಾರಣದಿಂದ ಪ್ರಾಕ್ಟಿಕಲ್ ಪರೀಕ್ಷೆಗಳಿಗೆ ಪರ್ಯಾಯ ಆಯ್ಕೆಗಳನ್ನು ಪರಿಗಣಿಸಬಹುದು ಎಂದು ಸಚಿವರು ತಿಳಿಸಿದ್ದಾರೆ. ಕಠಿಣ ಪರಿಶ್ರಮ ಪಟ್ಟಿರುವುದಕ್ಕೆ ಮತ್ತು ಬೋಧನೆಯ ಹೊಸ ತಂತ್ರಜ್ಞಾನ ಹಾಗೂ ಮಾದರಿಗಳನ್ನು ಅಳವಡಿಸಿಕೊಂಡ ಶಿಕ್ಷಕರನ್ನು ಅವರು ಶ್ಲಾಘಿಸಿದ್ದಾರೆ.

ಪೂರ್ವ ಪರೀಕ್ಷೆಗಳ ಮೂಲಕ ಸಜ್ಜು

ಪೂರ್ವ ಪರೀಕ್ಷೆಗಳ ಮೂಲಕ ಸಜ್ಜು

ಬೋರ್ಡ್ ಪರೀಕ್ಷೆಗಳ ದಿನಾಂಕದ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಅನೇಕ ಶಾಲೆಗಳು ಈಗಾಗಲೇ ಮಂಡಳಿ ಪೂರ್ವ ಪರೀಕ್ಷೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸುತ್ತಿವೆ. ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ನೀಡಿದ ಸಲಹೆಗಳನ್ನು ಪರಿಗಣಿಸಿ ಸಿಬಿಎಸ್‌ಇ ಪರೀಕ್ಷೆ ದಿನಾಂಕವನ್ನು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಫಲಿತಾಂಶದ ಮಾದರಿ ಬದಲಾಗಿತ್ತು

ಫಲಿತಾಂಶದ ಮಾದರಿ ಬದಲಾಗಿತ್ತು

2020ರ ಸಿಬಿಎಸ್‌ಇ ಪರೀಕ್ಷೆಗಳು ಮಾರ್ಚ್‌ನಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿಯೇ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಹೆಚ್ಚಿದ್ದರಿಂದ ಪರೀಕ್ಷೆಯನ್ನು ಮುಂದೂಡುವಂತಾಗಿತ್ತು. ಕೊನೆಗೆ ಪರೀಕ್ಷೆಗಳು ರದ್ದುಗೊಂಡು, ಪರ್ಯಾಯ ಮೌಲ್ಯನಿರ್ಣಯ ಮಾದರಿಯಲ್ಲಿ ಫಲಿತಾಂಶಗಳನ್ನು ಪ್ರಕಟಿಸಲಾಗಿತ್ತು.

English summary
Education Minister announces dates of CBSE board exams 2021. Exams from May 4th to June 10. Practical exams will be held from March 1. Check it out.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X