ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛೋಟಾ ರಾಜನ್ ವಿರುದ್ಧ ಹೊಸ ಮೂರು ಕೇಸು ದಾಖಲು

|
Google Oneindia Kannada News

ನವದೆಹಲಿ, ಜನವರಿ 23: ಭೂಗತ ಪಾತಕಿ ಛೋಟಾ ರಾಜನ್ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಮೂರು ಹೊಸ ಪ್ರಕರಣಗಳನ್ನು ದಾಖಲಿಸಲಾಗಿದೆ.

ಮಹಾರಾಷ್ಟ್ರ ಹಾಗೂ ಕೇಂದ್ರ ಸರ್ಕಾರದ ಮನವಿಯ ಮೇರೆಗೆ ಕೆಲವಾರು ಪ್ರಕರಣಗಳ ವರದಿಯನ್ನಾಧರಿಸಿ ರಾಜನ್ ವಿರುದ್ಧ ಕೊಲೆ ಹಾಗೂ ಸುಲಿಗೆ ಪ್ರಕರಣಗಳನ್ನು ದಾಖಲಿಸಲಾಗಿದೆ.

CBI registers three fresh cases involving Chhota Rajan

2015ರಲ್ಲಿ ಇಂಡೋನೇಷ್ಯಾದಿಂದ ಗಡೀಪಾರು ಶಿಕ್ಷೆಗೆ ಒಳಗಾದ ನಂತರ ಛೋಟಾ ರಾಜನ್ ಅವರನ್ನು ಭಾರತೀಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಗಿನಿಂದ ಈವರೆಗೂ ಅವರು ಭಾರತದಲ್ಲೇ ವಿಚಾರಣೆ ಎದುರಿಸುತ್ತಿದ್ದಾರೆ.

ಇದೀಗ, ಅವರ ವಿರುದ್ಧ ದಾಖಲಾಗಿರುವ ಮೂರು ಹೊಸ ಪ್ರಕರಣಗಳ ಬಗ್ಗೆ ವಿವರಣೆ ನೀಡಿರುವ ಸಿಬಿಐ ವಕ್ತಾರ ಆರ್. ಕೆ. ಗೌರ್, "ಸುಲಿಗೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮುಂಬೈನ ನಿರ್ಮಲ್ ನಗರ ಪೊಲೀಸ್ ಠಾಣೆಯಲ್ಲಿ 1999ರ ಏಪ್ರಿಲ್ 1ರಂದು ದಾಖಲಾಗಿತ್ತು. ಮತ್ತೆರಡು ಕೊಲೆ ಪ್ರಕರಣಗಳು, ಮುಂಬೈನ ತಿಲಕ್ ನಗರದಲ್ಲಿ 1998ರ ಅಕ್ಟೋಬರ್ 7ರಂದು ಹಾಗೂ 2004ರ ಜುಲೈ 31ರಂದು ದಾಖಲಾಗಿದ್ದವು ಎಂದು ತಿಳಿಸಿದರು.

English summary
CBI has taken over investigation in three cases of alleged murder and extortion, purportedly masterminded by gangster Chhota Rajan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X