ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೋಫೋರ್ಸ್ ಹಗರಣ ತನಿಖೆ ಇಲ್ಲ: ಕಾಂಗ್ರೆಸ್ಸಿಗೆ ಖುಷಿ, ಬಿಜೆಪಿಗೆ ದುಃಖ

|
Google Oneindia Kannada News

ನವದೆಹಲಿ, ನವೆಂಬರ್ 02: ಬಹುಕೋಟಿ ಬೋಫೋರ್ಸ್ ಫಿರಂಗಿ ಹಗರಣಕ್ಕೆ ಸಂಬಂಧಿಸಿದಂತೆ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು(ನವೆಂಬರ್ 02) ತಿರಸ್ಕರಿಸಿದೆ.

ಬೋಫೋರ್ಸ್ ಹಗರಣದಲ್ಲಿ ಸಿಲುಕಿದ್ದ ಕಾಂಗ್ರೆಸ್ ನಾಯಕರ ವಿರುದ್ಧದ ದೋಷಾರೋಪಣ ಪಟ್ಟಿಯನ್ನು ವಜಾಗೊಳಿಸಿ ಹೈಕೋರ್ಟ್ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ, ಈ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ, ಸುಪ್ರೀಂಕೋರ್ಟಿಗೆ ಸಿಬಿಐ ಮೇಲ್ಮನವಿ ಸಲ್ಲಿಸಿತ್ತು.

ಭಾರತೀಯ ಸೇನೆಗಾಗಿ ಫಿರಂಗಿ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ವಿರುದ್ಧವೂ ಚಾರ್ಜ್ ಶೀಟ್ ಹಾಕಲಾಗಿತ್ತು.

ಬೋಫೋರ್ಸ್ ಪ್ರಕರಣ ಮರು ತನಿಖೆಗೆ ಮುಂದಾದ ಸಿಬಿಐಬೋಫೋರ್ಸ್ ಪ್ರಕರಣ ಮರು ತನಿಖೆಗೆ ಮುಂದಾದ ಸಿಬಿಐ

ರಾಜೀವ್ ಗಾಂಧಿ ಅವರು ದೇಶದ ಪ್ರಧಾನಿಯಾಗಿದ್ದಾಗ ಈ ಬೋಫೋರ್ಸ್ ಹಗರಣ ನಡೆದಿರುವ ಬಗ್ಗೆ ಈಗಾಗಲೇ ಅನೇಕ ವರದಿಗಳು ಬಂದಿವೆ. ಸ್ವೀಡನ್ ನಿಂದ ಬೋಫೋರ್ಸ್ ಎಂಬ ಫಿರಂಗಿಗಳನ್ನು ಭಾರತೀಯ ಸೇನೆಗಾಗಿ ಕೊಳ್ಳುವ ವ್ಯವಹಾರದಲ್ಲಿ ದೊಡ್ಡ ಭ್ರಷ್ಟಾಚಾರವಾಗಿತ್ತೆಂಬ ಆರೋಪಗಳು ಕೇಳಿಬಂದಿದ್ದವು. ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಆಗಿನ ಕಾಲದಲ್ಲಿ ದೊಡ್ಡ ಮಟ್ಟದ ಹಗರಣದ ಅಲೆ ಎಬ್ಬಿಸಿದ ಪ್ರಕರಣವಿದು.

ಬೋಫೋರ್ಸ್ ಹಗರಣ ಎಂದರೇನು?

ಬೋಫೋರ್ಸ್ ಹಗರಣ ಎಂದರೇನು?

* 1980 ರಿಂದ 1990ರ ದಶಕಗಳಲ್ಲಿ ಭಾರತ ಹಾಗೂ ಸ್ವೀಡನ್ ನಡುವೆ ಶಸ್ತ್ರಾಸ್ತ್ರ ಖರೀದಿ ಸಂದರ್ಭದಲ್ಲಾದ ಅವ್ಯವಹಾರ.
* ಆಂದಿನ ಪ್ರಧಾನಿ ರಾಜೀವ್ ಗಾಂಧಿ ಸೇರಿದಂತೆ ಅನೇಕ ರಾಜಕೀಯ ಮುಖಂಡರ ಮೇಲೆ ಲಂಚ ಪಡೆದ ಆರೋಪ.
* ಸುಮಾರು 1.3 ಬಿಲಿಯನ್ ಯುಎಸ್ ಡಾಲರ್ ಒಪ್ಪಂದ ಇದಾಗಿದ್ದು, ಸ್ವೀಡನ್ನಿನ ಬೋಫೋರ್ಸ್ ಕಂಪನಿ ಹಾಗೂ ಭಾರತ ಸರ್ಕಾರ ನಡುವೆ ಡೀಲ್.
* ಸ್ವೀಡನ್ ನಡೆಸಿದ ಅತ್ಯಂತ ದೊಡ್ಡ ಡೀಲ್ ಇದಾಗಿದ್ದು, ಭಾರತಕ್ಕೆ ಸುಮಾರು 410ಕ್ಕೂ ಅಧಿಕ ಫಿರಂಗಿಗಳು ರವಾನೆಯಾಗಿತ್ತು.

ರಾಜೀವ್ ಗಾಂಧಿಗೆ ಬಿಸಿ ಮುಟ್ಟಿಸಿದ ಹಗರಣ

ರಾಜೀವ್ ಗಾಂಧಿಗೆ ಬಿಸಿ ಮುಟ್ಟಿಸಿದ ಹಗರಣ

* 1989ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಬೋಫೋರ್ಸ್ ಹಗರಣ ಕಾರಣವಾಯಿತು.

* ರಾಜೀವ್ ಸೇರಿ ಭಾರತದ ರಾಜಕಾರಣಿಗಳಿಗೆ 640 ಮಿಲಿಯನ್ ದುಡ್ಡು ಸಿಕ್ಕಿದೆ ಎಂಬ ಆರೋಪ

* ವಿಪಿ ಸಿಂಗ್ ಅವರು ರಕ್ಷಣಾ ಸಚಿವರಾಗಿದ್ದ ಕಾಲದಲ್ಲಿ ಹಗರಣ ಬೆಳಕಿಗೆ ಬಂದಿತು.

* ರಾಜೀವ್ ಗಾಂಧಿ ಗೌರವ ಕಾಪಾಡಲು ಹಗರಣ ಮುಚ್ಚಿಡಲಾಯಿತು ಎಂದ ವಿಪಿ ಸಿಂಗ್ ಅವರು ಕಾಂಗ್ರೆಸ್ ಹಾಗೂ ಸಂಸದ್ ಸ್ಥಾನ ತ್ಯಜಿಸಬೇಕಾಯಿತು.

ಹಗರಣದ ಪ್ರಮುಖ ಆರೋಪಿಗಳು ಯಾರು?

ಹಗರಣದ ಪ್ರಮುಖ ಆರೋಪಿಗಳು ಯಾರು?

* ಸ್ವೀಡನ್ ಹಾಗೂ ಭಾರತದ ನಡುವೆ ಡೀಲ್ ಕುದುರಿಸಲು ಬಂದ ಮಧ್ಯವರ್ತಿ ಇಟಲಿ ಮೂಲದ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿ ಪ್ರಮುಖ ಆರೋಪಿ.

* 1999ರಲ್ಲಿ ಕ್ವಟ್ರೋಚಿ, ವಿನ್ ಛಡ್ಡಾ, ರಾಜೀವ್ ಗಾಂಧಿ, ರಕ್ಷಣಾ ಕಾರ್ಯದರ್ಶಿ ಎಸ್ ಕೆ ಭಟ್ನಾಗರ್ ಇನ್ನಿತರರ ವಿರುದ್ಧ ಸಿಬಿಐ ಚಾರ್ಜ್ ಶೀಟ್ ಹಾಕಿತ್ತು.

* 2002ರಲ್ಲಿ ದೆಹಲಿ ಹೈಕೋರ್ಟ್ ನಿಂದ ಪ್ರಕರಣದ ವಿಚಾರಣೆ ರದ್ದು. * 2003ರಲ್ಲಿ ಸುಪ್ರೀಂಕೋರ್ಟಿನಿಂದ ಮತ್ತೆ ವಿಚಾರಣೆ.

* 2003ರಲ್ಲಿ ಸುಪ್ರೀಂಕೋರ್ಟಿನಿಂದ ಮತ್ತೆ ವಿಚಾರಣೆ.

* ಅರ್ಜೆಂಟೀನಾದಲ್ಲಿದ್ದ ಕ್ವಟ್ರೋಚಿಯನ್ನು ಭಾರತಕ್ಕೆ ಕರೆ ತರುವ ಪ್ರಯತ್ನ ವಿಫಲ.

* 2011ರಲ್ಲಿ ಆರೋಪ ಮುಕ್ತನಾದ ಕ್ವಟ್ರೋಚಿ 2013ರಲ್ಲಿ ಮಿಲಾನ್ ನಲ್ಲಿ ಅಸುನೀಗಿದ.

ತನಿಖೆಗೆ ಮರು ಜೀವ ಯತ್ನ ಏಕೆ?

ತನಿಖೆಗೆ ಮರು ಜೀವ ಯತ್ನ ಏಕೆ?

* ಹಗರಣ ಬೆಳಕಿಗೆ ಬಂದ ಮೇಲೆ ಬೋಫೋರ್ಸ್ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿತ್ತು. 1999ರಲ್ಲಿ ಪಟ್ಟಿಯಿಂದ ಮುಕ್ತಗೊಳಿಸಲಾಯಿತು.

* ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಬೋಫೋರ್ಸ್ ಗನ್ ಹಾಗೂ ಫಿರಂಗಿಗಳನ್ನು ಯಥೇಚ್ಛವಾಗಿ ಬಳಸಲಾಯಿತು.

* ಇಂಟರ್ ಪೋಲ್ ನಿಂದಲೂ ರೆಡ್ ಕಾರ್ನರ್ ನೋಟಿಸ್ ಪಡೆದಿದ್ದ ಇಟಲಿ ಮೂಲದ ವ್ಯಾಪಾರಿ ಒಟ್ಟಾವಿಯೋ ಕ್ವಟ್ರೋಚಿ ಎಲ್ಲಾ ಆರೋಪಗಳಿಂದ ಮುಕ್ತರಾದರು.

2011ರಲ್ಲಿ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಕ್ವಟ್ರೋಚಿಯ ಹೆಸರನ್ನು ಪ್ರಕರಣದಿಂದ ಹೈಕೋರ್ಟ್ ಕೈಬಿಟ್ಟಿತ್ತು.

* 2019ರ ಮಹಾ ಚುನಾವಣೆಗೆ ಅಖಾಡ ಸಿದ್ಧವಾಗುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಈಗ ಕಾಂಗ್ರೆಸ್ ಗೆ ಕಂಟಕಪ್ರಾಯವಾಗಬಹುದಾದ ಬೋಫೋರ್ಸ್ ಹಗರಣವನ್ನು ಮತ್ತೆ ಕೆದಕಿದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಿಂದ ಕೇಳಿ ಬಂದಿದೆ.

English summary
The Supreme Court Friday dismissed a plea filed by the Central Bureau of Investigation against a high court that had quashed charges against all people accused in the high-profile Bofors scandal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X