ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐ ಈಗ ಬಿಜೆಪಿ ಬ್ಯುರೋ ಆಫ್ ಇನ್ವೆಸ್ಟಿಗೇಷನ್: ಮಮತಾ ವ್ಯಂಗ್ಯ

|
Google Oneindia Kannada News

ಕೋಲ್ಕತ್ತಾ, ಅಕ್ಟೋಬರ್ 24: ಸೆಂಟ್ರಲ್ ಬ್ಯುರೋ ಇನ್ವೆಸ್ಟಿಗೇಷನ್ ಈಗ ಬಿಜೆಪಿ ಬ್ಯುರೋ ಆಫ್ ಇನ್ವೆಸ್ಟಿಗೇಷನ್ ಆಗಿದೆ ಎಂದು ಹೇಳುವ ಮೂಲಕ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸದ್ಯಕ್ಕೆ ಭಾರೀ ಚರ್ಚೆ ಆಗುತ್ತಿರುವ ಸಿಬಿಐ ವಿವಾದಕ್ಕೆ ಸಂಬಂಧಿಸಿದಂತೆ ಕಿಚ್ಚು ಹೊತ್ತಿಸಿದ್ದಾರೆ.

"ಸಿಬಿಐ ಈಗ ಬಿಬಿಐ (ಬಿಜೆಪಿ ಬ್ಯುರೋ ಆಫ್ ಇನ್ವೆಸ್ಟಿಗೇಷನ್) ಆಗಿದೆ- ಇದು ತೀರಾ ದುರದೃಷ್ಟಕರ!" ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

ಕೋಲ್ಕತ್ತಾದ ಸಂತ್ರಗಚಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಇಬ್ಬರು ಸಾವು ಕೋಲ್ಕತ್ತಾದ ಸಂತ್ರಗಚಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಇಬ್ಬರು ಸಾವು

ಲಂಚ ಸ್ವೀಕರಿಸಿದ ಆರೋಪ ಕೇಳಿ ಬರುತ್ತಿದ್ದು, ಸಿಬಿಐ ನಿರ್ದೇಶಕ ಅಲೋಕ್ ವರ್ಮಾರನ್ನು ರಜಾದ ಮೇಲೆ ತೆರಳುವಂತೆ ನರೇಂದ್ರ ಮೋದಿ ಸರಕಾರ ಬುಧವಾರದಂದು ಸೂಚನೆ ನೀಡಿದೆ. ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಮತ್ತು ಅಲೋಕ್ ವರ್ಮಾ ಮಧ್ಯೆ ಲಂಚ ಸ್ವೀಕರಿಸಿದ ಆರೋಪ ವಿಚಾರದಲ್ಲಿ ತಿಕ್ಕಾಟ ಶುರುವಾಗಿತ್ತು.

CBI has become BJP bureau of investigation, said Mamata Banerjee

ಸದ್ಯಕ್ಕೆ ಜಂಟಿ ನಿರ್ದೇಶಕ ಎಂ.ನಾಗೇಶ್ವರ್ ರಾವ್ ಅವರಿಗೆ ಸರಕಾರ ಸೂಚನೆ ನೀಡಿದ್ದು, ಸಿಬಿಐ ನಿರ್ದೇಶಕರ ಕಾರ್ಯ ನಿರ್ವಹಣೆ ಹಾಗೂ ಕರ್ತವ್ಯ ನಿರ್ವಹಿಸಲು ಸೂಚನೆ ನೀಡಲಾಗಿದೆ.

ಚಿತ್ರಗಳು : ಸಾಂತ್ರಗಚಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಚಿತ್ರಗಳು : ಸಾಂತ್ರಗಚಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ

ಈ ವಿಚಾರ ಈಗ ಭಾರೀ ಚರ್ಚೆಗೆ ಕಾರಣವಾಗಿದ್ದು, ವಿರೋಧ ಪಕ್ಷಗಳು ಆಡಳಿತಾರೂಢ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿವೆ.

English summary
Commenting on the ongoing CBI controversy, West Bengal Chief Minister Mamata Banerjee on Wednesday renamed the central investigation agency as the "BJP Bureau of Investigation".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X