ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎನ್‌ಬಿ ಹಗರಣ: ನೀರವ್ ಸಹೋದರ ನೇಹಾಲ್ ಮೋದಿಯ ಜಾಡು ಹಿಡಿದ ಸಿಬಿಐ

|
Google Oneindia Kannada News

ನವದೆಹಲಿ, ಮಾರ್ಚ್ 27: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಪಲಾಯನಗೈದಿರುವ ನೀರವ್ ಮೋದಿಯನ್ನು ಲಂಡನ್‌ನಿಂದ ಭಾರತಕ್ಕೆ ಗಡಿಪಾರು ಮಾಡಿಸುವ ಪ್ರಯತ್ನದಲ್ಲಿರುವ ತನಿಖಾ ಸಂಸ್ಥೆಗಳು, ಈಗ ಇದೇ ಪ್ರಕರಣದ ಮತ್ತೊಬ್ಬ ಆರೋಪಿ ನೇಹಾಲ್ ಮೋದಿಯನ್ನು ಭಾರತಕ್ಕೆ ಗಡಿಪಾರು ಮಾಡಿಸುವ ಪ್ರಕ್ರಿಯೆ ಆರಂಭಿಸಿವೆ.

ವಜ್ರದ ವ್ಯಾಪಾರಿ ನೀರವ್ ಮೋದಿಯ ಸಹೋದರ ನೇಹಾಲ್ ಮೋದಿ, ಬೆಲ್ಜಿಯಂ ಪ್ರಜೆಯಾಗಿದ್ದು, ಈಗ ಅಮೆರಿಕದಲ್ಲಿ ನೆಲೆಸಿದ್ದಾನೆ ಎಂದು ಸಿಬಿಐ ಹೇಳಿದೆ. ಅಮೆರಿಕದ ನ್ಯಾಯಾಲಯವೊಂದರಲ್ಲಿ ನೇಹಾಲ್ ವಿರುದ್ಧ ವಂಚನೆ ಪ್ರಕರಣವೊಂದು ದಾಖಲಾದ ಬಳಿಕವೇ ಆತ ಅಮೆರಿಕದಲ್ಲಿ ಇರುವುದು ತನಿಖಾ ಸಂಸ್ಥೆಗೆ ಗೊತ್ತಾಗಿದೆ. ಈ ಮಾಹಿತಿ ದೊರಕುತ್ತಿದ್ದಂತೆಯೇ ನೇಹಾಲ್‌ನನ್ನು ಗಡಿಪಾರು ಮಾಡುವ ಪ್ರಕ್ರಿಯೆಗೆ ಸೂಕ್ತ ಮಾರ್ಗಗಳಡಿ ಕ್ರಮಗಳನ್ನು ಆರಂಭಿಸಲಾಗಿದೆ.

ಮಲ್ಯ, ಮೋದಿ ಎಲ್ಲರೂ ಭಾರತಕ್ಕೆ ವಾಪಸ್ ಬರುತ್ತಿದ್ದಾರೆ: ನಿರ್ಮಲಾಮಲ್ಯ, ಮೋದಿ ಎಲ್ಲರೂ ಭಾರತಕ್ಕೆ ವಾಪಸ್ ಬರುತ್ತಿದ್ದಾರೆ: ನಿರ್ಮಲಾ

2019ರಲ್ಲಿ ನೇಹಾಲ್ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ನೇಹಾಲ್‌ನನ್ನು ಭಾರತಕ್ಕೆ ಗಡಿಪಾರು ಮಾಡುವ ಸಂಬಂಧ ಭಾರತ ಸರ್ಕಾರದಿಂದ ಅಮೆರಿಕಕ್ಕೆ ಮನವಿ ಸಲ್ಲಿಸಲು ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಸಿಬಿಐ ಶುಕ್ರವಾರ ಅಫಿಡವಿಟ್ ಸಲ್ಲಿಸಿದೆ.

CBI Found Nehal Modi Living In US, Initiated Extradite Process In PNB Scam

ಪಿಎನ್‌ಬಿ ವಂಚನೆ ಹಗರಣದಲ್ಲಿ ನೇಹಾಲ್ ಮೋದಿಯನ್ನು ಆರೋಪಿ ಎಂದು ಸಿಬಿಐ ಮತ್ತು ಇಡಿ ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡಿವೆ. ತನಿಖಾ ಸಂಸ್ಥೆಗಳ ಪ್ರಕಾರ, ಪ್ರಮುಖ ಪುರಾವೆಯಾಗಬಹುದಾಗಿದ್ದ ವಿದ್ಯುನ್ಮಾನ ಉಪಕರಣಗಳನ್ನು ನೇಹಾಲ್ ಮೋದಿ ನಾಶಪಡಿಸಿದ್ದಾನೆ.

English summary
PNB Scam case: CBI has initiated the process to extradite Nirav Modi's brother Nehal Modi from United states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X